Sunday, December 22, 2024
HomeState Newsನಿರುಪಯುಕ್ತ ಕೊಳವೆಬಾವಿ ಮುಚ್ಚದಿದ್ದರೆ Jail; ಮಸೂದೆಗೆ ಅಂಗೀಕಾರ.!
spot_img

ನಿರುಪಯುಕ್ತ ಕೊಳವೆಬಾವಿ ಮುಚ್ಚದಿದ್ದರೆ Jail; ಮಸೂದೆಗೆ ಅಂಗೀಕಾರ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಉಪಯೋಗವಿಲ್ಲದ ಕೊಳವೆ ಬಾವಿಗಳನ್ನು ಮುಚ್ಚದೆ ಇದ್ದಲ್ಲಿ ಒಂದು ವರ್ಷ ಜೈಲು (One year in jail) ಹಾಗೂ 25 ಸಾವಿರ ದಂಡ ವಿಧಿಸುವ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣ (Development and management exchange and control) ಅಧಿನಿಯಮ 2011 ಮತ್ತು ನಿಯಮಾವಳಿ 2012ಕ್ಕೆ ತಿದ್ದುಪಡಿಯನ್ನು ವಿಧಾನಸಭೆ ಧ್ವನಿಮತದಿಂದ (By voice) ಅಂಗೀಕರಿಸಿತು.

ಸಚಿವ ಭೋಸರಾಜು ಅವರು ಮಂಡಿಸಿದ ಮಸೂದೆಗೆ ವಿಧಾನ ಸಭೆ ಅಸ್ತು ಎಂದಿತು.

ಇದನ್ನು ಓದಿ : ಪ್ರಪಂಚದಾದ್ಯಂತ ಪ್ರತಿ ವರ್ಷ ಸ್ಟ್ರೋಕ್ ನಿಂದ 50 ಲಕ್ಷಕ್ಕೂ ಅಧಿಕ ಮಂದಿ ಸಾವು : WHO.!

ಈ ಮಸೂದೆಯ ಉದ್ದೇಶ, ಸಣ್ಣ ಮಕ್ಕಳು ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪುವ ಅಥವಾ ಜೀವನ್ಮರಣ ಹೋರಾಟ ನಡೆಸುವ ಪ್ರಕರಣಗಳನ್ನು ತಪ್ಪಿಸುವುದಾಗಿದೆ.

ಕೊಳವೆ ಬಾವಿ (tube well) ಕೊರೆಯಲು ಇಚ್ಛಿಸುವವರು ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರಗಳಿಗೆ 15 ದಿನಗಳಿಗಿಂತ ಮುಂಚೆ ಮಾಹಿತಿ (Give information before 15 days) ನೀಡಬೇಕು. ಕೊಳವೆ ಬಾವಿಗಳನ್ನು ಡ್ರಿಲ್ಲಿಂಗ್‌ ಏಜೆನ್ಸಿ ಮತ್ತು ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳು ಕಬ್ಬಿಣದ ಮುಚ್ಚಳ (Iron lid) ಹಾಕಿ ಮುಚ್ಚಬೇಕು.

ಕೊಳವೆ ಬಾವಿ ಕೊರೆದ 24 ತಾಸುಗಳ ಒಳಗೆ ಮುಚ್ಚಿರುವ ಬಗ್ಗೆ ಫೋಟೋ ತೆಗೆದು ಸುರಕ್ಷಿತವಾಗಿ ಮುಚ್ಚಿರುವುದನ್ನು ಅಧಿಕಾರಿಗಳು ತಪಾಸಣೆ (inspection) ಮಾಡಿ ದೃಢೀಕರಿಸಬೇಕು (confirm).

ಇದನ್ನು ಓದಿ : ಶಬರಿಮಲೆ ದೇವಸ್ಥಾನದಲ್ಲಿಯೇ ಕರ್ನಾಟಕದ ಭಕ್ತ ಆತ್ಮಹತ್ಯೆ ; ಶಾಕಿಂಗ್ Video ವೈರಲ್.!

ಕೊಳವೆ ಬಾವಿ ಕೊರೆಯುವ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ 15 ದಿನ ಮುಂಚಿತವಾಗಿ ಮಾಹಿತಿ ನೀಡದಿದ್ದರೆ, ಡ್ರಿಲ್ಲಿಂಗ್‌ ಏಜೆನ್ಸಿ/ ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳಿಗೆ (Drilling Agency/ Implementing Agency) 5 ಸಾವಿರ ರೂ. ಜುಲ್ಮಾನೆ ಹಾಗೂ 3 ತಿಂಗಳ ಸಜೆ ವಿಧಿಸಲಾಗುವುದು.

ಒಂದು ವೇಳೆ ಕೊಳವೆ ಬಾವಿಗಳನ್ನು ಮುಚ್ಚದೆ ಇದ್ದಲ್ಲಿ ಡ್ರಿಲ್ಲಿಂಗ್‌ ಏಜೆನ್ಸಿ ಹಾಗೂ ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳಿಗೆ 25 ಸಾವಿರ ದಂಡ ಹಾಗೂ 1 ವರ್ಷಗಳ ಜೈಲು ಶಿಕ್ಷೆ (25 thousand fine and 1 year imprisonment) ವಿಧಿಸುವುದನ್ನು ಈ ಮಸೂದೆ ಒಳಗೊಂಡಿದೆ.

ಹಿಂದಿನ ಸುದ್ದಿ : ಶಬರಿಮಲೆ ದೇವಸ್ಥಾನದಲ್ಲಿಯೇ ಕರ್ನಾಟಕದ ಭಕ್ತ ಆತ್ಮಹತ್ಯೆ ; ಶಾಕಿಂಗ್ ವೈರಲ್ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಶಬರಿಮಲೆಯಲ್ಲಿ ಕರ್ನಾಟಕದ (Karnataka) ಭಕ್ತರೊಬ್ಬರು ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ ಹಾರಿ ಆತ್ಮಹತ್ಯೆಗೆ ಶರಣಾದ (suicide attempt) ಘಟನೆ ಸೋಮವಾರ ತಡರಾತ್ರಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಸಾವಿಗೀಡಾದ ಅಯ್ಯಪ್ಪ ಸ್ವಾಮಿಯ ಭಕ್ತ ಕರ್ನಾಟಕದ ಕನಕಪುರದ (Kanakapur) ನಿವಾಸಿ ಕುಮಾರಸ್ವಾಮಿ (40) ಎಂದು ತಿಳಿದು ಬಂದಿದೆ.

ಇದನ್ನು ಓದಿ : Prostitution : ವೇಶ್ಯೆವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಐವರು ಮಹಿಳೆಯರ ರಕ್ಷಣೆ.!

ಶಬರಿಮಲೆಯಲ್ಲಿ ಎಲ್ಲ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಭಕ್ತನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ (Hall of ghee anointing counters) ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಭಕ್ತ ಶಬರಿಮಲೆಯ ತುಪ್ಪದ ಅಭಿಷೇಕ ಕೌಂಟರ್ ಗಳ ಮಂಟಪದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದಾಗ ಅಲ್ಲಿದ್ದವರು ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ (local hospital) ಕರೆದೊಯ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಕುಮಾರಸ್ವಾಮಿ ಖಿನ್ನತೆಯಿಂದ (depression) ಬಳಲುತ್ತಿದ್ದು, ಈ ಹಿನ್ನೆಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments