Sunday, December 22, 2024
HomeCrime NewsTriangle Love story : ಪ್ರಿಯಕರನಿಗಾಗಿ ನದಿ ಪಾಲಾದ ಗೃಹಿಣಿ ; ನೇಣಿಗೆ ಶರಣಾದ ಪ್ರಿಯಕರ.!
spot_img

Triangle Love story : ಪ್ರಿಯಕರನಿಗಾಗಿ ನದಿ ಪಾಲಾದ ಗೃಹಿಣಿ ; ನೇಣಿಗೆ ಶರಣಾದ ಪ್ರಿಯಕರ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಮಂಡ್ಯ : ಮಂಡ್ಯ ಜಿಲ್ಲೆಯ ಮದ್ದೂರು (Maddur in Mandya district) ತಾಲ್ಲೂಕಿನಲ್ಲಿ ತ್ರಿಕೋನ ಪ್ರೇಮ ಕಥೆಯಲ್ಲಿ ಲವರ್‌ಗಾಗಿ ಗೃಹಿಣಿ (house wife) ನದಿಗೆ ಹಾರಿದ್ದು, ಈ ವಿಷಯ ತಿಳಿದು ಪ್ರಿಯಕರ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಸೃಷ್ಟಿ (20) ಎಂಬ ಗೃಹಿಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆ, ಬನ್ನಹಳ್ಳಿ ಗ್ರಾಮದ ಪ್ರಸನ್ನ (25) ನೇಣಿಗೆ ಶರಣಾಗಿದ್ದಾನೆ (Surrender to the hanging) ಎಂದು ತಿಳಿದು ಬಂದಿದೆ.

ಇದನ್ನು ಓದಿ : ವೃದ್ದರನ್ನು ಬಹಳ ಹೊತ್ತು ಕಾಯಿಸಿದ ಅಧಿಕಾರಿಗಳಿಗೆ ನಿಂತು ಕೆಲಸ ಮಾಡುವ ಶಿಕ್ಷೆ ನೀಡಿದ IAS ಆಫೀಸರ್.!

ಕೆಲ ವರ್ಷಗಳಿಂದ ಪ್ರಸನ್ನ ಹಾಗೂ ಸೃಷ್ಟಿ ಲವ್ ಮಾಡುತ್ತಿದ್ದರು. ಈ ಮಧ್ಯೆ ಪ್ರಸನ್ನ ಸೃಷ್ಟಿಯ ಸ್ನೇಹಿತೆ ಸ್ಪಂದನಾಳನ್ನು ಪ್ರೀತಿಸಲು ಶುರು ಮಾಡಿದ. ಸೃಷ್ಟಿ ಹಾಗೂ ಸ್ಪಂದನಾ ಇಬ್ಬರು ಕ್ಲಾಸ್ ಮೇಟ್ಸ್. ವಿಪರ್ಯಾಸವೆಂದರೆ ಪ್ರಸನ್ನ ಸೃಷ್ಟಿಯನ್ನು ಪ್ರೀತಿಸುತ್ತಿದ್ದ ವಿಚಾರ ಸ್ಪಂದನಾಗೆ ತಿಳಿದಿರಲಿಲ್ಲ. ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸನ್ನ ಆತ್ಮಹತ್ಯೆಗೂ ಯತ್ನಿಸಿದ್ದ ಎನ್ನಲಾಗಿದೆ.

ಬಳಿಕ ಪ್ರಸನ್ನ ಮತ್ತು ಸ್ಪಂದನಾ ಮದುವೆಯಾದರು. ಇತ್ತ ದಿನೇಶ್ ಎಂಬಾತನೊಂದಿಗೆ ಸೃಷ್ಟಿಯ ಮದುವೆ ನಡೆದಿತ್ತು.

