ಜನಸ್ಪಂದನ ನ್ಯೂಸ್, ಡೆಸ್ಕ್ : ಜನರು ಕಪ್ಪು ದಾರವನ್ನು (black thread) ಕೈಗೆ ಅಥವಾ ಕಾಲಿಗೆ ಕಟ್ಟಿಕೊಳ್ಳುವುದು ಸಾಮಾನ್ಯ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ಕಪ್ಪು ದಾರವನ್ನು ಶನಿಯ ಅಂಶದ ಪ್ರತೀಕ (Shani aspect symbol) ಎಂಬುದಾಗಿ ಪರಿಗಣಿಸಲಾಗುತ್ತದೆ.
ಪ್ರತಿಯೊಂದು ರಾಶಿಯವರು ಕಪ್ಪು ದಾರ ಕಟ್ಟಿದರೆ ಲಾಭ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಕೆಲವು ರಾಶಿಯವರಿಗೆ ಇದರಿಂದ ನಷ್ಟ ಕೂಡ ಇರುತ್ತದೆ ಅನ್ನೋದನ್ನ ವೈದಿಕ ಜ್ಯೋತಿಷ್ಯ ಶಾಸ್ತ್ರ (Vedic Astrology) ಪ್ರತಿಪಾದಿಸುತ್ತದೆ.
ಹಾಗಾಗಿ ಯಾವೆಲ್ಲ ರಾಶಿಯವರು ಕಪ್ಪು ದಾರ ಕಟ್ಟಿದರೆ ಒಳ್ಳೆಯದಾಗುವುದಿಲ್ಲ ಅಂತ ತಿಳಿಯೋಣ ಬನ್ನಿ.
ಇದನ್ನು ಓದಿ : ಪತ್ನಿಯ ಬರ್ಬರ ಹತ್ಯೆಗೈದು ಪತಿ ಎಸ್ಕೇಪ್.!
ಸಿಂಹ ರಾಶಿ (Leo) :
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಸಿಂಹ ರಾಶಿಯವರಿಗೆ ಹಾನಿ ಉಂಟು ಮಾಡಬಹುದು. ಏಕೆಂದರೆ ಸಿಂಹ ರಾಶಿಯ ಸ್ವಾಮಿ ಗ್ರಹ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗ್ರಹಗಳ ರಾಜ ಆಗಿರುವಂತಹ ಸೂರ್ಯ ಆಗಿರುತ್ತಾನೆ.
ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಸಿಂಹ ರಾಶಿಯವರ ಆತ್ಮವಿಶ್ವಾಸದಲ್ಲಿ ಕೊರತೆ (Lack of confidence) ಕಂಡು ಬರಲಿದೆ. ಅಲ್ಲದೇ ತಂದೆ ಹಾಗೂ ಮಗನ ನಡುವೆ ಭಿನ್ನಾಭಿಪ್ರಾಯಗಳು (Disagreements) ಮೂಡಿ ಬರುವಂತಹ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ಕೂಡ ದೂರವಾಗುವಂತಹ ಘಟನೆಗಳು ನಡೆಯಲಿವೆ.
ಮೇಷ ರಾಶಿ (Aries) :
ಮೇಷ ರಾಶಿಯವರಿಗೆ ಕೂಡ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದಾಗಿ ಶುಭ ಲಾಭ ಉಂಟಾಗುವುದಿಲ್ಲ ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಹಾಗೂ ರಾಹುವಿನ ಜೊತೆಗೆ ಕಪ್ಪು ದಾರದ ಸಂಬಂಧವಿದೆ. ಹೀಗಾಗಿ ಮೇಷ ರಾಶಿಯವರ ಸ್ವಾಮಿ ಗ್ರಹ ಮಂಗಳ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ.
ಪ್ರತಿಯೊಂದು ಸನ್ನಿವೇಶಗಳನ್ನ ಎದುರಿಸುವಂತಹ ಈ ರಾಶಿಯವರ ಧೈರ್ಯ ಹಾಗೂ ಸಾಹಸದಲ್ಲಿ (Courage and adventure) ಈ ಸಂದರ್ಭದಲ್ಲಿ ಕಪ್ಪು ದಾರವನ್ನು ಕಟ್ಟುವುದರಿಂದಾಗಿ ಕೊರತೆಯುಂಟಾಗುತ್ತದೆ. ಹೀಗಾಗಿ ನಿಮ್ಮಲ್ಲಿ ದೌರ್ಬಲ್ಯ ತರುವಂತಹ ಈ ಕಪ್ಪು ದಾರವನ್ನು ಕಟ್ಟಿಕೊಳ್ಳದೆ ಇರುವುದು ಒಳ್ಳೆಯದು.
ಇದನ್ನು ಓದಿ : ಪೋನ್ ಪೇ ಮೂಲಕ ಲಂಚ ಪಡೆದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ.!
ವೃಶ್ಚಿಕ ರಾಶಿ (Scorpio) :
ಈ ರಾಶಿಯವರು ಕಪ್ಪು ದಾರವನ್ನು ಧರಿಸುವುದು ಅಷ್ಟೊಂದು ಸರಿಯಲ್ಲ. ವೃಶ್ಚಿಕ ರಾಶಿಯವರು ಯಾವುದೇ ಕಾರಣಕ್ಕೂ ಕೂಡ ಕಪ್ಪು ದಾರವನ್ನು ಎಷ್ಟೇ ಪವಿತ್ರ ಭಾವನೆಯನ್ನು ಹಾಗೂ ಶಕ್ತಿಯನ್ನು (Sacred feeling and power) ಹೊಂದಿರಲಿ ಅದನ್ನ ಧರಿಸಬೇಡಿ.
ಒಂದು ವೇಳೆ ಹಠ ಮಾಡಿ ನೀವು ಕಪ್ಪು ದಾರವನ್ನು ಧರಿಸುವುದಕ್ಕೆ ಹೋದರೆ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೀವು ಎದುರಿಸಬೇಕಾಗುತ್ತದೆ. ಅವುಗಳನ್ನು ಎದುರಿಸುವಂತಹ ಸಾಮರ್ಥ್ಯ ಕೂಡ ನಿಮ್ಮಲ್ಲಿ ಕಡಿಮೆ (Capacity is also low) ಆಗುವಂತಹ ಸಾಧ್ಯತೆ ಇದೆ.
ಇದನ್ನು ಓದಿ : ಬಿಗ್ ಟ್ವಿಸ್ಟ್ ; ಬೆಳಗಾವಿಯಲ್ಲಿ ಹಲ್ಲೆಗೊಳಗಾಗಿದ್ದ ಕಂಡಕ್ಟರ್ ಮೇಲೆ ಬಿತ್ತು ಪೋಕ್ಸೋ ಕೇಸ್.!
ಕರ್ಕ ರಾಶಿ (Cancer) :
ಕರ್ಕ ರಾಶಿಯವರು ಕಪ್ಪು ದಾರವನ್ನು ತಮ್ಮ ಕಾಲು ಅಥವಾ ಕೈಗೆ ಹಾಕಿಕೊಂಡರೆ ಅದರಿಂದ ಅಪಶಕುನ (Ominous) ಹೆಚ್ಚಾಗುತ್ತದೆ. ಕರ್ಕ ರಾಶಿಯವರು ಆರ್ಥಿಕ ಸಂಕಷ್ಟಗಳು ಮಾತ್ರವಲ್ಲದೆ ಮಾನಸಿಕವಾಗಿ ಕೂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ಪ್ರಭಾವದಿಂದಾಗಿ ಸರಿಯಾಗಿ ನಡೆಯಬೇಕಾಗಿರುವಂತಹ ಕೆಲಸಗಳು ಕೂಡ ಅರ್ಧಕ್ಕೆ ನಿಲ್ಲುವಂತಹ ಹಾಗೂ ತಡೆಯನ್ನು ಉಂಟು ಮಾಡಬಹುದಾದಂತಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಿಂದಿನ ಸುದ್ದಿ : Athani : ಭೀಕರ ರಸ್ತೆ ಅಪಘಾತ, ತಂದೆ-ಮಗಳ ಸಾ*.!
ಜನಸ್ಪಂದನ ನ್ಯೂಸ್, ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ (Anantapur in Athani Taluk) ಗ್ರಾಮದ ಸಮೀಪ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ (A car hit the bike from behind) ತಂದೆ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಸಾವಿಗೀಡಾದವರು ಮಹಾರಾಷ್ಟ್ರದ ಜತ್ತ ತಾಲೂಕಿನ ಗ್ರಾಮವೊಂದರ ನಿವಾಸಿಗಳಾದ (Residents of a village in Jatta Taluk, Maharashtra) ರಾಮು ಕರ್ಣಿ (28) ಹಾಗೂ ಮಗಳು ಜಾಹ್ನವಿ ಕರ್ಣಿ (11) ಎಂದು ತಿಳಿದು ಬಂದಿದೆ.
ಇದನ್ನು ಓದಿ : ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇನ್ನು ಅಪಘಾತದಲ್ಲಿ ರಾಮು ಪತ್ನಿಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಂತಪುರ ಗ್ರಾಮದ ಸೋದರ ಸಂಬಂಧಿ ಮದುವೆಗೆ ಇವರು ಬಂದಿದ್ದರು. ಈ ವೇಳೆ ಬೈಕ್‌ನ ಹಿಂಬದಿಗೆ ವೇಗವಾಗಿ ಬಂದ ಕಾರು (The fastest car) ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.
ಇದನ್ನು ಓದಿ : ಪೋನ್ ಪೇ ಮೂಲಕ ಲಂಚ ಪಡೆದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ.!
ಅಪಘಾತದ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.