ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಯುಗದಲ್ಲಿ ಸರ್ಕಾರಿ ಕಚೇರಿಗಳಲ್ಲಿ (government office) ಸರ್ವರ್ ಡೌನ್ ಅಂತೇಳಿ ಕಾಯಿಸುವುದನ್ನು ನೋಡಬಹುದು. ಇದೇ ರೀತಿ ವೃದ್ಧರನ್ನು (the elderly) ಕಾಯಿಸಿದ ತಪ್ಪಿಗೆ ಸಿಬ್ಬಂದಿಗೆ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಯನ್ನು ಕೊಟ್ಟ ಅಪರೂಪದ ಘಟನೆ ನಡೆದಿದೆ.
ಕೌಂಟರ್ ಗಳಲ್ಲಿ ಬಹಳ ಹೊತ್ತಿನವರೆಗೆ ಜನರನ್ನು ಕಾಯಿಸುತ್ತಿದ್ದುದನ್ನು ಕಂಡು ಕೋಪಗೊಂಡ ವಸತಿ ಇಲಾಖೆಯ ಸಿಇಒ ಡಾ. ಲೋಕೇಶ್ ಎಂ (Housing Department CEO Dr. Lokesh M) 16 ಸಿಬ್ಬಂದಿಗಳಿಗೆ ನಿಂತು ಕೊಳ್ಳುವ ಶಿಕ್ಷೆ (punishment) ವಿಧಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಉದ್ಯೋಗ ನೇಮಕಾತಿ ಪರೀಕ್ಷೆಯಲ್ಲಿ ಚಮತ್ಕಾರ ; 100 ಅಂಕಗಳಿಗೆ 101.66 ಅಂಕ ಪಡೆದ ಅಭ್ಯರ್ಥಿ.!
IAS ಅಧಿಕಾರಿ ಡಾ. ಲೋಕೇಶ್ ಎಂ. ಅವರು ಕಳೆದ ವರ್ಷ ನೊಯ್ಡಾದಲ್ಲಿ (Noida) ಅಧಿಕಾರ ಸ್ವೀಕರಿಸಿದ್ದರು. ಅವರು ಆಗಾಗ ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲಿಸುತ್ತಿದ್ದರು.
ಈ ವೇಳೆ ಕೌಂಟರ್ ಗಳ ಬಳಿ ಜನರು ಬಹಳ ಹೊತ್ತು ಕಾಯುತ್ತಿರುವುದನ್ನು (Waiting for a long time) ಗಮನಿಸಿದ್ದರು. ಮುಖ್ಯವಾಗಿ ಹಿರಿಯ ನಾಗರಿಕರು ಕಾಯುತ್ತ ನಿಂತಿರುವುದನ್ನು ಗಮನಿಸಿದ್ದರು.
ಇದನ್ನು ಓದಿ : ವೇಗವಾಗಿ ಬಂದು ಡಿಕ್ಕಿಯಾದ ಪೊಲೀಸ್ ಜೀಪ್; ಮುಂದೆನಾಯ್ತು? ಆಘಾತಕಾರಿ Video ನೋಡಿ.!
ವಯಸ್ಸಾದ ವ್ಯಕ್ತಿಯನ್ನು ಹೆಚ್ಚು ಹೊತ್ತು ಕಾಯಿಸಬೇಡಿ ಎಂದು ಕೌಂಟರ್‌ನಲ್ಲಿದ್ದ ಮಹಿಳಾ ಅಧಿಕಾರಿಗೆ ತಿಳಿಸಿದ್ದಾರೆ. ಅವರ ಕೆಲಸ ಮಾಡಲಾಗದೇ ಇದ್ದರೆ ಅದನ್ನು ಆ ವ್ಯಕ್ತಿಗೆ ಸ್ಪಷ್ಟವಾಗಿ ಹೇಳುವಂತೆ ಸೂಚನೆ ನೀಡಿದರು.
ಬಳಿಕವೂ ಆ ವೃದ್ಧ ಅದೇ ಕೌಂಟರ್ ಎದುರು ನಿಂತಿದ್ದನ್ನು ಗಮನಿಸಿದ ಅಧಿಕಾರಿ ಕೋಪಗೊಂಡು ಸ್ವತಃ ಕೌಂಟರ್ ಬಳಿಗೆ ಬಂದು ಸಿಬ್ಬಂದಿಗಳಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರು.
ಇದನ್ನು ಓದಿ : CM ವಿರುದ್ಧ ಮುಡಾ ಹಗರಣ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ.!
ಅಷ್ಟೇ ಅಲ್ಲದೇ ಸಿಬ್ಬಂದಿಗಳಿಗೆ 20 ನಿಮಿಷಗಳ ಕಾಲ ನಿಂತೇ ಇರುವ ಶಿಕ್ಷೆ ವಿಧಿಸಿದರು. ನಿಂತುಕೊಂಡೇ ಕೆಲಸ ಮಾಡಿ ಎಂದು ಶಿಕ್ಷೆ ನೀಡಿದ್ದು, ವಿಡಿಯೋ ವೈರಲ್ ಆಗಿದೆ. ಸಿಇಒ ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ :
Video: Noida CEO punishes employees by making them stand for 20 minutes over elderly man’s wait.
.
.
.#NoidaCEO #punish #IASofficer pic.twitter.com/XeYRbfyf9Z— Republic News Bytes (@RNewsBytes) December 17, 2024
ಹಿಂದಿನ ಸುದ್ದಿ : ವೇಶ್ಯೆವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಐವರು ಮಹಿಳೆಯರ ರಕ್ಷಣೆ.!
ಜನಸ್ಪಂದನ ನ್ಯೂಸ್, ಮೈಸೂರು : ವೇಶ್ಯೆವಾಟಿಕೆ ನಡೆಸುತ್ತಿದ್ದ ಇಬ್ಬರನ್ನೂ ಬಂಧಿಸಿದ ಪೊಲೀಸ್ ಐವರು ಮಹಿಳೆಯರನ್ನು ರಕ್ಷಣೆ ಮಾಡಿದ ಘಟನೆ ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣೆಯ (Hebbalu Police Station) ಬಳಿ ಬಸವನಗುಡಿ ವೃತ್ತದ ಮನೆಯೊಂದರಲ್ಲಿ ನಡೆದಿದೆ.
ಇನ್ನೂ ಈ ಐವರು ಮಹಿಳೆಯರು ಮೈಸೂರು, ಹಾಸನ, ಕೆ.ಆರ್ ನಗರ (Mysore, Hassan, K. R. Nagar) ಮೂಲದವರಾಗಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ.
ಒಡನಾಡಿ ಸಂಸ್ಥೆ ಮುಖ್ಯಸ್ಥ (Head of the organization) ಸ್ಟ್ಯಾನ್ಲಿ ಪರುಶು ಅವರು ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಇದನ್ನು ಓದಿ : ನಿರುಪಯುಕ್ತ ಕೊಳವೆಬಾವಿ ಮುಚ್ಚದಿದ್ದರೆ Jail; ಮಸೂದೆಗೆ ಅಂಗೀಕಾರ.!
ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಈ ವೇಳೆ ವೇಶ್ಯಾವಾಟಿಕೆ (Prostitution) ನಡೆಸುತ್ತಿದ್ದ ಮಹಿಳೆ ಮತ್ತು ಓರ್ವ ಗ್ರಾಹಕನನ್ನು ಅರೆಸ್ಟ್ ಮಾಡಲಾಗಿದೆ.
ಹೆಬ್ಬಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.