Thursday, March 13, 2025
HomeNewsಪೊಲೀಸ್‌ ಠಾಣೆಯಲ್ಲಿ ಪೊಲೀಸರ Mobile ನ್ನೇ ಎಗರಿಸಿದ ಖತರ್ನಾಕ್ ಆಸಾಮಿ.!
spot_img
spot_img
spot_img
spot_img
spot_img

ಪೊಲೀಸ್‌ ಠಾಣೆಯಲ್ಲಿ ಪೊಲೀಸರ Mobile ನ್ನೇ ಎಗರಿಸಿದ ಖತರ್ನಾಕ್ ಆಸಾಮಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಗದಗ : ಪೊಲೀಸ್‌ ಠಾಣೆಯಲ್ಲಿ ಪೊಲೀಸರ ಮೊಬೈಲ್‌ನ್ನೇ ಕದ್ದು ಓರ್ವ ಖತರ್ನಾಕ್ ಕಿಲಾಡಿ ಪರಾರಿಯಾಗಿರುವ ಘಟನೆ ಗದಗನಲ್ಲಿ ನಡೆದಿದೆ.

ಪೊಲೀಸ್‌ ಎಂದರೆ ಯಾರಿಗೆ ಭಯವಿಲ್ಲ ಹೇಳಿ, ಪೊಲೀಸ್‌ ಹೆಸರು ಕೇಳಿದರೆ ಈಗೂ ಎಷ್ಟೋ ಜನರಿಗೆ ಜ್ವರ ಬರುತ್ತವೆ. ಅಂತದರಲ್ಲಿ ಪೊಲೀಸ್ ಠಾಣೆಯಲ್ಲಿ ಅದು ಪೊಲೀಸರ ಮೊಬೈಲ್‌ ಫೋನ್‌ ಎಗರಿಸಿಕೊಂಡು ಹೋಗುತ್ತಾನೆಂದರೆ ಅವನೆಂಥಾ ಕಿಲಾಡಿ ಇರಬಹುದು ನೀವೇ ಯೋಚಿಸಿ.

ಇದನ್ನು ಓದಿ : Video: ಯುವಕ ಫೋನ್‌ನಲ್ಲಿ ಮಗ್ನ ; ಪಕ್ಕದಲ್ಲೇ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ.!

ಸದ್ಯ ಈ ಖತರ್ನಾಕ್ ಖದೀಮನ ಕೈಚಳಕ ಠಾಣೆಯಲ್ಲಿರುವ CCTV ಯಲ್ಲಿ ಸೆರೆಯಾಗಿದ್ದು, ಈ ಘಟನೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಇನ್ನು ಈ ಖತರ್ನಾಕ್ ಖದೀಮನನ್ನು ಮುಲ್ಲಾ ಎಂದು ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಖದೀಮ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರ ಜೊತೆ ಮಾತನಾಡುತ್ತಿದ್ದ ವೇಳೆ ಅವರ ಮೊಬೈಲ್ ಕದ್ದಿದ್ದಾನೆ.

ಇದನ್ನು ಓದಿ : ಪೊಲೀಸರು ತಮ್ಮ ಖಾಸಗಿ ವಾಹನದ ಮೇಲೆ “POLICE” ಅಂತ ಹಾಕಿಸಿಕೊಳ್ಳಬಹುದೇ.? ಇಲ್ಲಿದೆ ಗೃಹ ಸಚಿವರ ಸ್ಪಷ್ಟನೆ.!

ಈ ಘಟನೆ ದೃಶ್ಯ ಪೊಲೀಸ್ ಸ್ಟೇಷನ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌ ಇನ್ನು ಈ ಮೊಬೈಲ್‌ ಎಗರಿಸಿದ ವ್ಯಕ್ತಿ ಸ್ಥಳೀಯ ಹೊಟೇಲ್‌ ಒಂದರಲ್ಲಿ ನಡೆದ ಘಟನೆಯ ವಿಷಯವಾಗಿ ಶಹರ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದನು.

