Sunday, December 22, 2024
HomeBelagavi Newsತಾಕತ್ತಿದ್ದರೆ ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರು, ಸಚಿವರನ್ನು ವಜಾ ಮಾಡಿ ; ಸ್ವಾಮೀಜಿ.!
spot_img

ತಾಕತ್ತಿದ್ದರೆ ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರು, ಸಚಿವರನ್ನು ವಜಾ ಮಾಡಿ ; ಸ್ವಾಮೀಜಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಬೆಳಗಾವಿ : ನಿಮಗೆ ತಾಕತ್ ಇದ್ದರೆ 2A ಮೀಸಲಾತಿಗೆ ಆಗ್ರಹಿಸಿ ನಮ್ಮ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರ (Congress MLA) ನ್ನು ವಜಾ ಮಾಡಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಂತ ಹೇಳಿ ನೋಡೋಣ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸವಾಲು (challenged) ಹಾಕಿದರು.

ಅವರು ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ, ಹೋರಾಟದಲ್ಲಿ ಕಾರ್ಯದರ್ಶಿ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಬಾಬಾಸಾಹೇಬ ಪಾಟೀಲ, ರಾಜು ಕಾಗೆ, ಚನ್ನರಾಜ್ ಹಟ್ಟಿಹೊಳಿ ಭಾಗವಹಿಸಿದ್ದರು. ನಮ್ಮ ಹೋರಾಟ ಸಂವಿಧಾನ ವಿರೋಧಿ (struggle is against the Constitution) ಎಂದು ಹೇಳುವ ನೀವು ಅವರ ವಿರುದ್ಧ ಕ್ರಮ ಕೈಗೊಳ್ಳಿ ನೋಡೋಣ ಎಂದು CM ಸಿದ್ದರಾಮಯ್ಯಗೆ ಸವಾಲು ಹಾಕಿದರು.

ಇದನ್ನು ಓದಿ : Awareness : ಅಪ್ರಾಪ್ತರಿಗೆ ಬೈಕ್‌ ಕೊಡತ್ತೀರಾ.? ಹಾಗಾದ್ರೆ ಈ ಸುದ್ದಿ ಓದಿ.!

ನಮ್ಮ ಹೋರಾಟ ಸಂವಿಧಾನದ ವಿರುದ್ಧವಾಗಿದ್ದರೆ ಪ್ರತಿಭಟನೆಗೆ ಏಕೆ ಅವಕಾಶ (allow the protest) ನೀಡಿದ್ದೀರಿ? ಬಸವಣ್ಣ ಅವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ್ದೀರಿ. ಆದರೆ, ನಮ್ಮ ಸಮಾಜವನ್ನು ಅವಮಾನಿಸುವ ಮೂಲಕ ಬಸವಣ್ಣನವರನ್ನು ಅವಮಾನಿಸಿದ್ದೀರಿ. ಲಿಂಗಾಯತರ ಆತ್ಮಗೌರವಕ್ಕೆ ಧಕ್ಕೆ ತರಲು ಯತ್ನಿಸಿದ್ದೀರಿ. ನಾಲ್ಕು ವರ್ಷಗಳ ಕಾಲ ಶಾಂತಿಯುತವಾಗಿ ಹೋರಾಟ ನಡೆಸಿದ್ದರೂ ಈಗ ಸರ್ಕಾರ ಚನ್ನಮ್ಮನ ನಾಡಿನಲ್ಲಿ ಕ್ರಾಂತಿ (revolutionized Channamma’s land) ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ನಮ್ಮ ಸಮಾಜದ ಬಗ್ಗೆ ಕಾಳಜಿ ಇಲ್ಲದಿದ್ದರೆ ಮೀಸಲಾತಿ (reservation) ಕೊಡಲು ಸಾಧ್ಯವಿಲ್ಲ ಎಂದು ಹೇಳಬೇಕಾಗಿತ್ತು. ನಮ್ಮ ಹೋರಾಟ ಸಂವಿಧಾನದ ವಿರುದ್ಧ ಎಂಬ ನಿಮ್ಮ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾಗಿದೆ. ಆ ಹೇಳಿಕೆಯನ್ನು ಸದನದ ಕಡತದಿಂದ ತೆಗೆದುಹಾಕಬೇಕು. ಸಮಾಜದ ಕ್ಷಮೆ ಯಾಚಿಸಿ (Apologize to the society),’’ ಎಂದು ಆಗ್ರಹಿಸಿದರು.

ಇದನ್ನು ಓದಿ : ಕರ್ನಾಟಕ ಪೊಲೀಸರ ಕೈಗೆ ಸಿಕ್ಕಿಬಿದ್ದ Goa ಪೊಲೀಸ್ ಅಧಿಕಾರಿ.!

ಪಂಚಮಸಾಲಿ ಕಾರ್ಯಕರ್ತರ ಮೇಲಿನ ಮಾರಣಾಂತಿಕ ಹಲ್ಲೆ (deadly attack) ಹಾಗೂ ಮುಖ್ಯಮಂತ್ರಿಗಳ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಡಿ.16ರಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ (District Collector’s office) ಬಳಿ ಧರಣಿ ನಡೆಸುತ್ತೇನೆ ಎಂದರು. ಪ್ರತಿ ಜಿಲ್ಲೆಯ ಸಾಮಾಜಿಕ ಮುಖಂಡರು ಪ್ರತಿದಿನ ನನ್ನೊಂದಿಗೆ ಸೇರಿಕೊಳ್ಳುತ್ತಾರೆ.

ಕೊರಟಗೆರೆಯಲ್ಲಿ ಲಿಂಗಾಯತರು ಪ್ರತಿಭಟಿಸಲಿ : ಲಾಠಿ ಚಾರ್ಜ್ ಸಮರ್ಥಿಸಿಕೊಂಡ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ವಿರುದ್ಧ ಮೃತ್ಯುಂಜಯ ಸ್ವಾಮೀಜಿ ವಾಗ್ದಾಳಿ ನಡೆಸಿದರಲ್ಲದೇ, ನೀವು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಓದಿ ಬೆಳೆದಿದ್ದೀರಿ, ನಮ್ಮ ಮೇಲಿನ ಹಲ್ಲೆಯನ್ನು ಸಮರ್ಥಿಸಿಕೊಂಡಿರುವುದು ಎಷ್ಟು ಸರಿ. ಇದು ಸಿದ್ದಗಂಗಾ ಮಠಕ್ಕೆ ಮಾಡಿದ ಅವಮಾನ ಎಂದರು. ಲಿಂಗಾಯತರು ಕೊರಟಗೆರೆಯಲ್ಲಿ ಪ್ರತಿಭಟನೆ (Lingayats to protest in Koratagere) ನಡೆಸಬೇಕು” ಎಂದು ಕರೆ ನೀಡಿದರು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments