ಜನಸ್ಪಂದನ ನ್ಯೂಸ್, ಸಿನಿಮಾ : ಕ್ರಿಕೆಟಿಗರನ್ನು (cricketers) ಸಿನಿಮಾ ತಾರೆಯರು ಮದುವೆಯಾಗುವ ಸಂಪ್ರದಾಯ ಹೊಸದೇನಲ್ಲ. ಇನ್ನು ಕ್ರಿಕೆಟಿಗರನ್ನು ಮದುವೆಯಾದ ನಂತರ ಸಿನಿಮಾ ನಟಿಯರು (movie actresses) ಚಿತ್ರರಂಗದಿಂದ ದೂರ ಉಳಿದ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಆದರೆ ಇದೀಗ ಖ್ಯಾತ ಕ್ರಿಕೆಟಿಗನ ಪತ್ನಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಅದರಲ್ಲೂ ತೆಲುಗು ಸಿನಿಮಾ (Telugu cinema) ಮೂಲಕ, ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮತ್ತು ಮಾಜಿ ಆರ್‌ಸಿಬಿ (RCB) ಸ್ಟಾರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ (Dhanashree) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದ ಸ್ಟಾರ್ (social media star) ಆಗಿರುವ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಇದನ್ನು ಓದಿ : ಇನ್ಮುಂದೆ ಕೇವಲ 2-3 ಗಂಟೆಯಲ್ಲಿ ಸಿಗುತ್ತೆ ತಿರುಪತಿ ಶ್ರೀ ವೆಂಕಟೇಶ್ವರ ದರ್ಶನ.!
ಧನಶ್ರೀ ಅದ್ಭುತ ಡ್ಯಾನ್ಸರ್ ಆಗಿದ್ದು, ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ (Instagram and YouTube) ನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಡ್ಯಾನ್ಸ್ ರಿಯಾಲಿಟಿ ಶೋ (dance reality shows) ಗಳಲ್ಲೂ ಚಹಾಲ್ ಪತ್ನಿ ಧನಶ್ರೀ ಭಾಗವಹಿಸಿದ್ದಾರೆ. ಈಗ ಧನಶ್ರೀ ತೆಲುಗು ಚಿತ್ರರಂಗದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನೃತ್ಯವನ್ನೇ ಪ್ರಧಾನವಾಗಿಟ್ಟುಕೊಂಡು (Dance as its main focus) ತಯಾರಾಗುತ್ತಿರುವ ಆಕಾಶಂ ದಾಟಿ ವಾಸ್ತವ ನಾಯಕಿ.
ಖ್ಯಾತ ಡ್ಯಾನ್ಸ್ ಮಾಸ್ಟರ್ ಯಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಿಲ್ ರಾಜು ಪ್ರೊಡಕ್ಷನ್ ಹೌಸ್ ಬ್ಯಾನರ್ ( Dil Raju Production House) ಅಡಿಯಲ್ಲಿ ಹರ್ಷಿತ್ ರೆಡ್ಡಿ ಮತ್ತು ಹನ್ಸಿತಾ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶಶಿಕುಮಾರ್ ಮುತ್ತುಲೂರಿ (Shashikumar Muthuluri) ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇದನ್ನು ಓದಿ : ಕೊಲೆ ನಡೆದ ಸ್ಥಳದಲ್ಲಿ ಆರೋಪಿ ದರ್ಶನ್ ಇದ್ದ Photo ಪೊಲೀಸರ ಕೈಗೆ.!
ಚಿತ್ರದ ಕೆಲವು ಭಾಗಗಳನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಉಳಿದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಲಿದೆ. ಚಿತ್ರದಲ್ಲಿ ಧನಶ್ರೀ ಜೊತೆಗೆ ಮತ್ತೊಬ್ಬ ನಾಯಕಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸೀರತ್ ಕಪೂರ್ (Seerat Kapoor) ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಹಿಂದಿನ ಸುದ್ದಿ : ಕೊಲೆ ನಡೆದ ಸ್ಥಳದಲ್ಲಿ ಆರೋಪಿ ದರ್ಶನ್ ಇದ್ದ Photo ಪೊಲೀಸರ ಕೈಗೆ.!
ಜನಸ್ಪಂದನ ನ್ಯೂಸ್, ಬೆಂಗಳೂರು : ನಟ ದರ್ಶನ್ಗೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (murder case) ದೊಡ್ಡ ಸಂಕಷ್ಟವೇ ಎದುರಾಗಿದೆ. ಪೊಲೀಸರು ಕೊಲೆ ಕೇಸ್ಗೆ ಸಂಬಂಧಿಸಿದಂತೆ ಕೋರ್ಟ್ಗೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.
ಚಾರ್ಜ್ಶೀಟ್ನಲ್ಲಿ ಮತ್ತೆರಡು ಫೋಟೋ ಸಾಕ್ಷಿಗಳನ್ನು ಪೊಲೀಸರು ಸೇರಿಸಿದ್ದಾರೆ ಎನ್ನಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ (eyewitnesses) ಮೊಬೈಲ್ನಿಂದ 2 ಫೋಟೋಗಳನ್ನು ರಿಕವರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : Health : ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿದೆಯೇ? ಈ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ.!
ಸದ್ಯ ಕೊಲೆ ನಡೆದ ಸ್ಥಳದಲ್ಲಿ ತೆಗೆದ ಫೋಟೋ ರಿಕವರಿ ಮಾಡಲಾಗಿದ್ದು, ಸ್ಥಳದಲ್ಲಿ ದರ್ಶನ್ ನಿಂತಿರುವ ಫೋಟೋ ಕೂಡ ಸಿಕ್ಕಿದೆ ಎನ್ನಲಾಗಿದೆ.
ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ನಿಂತಿರುವ ಫೋಟೋವನ್ನು ಇದೀಗ retrive ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಕೂಡ ಇದ್ದರು ಎಂಬುದಕ್ಕೆ ಈ 2 ಫೋಟೋಗಳು ಸಾಕ್ಷಿಯಾಗಲಿವೆ (witness).
ಇಂದು ದರ್ಶನ್ ಬೇಲ್ ಅರ್ಜಿ ವಿಚಾರಣೆ (Application hearing) ನಡೆಯಲಿದೆ. ಇದೀಗ ಫೋಟೋ ಹೊರಬಿದ್ದಿದ್ದು, ಈ ಫೋಟೋಗಳು ದರ್ಶನ್ಗೆ ದೊಡ್ಡ ಸಂಕಷ್ಟ ತಂದೊಡ್ಡಲಿವೆ.
ಇದನ್ನು ಓದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!
ನಟ ದರ್ಶನ್ ಕೊಲೆ ನಡೆದ ಶೆಡ್ ನಲ್ಲಿ ತನ್ನ ಸಹಚರರ (companions) ಜೊತೆ ನಿಂತಿರುವ ಫೋಟೋ ಇದ್ದಾಗಿದ್ದು, ಬ್ಲೂ ಟೀ ಶರ್ಟ್ ಹಾಗೂ ಬ್ಲ್ಯಾಕ್ ಕಲರ್ ಜೀನ್ಸ್ ಪ್ಯಾಂಟ್ ನಲ್ಲಿ ಕೊಲೆ ಆರೋಪಿ ದರ್ಶನ್ ಇರುವ ಫೋಟೋ ರಿಕವರಿ ಮಾಡಲಾಗಿದೆ.
ಕೊಲೆ ಆರೋಪಿ ಪುನೀತ್ ಘಟನೆ ಬಳಿಕ ಎರಡು ಫೋಟೋಗಳನ್ನು ಡಿಲೀಟ್ ಮಾಡಿದ್ದ. ಪೊಲೀಸರು ಪುನೀತ್ ಮೊಬೈಲ್ ಅನ್ನು ವಶಕ್ಕೆ ಪಡೆದ ಪೊಲೀಸರು FSL ಗೆ ರವಾನೆ ಮಾಡಿದ್ದರು. ಇದೀಗ ಚಾರ್ಜ್ಶೀಟ್ನಲ್ಲಿ ಪೊಲೀಸರು ಈ 2 ಫೋಟೋಗಳನ್ನು ಸೇರಿಸಿದ್ದಾರೆ.