ಮೊಬೈಲ್‌ ಕದ್ದ ವ್ಯಕ್ತಿ ಹೊಟೇಲ್ ಬಿಲ್ ಕೊಡದ ಗಲಾಟೆ ಮಾಡಿದ್ದ ವ್ಯಕ್ತಿಯ ಪರವಾಗಿ‌ ಪೊಲೀಸ್‌ ಠಾಣೆಗೆ ಬಂದಿದ್ದ ಎಂದು ಹೇಳಲಾಗಿದೆ. ಒಳಗೆ ವಿಚಾರಣೆ ನಡೆಯುತ್ತಿದ್ದಾಗ ಆಚೆ ಮಹಿಳಾ ಸಿಬ್ಬಂದಿಯೊಬ್ಬರ ಜೊತೆ ಮಾತನಾಡುತ್ತ ಅವರ ಮೊಬೈಲ್ ಕದ್ದಿದ್ದಾನೆ.

ಆರೋಪಿತ ಖತರ್ನಾಕ್ ಖದೀಮನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

courtesy : News18 ಕನ್ನಡ

ಹಿಂದಿನ ಸುದ್ದಿ : ಪೊಲೀಸರು ತಮ್ಮ ಖಾಸಗಿ ವಾಹನದ ಮೇಲೆ “POLICE” ಅಂತ ಹಾಕಿಸಿಕೊಳ್ಳಬಹುದೇ.? ಇಲ್ಲಿದೆ ಗೃಹ ಸಚಿವರ ಸ್ಪಷ್ಟನೆ.!

ಜನಸ್ಪಂದನ ನ್ಯೂಸ್‌, ಬೆಂಗಳೂರು : ಪೊಲೀಸರು ತಮ್ಮ ಖಾಸಗಿ ವಾಹನಗಳ (Private vehicles) ಮೇಲೆ “POLICE” ಎಂಬ ಸ್ಟಿಕ್ಕರ್‌ ಹಾಕಿಸಿಕೊಳ್ಳುವುದಕ್ಕೆ ಕಾನೂನಿನಲ್ಲಿ (In law) ಇದಕ್ಕೆ ಅವಕಾಶ ಇದೆಯೇ? ಹೀಗೊಂದು ಪ್ರಶ್ನೆ ಬಂದಾಗ ಸ್ವತಃ ಗೃಹ ಸಚಿವ ಜಿ.ಪರಮೇಶ್ವರ್‌ (Home Minister G. Parameshwar) ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ (Staff) ಅಷ್ಟೆ ಏಕೆ ಅವರ ಕುಟುಂಬಸ್ಥರು ಕೂಡ ತಮ್ಮ ಖಾಸಗಿ (Private) ವಾಹನದ ಮೇಲೆ “ಪೊಲೀಸ್‌” ಎಂದು ಬರೆಸಿರುವುದನ್ನು ನಾವು ದಿನ ನಿತ್ಯ ನೋಡುತ್ತೇವೆ. ಈ ಬಗ್ಗೆ ಶ್ರವಣ ಬೆಳಗೊಳದ ಶಾಸಕ ಬಾಲಕೃಷ್ಣ ಸಿ. ಎನ್ (MLA Balakrishna C. N) ಅವರು ರಾಜ್ಯದ ಪೊಲೀಸ್​ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ತಮ್ಮ ಸ್ವಂತ (Private) ವಾಹನದ ಮೇಲೆ ಪೊಲೀಸ್​ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ.? ಎಂದು ಪ್ರಶ್ನಿಸಿದ್ದರು.

ಇದನ್ನು ಓದಿ : ತನಿಷ್ಕ್ ಜ್ಯುವೆಲ್ಲರ್ಸ್​ ಶೋರೂಮ್​ಗೆ ನುಗ್ಗಿ 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ ; ವಿಡಿಯೋ ನೋಡಿ.!

ಶಾಸಕರ ಈ ಪ್ರಶ್ನೆಗೆ ಸ್ವತಃ ಗೃಹ ಸಚಿವ ಡಾ.‌ಜಿ.ಪರಮೇಶ್ವರ (G̤Parameshwara) ಸ್ಪಷ್ಟನೆ ನೀಡಿದ್ದು, ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ (Officers and staff) ‌ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ (There is no provision in law) ಎಂದು ಸ್ಪಷ್ಟವಾಗಿ ಉತ್ತರಿಸಿದ್ದಾರೆ.

ಒಂದು ವೇಳೆ ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳಾಗಲ್ಲಿ ಅಥವಾ ಸಿಬ್ಬಂದಿಗಳಾಗಲ್ಲಿ ತಮ್ಮ ಸ್ವಂತ (ಖಾಸಗಿ) ವಾಹನದ ಮೇಲೆ “POLICE” ