Sunday, December 22, 2024
HomeState NewsSuspend : ಕರ್ತವ್ಯ ಲೋಪ : PSI ಅಮಾನತು.!
spot_img

Suspend : ಕರ್ತವ್ಯ ಲೋಪ : PSI ಅಮಾನತು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಗ್ರಾಮಾಂತರ ವ್ಯಾಪ್ತಿಯ ಇಡಪನೂರು ಪೊಲೀಸ್ ಠಾಣೆ (Idapanur Police Station) ಪಿಎಸ್‌ಐ ಅವರನ್ನು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (District Superintendent of Police) ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಮಾನತುಗೊಂಡ (suspend) ಪೊಲೀಸ್ ಅಧಿಕಾರಿ ಅವಿನಾಶ್ ಕಾಂಬ್ಳೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಇವರೇ ನೋಡಿ 33 ವರ್ಷಗಳ ಸೇವಾವಧಿಯಲ್ಲಿ 57 ಬಾರಿ ವರ್ಗಾವಣೆಯಾದ IAS ಅಧಿಕಾರಿ.!

ಕರ್ತವ್ಯದಲ್ಲಿ ಲೋಪ ಮತ್ತು ನಿರ್ಲಕ್ಷ್ಯ (Dereliction of duty and negligence) ಕಂಡುಬಂದಿರುವ ಹಿನ್ನೆಲೆಯಲ್ಲಿ ಇಡಪನೂರು ಪಿಎಸ್‌ಐ ಅವಿನಾಶ್ ಕಾಂಬ್ಳೆ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಇಡಪನೂರು ಪಿಎಸ್ಐ ಅವರು ಅಪಘಾತ ನಡೆದ ವೇಳೆ ಸ್ಥಳ ಪರಿಶೀಲನೆಯ ವಿಳಂಬ, ಠಾಣೆಯಲ್ಲಿ ಸರಿಯಾಗಿ ಹಾಜರಾಗದಿರುವುದು (Non- attendance at the station) ಹಾಗೂ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದಿರುವುದು ಹೀಗೆ ವಿವಿಧ ಕಾರಣಗಳ (various reasons) ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Health : ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ಯಾಕೆ ತಿನ್ನಬೇಕು ಗೊತ್ತಾ.?

ಜನಸ್ಪಂದನ ನ್ಯೂಸ್, ಡೆಸ್ಕ್ : ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ತಳ್ಳುವ ಗಾಡಿ ಮಾರಾಟಗಾರರು, ತಮ್ಮ ಗಾಡಿ ತುಂಬ ಕಿತ್ತಳೆ ಹಣ್ಣುಗಳನ್ನು (Orange fruit) ಇಟ್ಟು ಮಾರುತ್ತಿರುತ್ತಾರೆ. ಏಕೆಂದರೆ, ಕಿತ್ತಳೆ ಚಳಿಗಾಲದ ಸೀಸನಲ್ ಫ್ರೂಟ್‌.

ಹಾಗಾದರೆ ಚಳಿಗಾಲದಲ್ಲಿ ಈ ಹಣ್ಣನ್ನು ಯಾಕೆ ತಿನ್ನಬೇಕು ಗೊತ್ತಾ.?

ಇದನ್ನು ಓದಿ : ‘ಸಹಕರಿಸಿದರೆ ಪ್ರಕರಣದಲ್ಲಿ ಸಹಾಯ’ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ; Video ವೈರಲ್.!

ದೇಹದಲ್ಲಿ ಬಿಳಿ ರಕ್ತ ಕಣಗಳನ್ನು (White blood cells) ಹೆಚ್ಚು ಉತ್ಪತ್ತಿ ಮಾಡಿ ಸೋಂಕುಗಳು ಹಾಗೂ ಕಾಯಿಲೆಗಳ ವಿರುದ್ಧ ರಕ್ಷಣೆ (Protection against infections and diseases) ನೀಡುತ್ತದೆ.

ತನ್ನಲ್ಲಿ ವಿಟಮಿನ್ ಸಿ ಪ್ರಮಾಣವನ್ನು ಅಧಿಕವಾಗಿ (Vitamin C levels are high) ಹೊಂದಿರುವ ಕಿತ್ತಳೆ ಹಣ್ಣು, ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು (Immune system) ಬಲಪಡಿಸುತ್ತದೆ.

ಕಿತ್ತಳೆ ಹಣ್ಣು ದೇಹದ ತೂಕ ನಿಯಂತ್ರಣದಲ್ಲಿಡಲು (Body weight control) ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಿನ ನೀರಿನ ಪ್ರಮಾಣ ಇದ್ದು, ಹೊಟ್ಟೆ ತುಂಬಿಕೊಂಡ ಅನುಭವ ಉಂಟಾಗುತ್ತದೆ (Stomach- full feeling).

ಇದನ್ನು ಓದಿ : 2 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಜೀವ ಇರುವವರೆಗೆ ಕಠಿಣ ಶಿಕ್ಷೆ.!

ಸೂರ್ಯನ ಹಾನಿಕಾರಕ ಕಿರಣಗಳಿಂದ (harmful rays of the sun) ನಮ್ಮ ಚರ್ಮವನ್ನು ರಕ್ಷಿಸುವುದು.

ಹೃದಯ ಹಾಗೂ ಹೃದಯ ರಕ್ತನಾಳದ ಕಾಯಿಲೆಗಳನ್ನು ಗುಣಪಡಿಸಿ ಪಾರ್ಶ್ವವಾಯು (Paralysis) ಉಂಟಾಗದಂತೆ ನೋಡಿಕೊಳ್ಳುತ್ತದೆ.

ಕಿತ್ತಳೆ ಹಣ್ಣಿನಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಾಗಿದ್ದು (High potassium levels), ಇದು ಹೃದಯದ ಆರೋಗ್ಯಕ್ಕೆ ಅನುಕೂಲ.

ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!

ಗಾಯ ಆದಂತಹ ಸಂದರ್ಭದಲ್ಲಿ ಬೇಗನೆ ವಾಸಿ ಮಾಡುತ್ತದೆ.

ಕಿತ್ತಳೆ ಹಣ್ಣಿನಲ್ಲಿ ಕರಗುವ ನಾರಿನ ಅಂಶವಿದ್ದು (Soluble fiber content), ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಆರೋಗ್ಯಕರವಾದ ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಇದನ್ನು ಓದಿ : KSP : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಕಿತ್ತಳೆ ಹಣ್ಣಿನಲ್ಲಿ ದೇಹವನ್ನು ತಂಪಾಗಿಸುವ ಗುಣವಿದ್ದು, ಇದೇ ಗುಣದಿಂದ ಹೊಟ್ಟೆ ಉರಿ, ಎದೆ ಉರಿ, (stomach burn, heart burn) ಎಲ್ಲವೂ ಮಾಯವಾಗುತ್ತದೆ.

ಚರ್ಮದ ಸೌಂದರ್ಯವನ್ನು ಹಾಗೂ ಸಾಂದ್ರತೆಯನ್ನು (density) ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕಿತ್ತಳೆ ಹಣ್ಣಿನಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶ (Naturalism Sugar content) ಇರುವುದರಿಂದ ಸಿಹಿ ಹಾಕುವ ಅವಶ್ಯಕತೆ ಇಲ್ಲ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments