Wednesday, March 12, 2025
HomeJob10 ನೇ ತರಗತಿ ಪಾಸಾಗಿದ್ದೀರಾ.? ಖಾಲಿ ಇರುವ ಹೋಂ ಗಾರ್ಡ್​​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img
spot_img

10 ನೇ ತರಗತಿ ಪಾಸಾಗಿದ್ದೀರಾ.? ಖಾಲಿ ಇರುವ ಹೋಂ ಗಾರ್ಡ್​​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಕಾರವಾರ : ನೀವು ಜಸ್ಟ್ SSLC ತರಗತಿ ಪಾಸ್ ಆಗಿದ್ದರೇ ಸಾಕು, ಈ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಬಹುದು.

ಖಾಲಿ ಇರುವ ಹೋಂ ಗಾರ್ಡ್​​​ ಅಥವಾ ಗೃಹ ರಕ್ಷಕ (Home guard) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಪುರುಷ ಹಾಗೂ ಮಹಿಳೆ ಇಬ್ಬರಿಗೂ (both man and female) ಅರ್ಜಿ ಸಲ್ಲಿಸುವ ಅವಕಾಶವಿದೆ. ಇಲ್ಲಿ ಈ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಅವಶ್ಯ ಮಾಹಿತಿಯನ್ನು ಕೊಡಲಾಗಿದ್ದು, ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಸಂಪೂರ್ಣ ಮಾಹಿತಿ ಓದಿ.

ಇದನ್ನು ಓದಿ : ರೆಡ್ ಹ್ಯಾಂಡ್ಆಗಿ ಲೋಕಾಯುಕ್ತ ಬಲೆಗೆ ಬಿದ್ದ PSI.!

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾರಿಗೆ ಆಸಕ್ತಿ ಇದೆಯೋ ಅಂತವರು ಇಲ್ಲಿ ನೀಡಲಾದ ವಿಳಾಸ (Adress) ಕ್ಕೆ ತೆರಳಿ ಅರ್ಜಿ ಪ್ರತಿಯನ್ನು ಉಚಿತ (Free) ವಾಗಿ ಪಡೆದುಕೊಂಡು ಪೂರ್ಣವಾಗಿ ಭರ್ತಿ ಮಾಡಿ. ನಂತರ ಮತ್ತೆ ಇಲಾಖೆಗೆ ಸಲ್ಲಿಸಬೇಕು.

  • ಹುದ್ದೆಯ ವಿವರ :
  • ನೇಮಕಾತಿ ಇಲಾಖೆ : ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳ.
  • ಹುದ್ದೆಗಳ ಹೆಸರು : ಹೋಂ ಗಾರ್ಡ್/Home Guard​​​.
  • ಹುದ್ದೆಗಳ ಸಂಖ್ಯೆ : 140 ಹುದ್ದೆಗಳು.

ಅರ್ಹತೆಗಳು :

  • SSLC ತರಗತಿ ಪಾಸ್ ಆಗಿರಬೇಕು.
  • ಅಭ್ಯರ್ಥಿಯು 19 ವರ್ಷದಿಂದ 50 ವರ್ಷದ ಒಳಗಿರಬೇಕು.
  • ಪುರುಷ ಅಭ್ಯರ್ಥಿ 163 ಸೆ.ಮೀ ಎತ್ತರವಿರಬೇಕು.
  • ಮಹಿಳಾ ಅಭ್ಯರ್ಥಿ 150 ಸೆ.ಮೀ ಎತ್ತರವಿರಬೇಕು.
  • ಯಾವುದೇ Criminal ಹಿನ್ನೆಲೆ ಇರಬಾರದು.

ಇದನ್ನು ಓದಿ : ಭೀಕರ ರಸ್ತೆ ಅಪಘಾತ : 10 ಜನರ ಸಾವು.!

ಅರ್ಜಿ ಜೊತೆ ಏನು ಸಲ್ಲಿಸಬೇಕು :

  • ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ಮೆಡಿಕಲ್ ಫಿಟ್ನೆಸ್ (Medical fitness) ಪ್ರಮಾಣ ಪತ್ರ.
  • ಆಧಾರ ಕಾರ್ಡ್​/Aadhar card.
  • SSLC ಅಂಕ ಪಟ್ಟಿ​.
    (ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕೃತ ಮಾಡಿಕೊಂಡು ಅರ್ಜಿ ಜೊತೆಗೆ ಸಲ್ಲಿಸಬೇಕು).

ಪ್ರಥಮ ಆದ್ಯತೆ :

  • ಹೆವಿ ಡ್ರೈವಿಂಗ್ ಲೈಸೆನ್ಸ್ (Heavy Driving License) ಹೊಂದುದವರು.
  • ಅಡುಗೆ ಭಟ್ಟರು,
  • Mechanic/Painter/Plumber.
  • ಕಂಪ್ಯೂಟರ್ ಜ್ಞಾನ, NCC ಹಾಗೂ ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ಇದ್ದವರು.

ಅರ್ಜಿ ಉಚಿತವಾಗಿ ಪಡೆಯುವ/ನೀಡುವ ವಿಳಾಸ :

ಗೃಹ ರಕ್ಷಕ ದಳದ ಜಿಲ್ಲಾ ಕಚೇರಿ,
ಸರ್ವೋದಯ ನಗರ,
ದಿವಕರ್ ಕಾಮರ್ಸ್ ಕಾಲೇಜ್ ಎದುರು,
ಕೊಡಿಭಾಗ, ಕಾರವಾರ.
(Home Guard District Office,
Sarvodaya Nagar,
Opp Diwakar Commerce College,
Kodibhaga, Karwar).

ಇದನ್ನು ಓದಿ : ಲವ್, ಸೆಕ್ಸ್, ದೋಖಾ ಪ್ರಕರಣ ; 3 ಬಾರಿ ಅಬಾರ್ಷನ್‌ ಮಾಡಿಸಿ ಓಡಿಹೋದ Lover.!

ವೇತನ ಶ್ರೇಣಿ : 

ಆಯ್ಕೆಯಾದ ಅಭ್ಯರ್ಥಿಗಳಿಗೆ ಕನಿಷ್ಠ ರೂ. 8000/- ಯಿಂದ ಗರಿಷ್ಠ ರೂ. 15,000/- ವರೆಗೆ (Per month).

ಪ್ರಮುಖ ದಿನಾಂಕ :

ಭರ್ತಿ ಮಾಡಿದ ಅರ್ಜಿ ನೀಡಲು ಕೊನೆ ದಿನಾಂಕ ಮಾರ್ಚ್ 07, 2025 ಆಗಿದೆ.

ಹೆಚ್ಚಿನ ಮಾಹಿತಿಗೆ : 08382 -200137/ 226361 ಅಥವಾ 9480898775 ಸಂಪರ್ಕಿಸಬಹುದು.

Note : ಗೃಹರಕ್ಷಕ ದಳ ಸಂಸ್ಥೆ (Home Guard Agency) ಸ್ವಯಂ ಸೇವಕ ಸಂಸ್ಥೆ ಆಗಿದೆ. ಈ ಕೆಲಸವೂ ಖಾಯಂ ಸರ್ಕಾರಿ ನೌಕರಿ ಅಲ್ಲ (Not a permanent government job). ಯಾವುದೇ ರೀತಿಯ ಮಾಸಿಕ ಸಂಬಳ ಅಥವಾ ವಿಶೇಷ ಭತ್ಯೆ ನೀಡಲ್ಲ. ಸರ್ಕಾರ ನಿಗದಿ ಪಡಿಸಿದ ಗೌರವ ಧನ (honorarium) ವನ್ನು ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ನೀಡಲಾಗುತ್ತದೆ.

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : ನೀವೇನಾದ್ರೂ ಕಳೆದ 5 – 10 ವರ್ಷಗಳಿಂದ ಒಂದೇ Mobile Number ಬಳಸುತ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿಗೆ ಜನರು ಮೊಬೈಲ್ ಬದಲಿಸಿದಂತೆ ಮೊಬೈಲ್ ಸಂಖ್ಯೆಗಳನ್ನು ಬದಲಿಸುತ್ತಾರೆ (Mobile numbers change as mobiles change) ಅಥವಾ ಪೋರ್ಟ್ ಮಾಡುತ್ತಾರೆ. ಆದ್ರೆ ನೀವು ಕಳೆದ 5 ರಿಂದ 10 ವರ್ಷದಲ್ಲಿ ಒಂದೇ ಮೊಬೈಲ್ ಸಂಖ್ಯೆ ಹೊಂದಿದ್ದೀರಿ ಎಂದಾದರೆ ಈ ಬಗ್ಗೆ ನೀವು ತಿಳಿದುಕೊಳ್ಳುವುದು ಅವಶ್ಯಕ.

ಅಲ್ಲದೇ ನೀವೇನಾದರೂ ಒಂದೇ ಸಿಮ್ ಕಾರ್ಡ್ ನ್ನು 5ಕ್ಕಿಂತ ಹೆಚ್ಚು ವರ್ಷಗಳ ಕಾಲ ಬಳಕೆ ಮಾಡಿದ್ದೀರಿ ಅಥವಾ ಇಂದಿಗೂ ಅದೇ ನಂಬರ್ ಮೂಲಕ ದೈನಂದಿನ ವ್ಯವಹಾರಗಳ (Daily transactions) ಮಾಡುತ್ತಿದ್ದೀರಾ?

ಇದನ್ನು ಓದಿ : IRG : ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ನಿಮ್ಮ ಮೊಬೈಲ್ ಸಂಖ್ಯೆಯು ಎಷ್ಟು ವರ್ಷ ಹಳೆಯದು ಎಂಬ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು. ಹಾಗಾದರೆ ದೀರ್ಘಕಾಲ ಒಂದೇ ನಂಬರ್ ಹೊಂದಿರುವವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ (The personality of having the same number for a long time).?

ನೀವು ಪ್ರಾಮಾಣಿಕ ವ್ಯಕ್ತಿ :
ನೀವು ಹಲವು ವರ್ಷಗಳಿಂದ ಒಂದೇ ಮೊಬೈಲ್ ಸಂಖ್ಯೆ ಬಳಸುತ್ತಿದ್ದರೆ ನೀವು ಅತ್ಯಂತ ಪ್ರಾಮಾಣಿಕ ವ್ಯಕ್ತಿತ್ವ (Honest personality) ಹೊಂದಿರುತ್ತೀರಾ. ನೀವು ಎಂತಹದ್ದೇ ಸಮಯ ಅಥವಾ ಸಂದರ್ಭದಲ್ಲಿಯೂ ಪ್ರಾಮಾಣಿಕತೆ ಬಿಟ್ಟುಕೊಡುವುದಿಲ್ಲ. ಹಾಗೆ ಮೋಸ ಮಾಡುವುದಿಲ್ಲ. ಹೀಗಾಗಿ ನಿಮ್ಮ ಸಂಬಂಧ ಮತ್ತಷ್ಟು ಬಲವಾಗುತ್ತಲೇ ಸಾಗುತ್ತದೆ.

ಇದನ್ನು ಓದಿ : Astrology : ಪ್ರೀತಿ – ಪ್ರೇಮ ಅಂತ ಹೆಚ್ಚು ತಲೆ ಕೆಡಿಸಿಕೊಳ್ತಾರಂತೆ ಈ ರಾಶಿಯವರು.!

ನೀವು ಸಾಲ ಮಾಡುವವರಲ್ಲ :
ನೀವು 5 ವರ್ಷದಿಂದ ಒಂದೇ ಮೊಬೈಲ್ ನಂಬರ್ ಬಳಸುತ್ತಿದ್ದರೆ ನೀವು ಸಾಲಗಾರರಲ್ಲ ಎಂಬುದು ತಿಳಿಯುತ್ತದೆ. ಒಂದು ವೇಳೆ ಸಾಲ (loan) ಮಾಡಿದ್ದರೂ ಕೂಡ ಅದನ್ನು ಸರಿಯಾದ ಸಮಯದಲ್ಲಿ ಪಾವತಿ ಮಾಡುವವರು ಎಂಬುದನ್ನು ವಿವರಿಸಲಿದೆ. ಈ ಐದು ವರ್ಷದಲ್ಲಿ ನೀವು ಯಾರಿಗೂ ಮೋಸ ಮಾಡಿಲ್ಲ ಎಂದರ್ಥ. ಹಾಗಂತಾ ಸಾಲ ಮಾಡಿದವರೆಲ್ಲರು ತಮ್ಮ ಮೊಬೈಲ್ ಸಂಖ್ಯೆ ಬದಲಿಸುತ್ತಾರೆ ಅಂತ ತಿಳ್ಕೊಬೇಡಿ.

ನಿಮ್ಮ ಮೇಲೆ ಯಾವ ಆರೋಪಗಳಿಲ್ಲ :
ನಿಮ್ಮ ಮೇಲೆ ಯಾವುದೇ ರೀತಿಯಲ್ಲೂ ದೂರುಗಳಿಲ್ಲ. ಅಂದರೆ ಫ್ರೆಂಡ್ಸ್‌, ಕುಟುಂಬಸ್ಥರು ಅಥವಾ ಪೊಲೀಸರ ಬಳಿಯೂ ನಿಮ್ಮ ಮೇಲೆ ಯಾವುದೇ ಕೇಸ್‌ಗಳು, ದೂರುಗಳು (complaint’s), ಆರೋಪಗಳಿಲ್ಲ ಎಂದರ್ಥ.

ಇದನ್ನು ಓದಿ : ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ಆರೋಪ ; ಹಿರಿಯ ಪೊಲೀಸ್ ಅಧಿಕಾರಿ Suspend.!

ಸಂಬಂಧಗಳಿಗೆ ಬೆಲೆ ಕೊಡುವ ವ್ಯಕ್ತಿ :
ನೀವು ಸಂಬಂಧಗಳಲ್ಲಿ ನಂಬಿಕೆ ಇಟ್ಟಿರುವ ಹಾಗೂ ಯಾವುದೇ ಕಾರಣಕ್ಕೂ ಯಾರ ಸಂಬಂಧವನ್ನು ಹಾಳು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಹೀಗಾಗಿ ದೀರ್ಘಕಾಲದಿಂದಲೂ ಒಂದೇ ಮೊಬೈಲ್ ನಂಬರ್ ಬಳಸಲು ನೀವು ಇಚ್ಛಿಸುತ್ತೀರಿ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!