ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಕುಂಭಮೇಳ (Kumbhamela) ಕ್ಕೆ ಹೊರಟಿದ್ದ ವೇಳೆ ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ್ದ ಕಾಲ್ತುಳಿತ (stampede) ದಿಂದ 18 ಮಂದಿ ದುರ್ಮರಣಕ್ಕೀಡಾದ ಬಳಿಕ ಭದ್ರತಾ ಸಿಬ್ಬಂದಿಗಳು ಕಟ್ಟೆಚ್ಚರದಿಂದ ಕಾರ್ಯನಿರತರಾಗಿದ್ದಾರೆ.
ಸದ್ಯ ಮಹಿಳಾ RPF ಸಿಬ್ಬಂದಿಯೊಬ್ಬರು ತನ್ನ ಪುಟ್ಟಮಗುವನ್ನೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ವಿಡಿಯೋ ಸಾಮಾಜಿಕ (social media) ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಇದನ್ನು ಓದಿ : ಲ್ಯಾಂಡಿಂಗ್ ವೇಳೆ ರನ್ ವೇಯಲ್ಲೇ ಪಲ್ಟಿ ಹೊಡೆದ ವಿಮಾನ ; Vedio ವೈರಲ್.!
ಕಾನ್‌ಸ್ಟೆಬಲ್ ರೀನಾ ಎಂಬುವವರು ದೆಹಲಿ ರೈಲು ನಿಲ್ದಾಣ (Dehli railway station) ದಲ್ಲಿ ತನ್ನ 1 ವರ್ಷದ (one year) ಮಗುವನ್ನು ಎದೆಗೆ ಕಟ್ಟಿಕೊಂಡು ಕರ್ತವ್ಯವನ್ನು ನಿರ್ವಹಿಸುತ್ತಿವುದನ್ನು ನಿಲ್ದಾಣದಲ್ಲಿದ್ದ ಕೆಲ ಪ್ರಯಾಣಿಕರು (Passengers) ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ (upload) ಮಾಡಿದ್ದಾರೆ.
ಕಾನ್‌ಸ್ಟೆಬಲ್ ರೀನಾ (Constable Reena) ಅವರು ಮಗುವಿಗೆ ತಾಯಿಯಾಗಿ ಮತ್ತು RPF ಸಿಬ್ಬಂದಿಯಾಗಿ ಕಾರ್ಯ ನಿರ್ಹಿಸುತ್ತಿರುವ ಬಗ್ಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ (Appreciation) ವ್ಯಕ್ತವಾಗುತ್ತಿದೆ.
ಇದನ್ನು ಓದಿ : NRDRM ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಕಾನ್‌ಸ್ಟೆಬಲ್ ರೀನಾ ಅವರ ಈ ಸಮರ್ಪಣಾ ಭಾವನೆಯ ಬಗ್ಗೆ ಕೆಲವು ನೆಟಿಜನ್‌ಗಳು ಶ್ಲಾಘಿಸಿದರೆ, ಅಂತಹ ಅಪಾಯಕಾರಿ (Dangerous) ಪರಿಸ್ಥಿತಿಯಲ್ಲಿ ಮಗುವನ್ನು ಹೊತ್ತುಕೊಂಡಿದ್ದಕ್ಕಾಗಿ ಅವರನ್ನು ಕೆಲ ನೆಟ್ಟಿಗರು ಟೀಕಿಸಿದ್ದಾರೆ.
Constable ರೀನಾರನ್ನು ಹೊಗಳಿದ ಮತ್ತೊಬ್ಬ ಬಳಕೆದಾರರು, “ತಾಯ್ತನ ಮತ್ತು ಕರ್ತವ್ಯ (Motherhood and duty) ವಿವರಿಸಲು ಪದಗಳ ಅಗತ್ಯವಿಲ್ಲ. ಈ ಮಹಿಳಾ RPF ಕಾನ್‌ಸ್ಟೆಬಲ್‌ಗೆ ಹೆಚ್ಚಿನ ಶಕ್ತಿ ನೀಡಲಿ. ಅವರ ಸೇವೆಯ ಸಮರ್ಪಣೆಗೆ ನಮನ” ಎಂದು ಬರೆದಿದ್ದಾರೆ.
ಇದನ್ನು ಓದಿ : ನಡುರಸ್ತೆಯಲ್ಲೇ ಚಾ*ವಿನಿಂದ ಇರಿದು ಯುವಕನ ಬರ್ಬ* ಹ* ; ವಿಡಿಯೋ Viral.!
“ಅವಳು ಸೇವೆ ಮಾಡುತ್ತಾಳೆ, ಅವಳು ಪೋಷಿಸುತ್ತಾಳೆ ಮತ್ತು ಅವಳು ಎಲ್ಲವನ್ನೂ ಮಾಡುತ್ತಾಳೆ. ತಾಯಿ, ಯೋಧ, ಎತ್ತರವಾಗಿ ನಿಂತಿದ್ದಾಳೆ… 16BN/RPSF ನಿಂದ ಕಾನ್‌ಸ್ಟೆಬಲ್ ರೀನಾ ತನ್ನ ಮಗುವನ್ನು ಹೊತ್ತುಕೊಂಡು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾಳೆ, ಪ್ರತಿದಿನ ಮಾತೃತ್ವದ ಕರೆಯನ್ನು ಸಮತೋಲನಗೊಳಿಸುವ ಅಸಂಖ್ಯಾತ ತಾಯಂದಿರನ್ನು ಪ್ರತಿನಿಧಿಸುತ್ತಾಳೆ”. ಎಂದು RPF INDIA ದ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿ ಹೀಗೆ ಬರೆದುಕೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ :
She serves, she nurtures, she does it all—
A mother, a warrior, standing tall…Constable Reena from 16BN/RPSF performing her duties while carrying her child, representing the countless mothers who balance the call of duty with motherhood every day.#NariShakti #HeroesInUniform… pic.twitter.com/enzaw0iDYo
— RPF INDIA (@RPF_INDIA) February 17, 2025
ಹಿಂದಿನ ಸುದ್ದಿ : ಪರಸ್ತ್ರೀಯೊಂದಿಗೆ ಪತಿ ಲವ್ವಿಡವ್ವಿಗೆ ಬೇಸತ್ತು ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ರಾಮಯ್ಯ ಲೇಔಟ್ನಲ್ಲಿ ಪತಿಯ ಅನೈತಿಕ ಸಂಬಂಧಕ್ಕೆ (Immoral relationship) ಬೇಸತ್ತು ಗ್ರಾಮ ಪಂಚಾಯತಿ ಅಧ್ಯಕ್ಷೆ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷೆ (Gram Panchayat President) ಶ್ರುತಿ (33) ತನ್ನ ಐದು ವರ್ಷದ ಮಗಳು ರೋಷಿಣಿಯನ್ನು ಕೊಂದು ಬಳಿಕ ತಾನೂ ಸಹ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : BSNL Offers : ಪೂರ್ತಿ 425 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 850GB ಡೇಟಾದ ಮಸ್ತ್ ರಿಚಾರ್ಜ್ ಪ್ಲಾನ್.!
ಇನ್ನು ಆತ್ಮಹತ್ಯೆಗೂ ಮುನ್ನ ಶ್ರುತಿ ಡೆತ್ನೋಟ್ ಬರೆದಿಟ್ಟಿದ್ದು, ಡೆತ್ನೋಟ್ನಲ್ಲಿ ಗಂಡ ಪರಸ್ತ್ರಿಯೊಂದಿಗಿನ ಅನೈತಿಕ ಸಂಬಂಧದ ಹೊಂದಿರುವ ಬಗ್ಗೆ ತಿಳಿಸಿದ್ದಾರೆ.
10 ವರ್ಷದ ಹಿಂದೆ ಶ್ರುತಿ ಚಾರ್ಟರ್ಡ್ ಅಕೌಂಟೆಂಟ್ ಜತೆ ಮದುವೆಯಾಗಿದ್ದರು. ಆದರೆ ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತ ಶ್ರುತಿ, ಪುತ್ರಿಯನ್ನು ಕೊಂದು ಬಳಿಕ ತಾನೂ ಸಹ ನೇಣಿಗೆ ಶರಣಾಗಿದ್ದಾರೆ. ಇನ್ನು ಗಂಡು ಮಗು ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದರಿಂದ ಆತ ಬಚಾವ್ ಆಗಿದ್ದಾನೆ.
ಇದನ್ನು ಓದಿ : Bharath ಪೆಟ್ರೋಲಿಯಂನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ವಿಷಯ ತಿಳಿದ ಸ್ಥಳಕ್ಕೆ ಬಂದ ಬಾಗಲಗುಂಟೆ ಠಾಣೆ ಪೊಲೀಸರು ಮೃತ ಶ್ರುತಿಯ ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನು ತಾಯಿ, ಮಗಳ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.