ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯದಲ್ಲಿ ಮಾ.29ರಿಂದ ಮುಂದಿನ 6 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶುಕ್ರವಾರದಂದು (ಮಾ.28) ಕೊಡಗು ಸೇರಿದಂತೆ ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಇದನ್ನು ಓದಿ : Lokayukta ಬಲೆಗೆ ಬಿದ್ದ ಮಾಹಿತಿ ಆಯೋಗದ ಆಯುಕ್ತ.!
ಶನಿವಾರದಿಂದ ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಕೆಲವೆಡೆಯೂ ಮಳೆಯಾಗುವ ಸಂಭವವಿದೆ.
ಅಲ್ಲದೆ, ಶನಿವಾರದಿಂದ ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳು ಮಳೆಯಾಗಲಿದೆ.
ಇದನ್ನು ಓದಿ : Video : ಮೈಮೇಲೆ ಪ್ರಜ್ಞೆಯಿಲ್ಲದಂತೆ ಕುಣಿಯುತ್ತ ಡ್ಯಾನ್ಸರ್ಗೆ ಹಣ ಕೊಟ್ಟ ಬಾಲಕ.!
ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಉಳಿದ ಭಾಗಗಳಲ್ಲಿ ಒಣ ಹವಾಮಾನ ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನು ಓದಿ : Video : ಕಾಡು ಪ್ರಾಣಿಗಳು ಮೊದಲ ಬಾರಿ ಕನ್ನಡಿ ನೋಡಿದಾಗ ಹೇಗೆ ವರ್ತಿಸುತ್ತವೆ ಗೊತ್ತಾ.?
ಇನ್ನು ಮುಂದಿನ 5 ದಿನಗಳಲ್ಲಿ ಉತ್ತರ ಒಳನಾಡಿನಲ್ಲಿ 2 ರಿಂದ 4 ಹಾಗೂ ದಕ್ಷಿಣ ಒಳನಾಡಿನಲ್ಲಿ 2 ರಿಂದ 3ರಷ್ಟು ಉಷ್ಣಾಂಶ ದಾಖಲಾಗಲಿದೆ.
ಧಾರವಾಡ, ಗದಗ ಸೇರಿ ಕೆಲ ಜಿಲ್ಲೆಗಳಲ್ಲಿ ಏಪ್ರಿಲ್ 2ರವರೆಗೂ ಸಾಧಾರಣ ಮಳೆ ಮುಂದುವರಿಯುವ ಸಂಭವವಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಹಿಂದಿನ ಸುದ್ದಿ : ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ Yoga ಶಿಕ್ಷಕನನ್ನು ಪತಿ ಮಾಡಿದ್ದೇನು ಗೊತ್ತೇ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯೋಗ ಶಿಕ್ಷಕನನ್ನು ಜೀವಂತವಾಗಿ ಸಮಾಧಿ ಮಾಡಿದ ಘಟನೆ ಚರ್ಕಿ ದಾದ್ರಿ (Charki Dadri) ಯಲ್ಲಿ ನಡೆದಿದೆ.
ಜಗದೀಪ್ ಎಂಬ ವ್ಯಕ್ತಿ ರೋಹ್ಟಕ್‌ನ ಖಾಸಗಿ (Rohtak Private) ವಿವಿಯೊಂದರಲ್ಲಿ ಯೋಗ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಯೋಗ ಶಿಕ್ಷಕ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ (illicit relationship) ಹೊಂದಿದ್ದಾನೆಂದು ಆತನನ್ನು ಅಪಹರಿಸಿ ಏಳು ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂಳಿದ್ದಾನೆ.
ಇದನ್ನು ಓದಿ : ಹಲ್ಲುನೋವು, ಹಲ್ಲು ಹುಳುಕಿಗೆ ಪವರ್‌ಫುಲ್ ಮನೆ ಮದ್ದು; ತಯಾರಿಸುವುದು Very Simple.!
ಈ ಕೃತ್ಯ ನಡೆದ ಮೂರು ತಿಂಗಳ ನಡೆದಿದ್ದು, ಇದೀಗ ಅಂದರೆ ಮಾರ್ಚ್ 24 ರಂದು ಪೊಲೀಸರು ಶವವನ್ನು ಹೊರ ತೆಗೆದು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಜಗದೀಪ್ (Jagdeep) ಎಂದಿನಂತೆ ಡಿಸೆಂಬರ್ 24 ರಂದು ಸಹ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಆತನನ್ನು ಅಪಹರಿಸಲಾಯಿತು. ಈ ವೇಳೆ ಕೂಗಾಡದಂತೆ ಜಗದೀಪ್ ಬಾಯಿಗೆ ಟೇಪ್ ಸುತ್ತಿ ಕೈಕಾಲುಗಳನ್ನು ಕಟ್ಟಿ ಹಾಕಲಾಗಿತ್ತು.
ಇದನ್ನು ಓದಿ : ಹೆದ್ದಾರಿಯಲ್ಲಿ ಅಪಘಾತಗೊಂಡವರಿಗೆ ಸಹಾಯ ಮಾಡಿದರೆ ರೂ. 25,000 ಬಹುಮಾನ : ಸಚಿವ ಗಡ್ಕರಿ.!
ಅಪಹರಣ ಮಾಡಿದ ನಂತರ ಆತನನ್ನು ನಿರ್ಜನವಾದ (deserted) ಹೊಲಕ್ಕೆ ಕರೆದೊಯ್ದು, ಮೊದಲೇ ಅಲ್ಲಿ ತೋಡಲಾದ ಆಳವಾದ ಗುಂಡಿಯಲ್ಲಿ ಗುಂಡಿಯಲ್ಲಿ ಜೀವಂತವಾಗಿ ಹೂತು ಹಾಕಿದ್ದರು.
ತನಿಖೆ ವೇಳೆ ಜಗದೀಪ್ ಅವರ ಕರೆ ವಿವರಗಳು (Call Details) ಆರೋಪಿಗಳ ಪತ್ತೆಗೆ ನೆರವಾಗಿದ್ದು, ಅಂತಿಮವಾಗಿ ಪೊಲೀಸರು ಧರ್ಮಪಾಲ್ ಮತ್ತು ಹರ್ದೀಪ್ ಎಂಬ ಇಬ್ಬರು ಶಂಕಿತರನ್ನು ಬಂಧಿಸಲು ನೆರವಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ : ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ DySP.!
ಬಂಧಿತರ ವಿಚಾರಣೆಯ ಸಮಯದಲ್ಲಿ ಹತ್ಯೆಯ ಭಯಾನಕ ವಿವರಗಳನ್ನು ಬಹಿರಂಗವಾಗಿದ್ದು, ಜಗದೀಪ್ ಬಾಡಿಗೆ ಕಟ್ಟಡದಲ್ಲಿ ವಾಸಿಸುತ್ತಿದ್ದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಹೇಳಿದ್ದಾರೆ.
ಫೆಬ್ರವರಿ 3 ರಂದು ಅಂದರೆ ಅಪಹರಣದ 10 ದಿನಗಳ ನಂತರ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಮೂರು ತಿಂಗಳ ಕಾಲ ತನಿಖೆ ನಡೆಸಿ ಪ್ರಕರಣ ಬಯಲಿಗೆಳೆದಿದ್ದಾರೆ.