ಪ್ರಸನ್ನ ಹಾಗೂ ಸೃಷ್ಟಿ ಬೇರೆ ಬೇರೆ ಮದುವೆಯಾಗಿದ್ದರೂ ಸಹ ಇಬ್ಬರ ನಡುವೆ ಮಾತುಕತೆ ನಡೆಯುತ್ತಿತ್ತು. ಈ ವಿಚಾರವಾಗಿ ಸೃಷ್ಟಿ ಹಾಗೂ ಪತಿ ದಿನೇಶ್ ನಡುವೆ ಆಗಾಗ ಜಗಳ ಆಗುತ್ತಿತ್ತು. ಡಿ.11 ರಂದು ಪತಿ ಮನೆಯಿಂದ ಸೃಷ್ಟಿ ನಾಪತ್ತೆಯಾಗಿದ್ದಳು (missing). ಪತ್ನಿ ನಾಪತ್ತೆ ಬೆನ್ನಲ್ಲೇ ದಿನೇಶ್‌ ಕೆಸ್ತೂರು ಪೊಲೀಸ್‌ ಠಾಣೆಯಲ್ಲಿ (Kestur Police Station) ನಾಪತ್ತೆ ದೂರು ದಾಖಲಿಸಿದ್ದರು.

ಇದನ್ನು ಓದಿ : ವೇಗವಾಗಿ ಬಂದು ಡಿಕ್ಕಿಯಾದ ಪೊಲೀಸ್ ಜೀಪ್; ಮುಂದೆನಾಯ್ತು? ಆಘಾತಕಾರಿ Video ನೋಡಿ.!

ಡಿ.16 ರಂದು ಶಿಂಷಾ ನದಿಯಲ್ಲಿ (Shinsha River) ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಅದರಂತೆ ಈ ಶವ ಯಾರದ್ದೂ ಎಂದು ಪೊಲೀಸ್ ಪರಿಶೀಲನೆ ನಡೆಸಿದಾಗ ನಾಪತ್ತೆಯಾದ ಸೃಷ್ಟಿಯದ್ದೇ ಎನ್ನುವುದು ದೃಢಪಟ್ಟಿದೆ (confirm). ಈ ವಿಷಯ ಗೊತ್ತಾಗಿ ಪ್ರಸನ್ನ ವಿಚಲಿತಗೊಂಡು ತನ್ನ ಮನೆಯಲ್ಲಿ ‌ನೇಣಿಗೆ ಶರಣಾಗಿದ್ದಾನೆ. ಈ ಮೂಲಕ ವಿಚಿತ್ರ ತ್ರಿಕೋನ ಪ್ರೇಮ ಕಥೆ (triangular love story) ಇಬ್ಬರ ಸಾವಿನಲ್ಲಿ ಕೊನೆಗೊಂಡಿದೆ.

ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

ಹಿಂದಿನ ಸುದ್ದಿ : ವೃದ್ಧರನ್ನು ಕಾಯುವಂತೆ ಮಾಡಿದ ಅಧಿಕಾರಿಗಳಿಗೆ ನಿಂತುಕೊಂಡು ಕೆಲಸ ಮಾಡುವ ಶಿಕ್ಷೆ; ಹೃದಯ ಗೆದ್ದ IAS ಅಧಿಕಾರಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಯುಗದಲ್ಲಿ ಸರ್ಕಾರಿ ಕಚೇರಿಗಳಲ್ಲಿ (government office) ಸರ್ವರ್​ ಡೌನ್​ ಅಂತೇಳಿ ಕಾಯಿಸುವುದನ್ನು ನೋಡಬಹುದು. ಇದೇ ರೀತಿ ವೃದ್ಧರನ್ನು (the elderly) ಕಾಯಿಸಿದ ತಪ್ಪಿಗೆ ಸಿಬ್ಬಂದಿಗೆ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಯನ್ನು ಕೊಟ್ಟ ಅಪರೂಪದ ಘಟನೆ ನಡೆದಿದೆ.

ಇದನ್ನು ಓದಿ : ಉದ್ಯೋಗ ನೇಮಕಾತಿ ಪರೀಕ್ಷೆಯಲ್ಲಿ ಚಮತ್ಕಾರ ; 100 ಅಂಕಗಳಿಗೆ 101.66 ಅಂಕ ಪಡೆದ ಅಭ್ಯರ್ಥಿ.!

ಕೌಂಟರ್ ಗಳಲ್ಲಿ ಬಹಳ ಹೊತ್ತಿನವರೆಗೆ ಜನರನ್ನು ಕಾಯಿಸುತ್ತಿದ್ದುದನ್ನು ಕಂಡು ಕೋಪಗೊಂಡ ವಸತಿ ಇಲಾಖೆಯ ಸಿಇಒ ಡಾ. ಲೋಕೇಶ್ ಎಂ (Housing Department CEO Dr. Lokesh M) 16 ಸಿಬ್ಬಂದಿಗಳಿಗೆ ನಿಂತು ಕೊಳ್ಳುವ ಶಿಕ್ಷೆ (punishment) ವಿಧಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

IAS ಅಧಿಕಾರಿ ಡಾ. ಲೋಕೇಶ್ ಎಂ ಅವರು ಕಳೆದ ವರ್ಷ ನೊಯ್ಡಾದಲ್ಲಿ (Noida) ಅಧಿಕಾರ ಸ್ವೀಕರಿಸಿದ್ದರು. ಅವರು ಆಗಾಗ ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲಿಸುತ್ತಿದ್ದರು.

ಈ ವೇಳೆ ಕೌಂಟರ್ ಗಳ ಬಳಿ ಜನರು ಬಹಳ ಹೊತ್ತು ಕಾಯುತ್ತಿರುವುದನ್ನು (Waiting for a long time) ಗಮನಿಸಿದ್ದರು. ಮುಖ್ಯವಾಗಿ ಹಿರಿಯ ನಾಗರಿಕರು ಕಾಯುತ್ತ ನಿಂತಿರುವುದನ್ನು ಗಮನಿಸಿದ್ದರು.

ಇದನ್ನು ಓದಿ : ಪ್ರಪಂಚದಾದ್ಯಂತ ಪ್ರತಿ ವರ್ಷ ಸ್ಟ್ರೋಕ್ ನಿಂದ 50 ಲಕ್ಷಕ್ಕೂ ಅಧಿಕ ಮಂದಿ ಸಾವು : WHO.!

ವಯಸ್ಸಾದ ವ್ಯಕ್ತಿಯನ್ನು ಹೆಚ್ಚು ಹೊತ್ತು ಕಾಯಿಸಬೇಡಿ ಎಂದು ಕೌಂಟರ್‌ನಲ್ಲಿದ್ದ ಮಹಿಳಾ ಅಧಿಕಾರಿಗೆ ತಿಳಿಸಿದ್ದಾರೆ. ಅವರ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ ಅದನ್ನು ಆ ವ್ಯಕ್ತಿಗೆ ಸ್ಪಷ್ಟವಾಗಿ ಹೇಳಿ ಎಂದು ಸೂಚನೆ ನೀಡಿದರು.

ಬಳಿಕವೂ ಆ ವೃದ್ಧ ಅದೇ ಕೌಂಟರ್ ಎದುರು ನಿಂತಿದ್ದನ್ನು ಗಮನಿಸಿದ ಅಧಿಕಾರಿ ಕೋಪಗೊಂಡು ಸ್ವತಃ ಕೌಂಟರ್ ಬಳಿಗೆ ಬಂದು ಸಿಬ್ಬಂದಿಗಳಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರು.

ಅಷ್ಟೇ ಅಲ್ಲದೇ ಸಿಬ್ಬಂದಿಗಳಿಗೆ 20 ನಿಮಿಷಗಳ ಕಾಲ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಿದರು. ನಿಂತುಕೊಂಡೇ ಕೆಲಸ ಮಾಡಿ‌ ಎಂದು ಶಿಕ್ಷೆ ನೀಡಿದ್ದು, ವಿಡಿಯೋ ವೈರಲ್ ಆಗಿದೆ. ಸಿಇಒ ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments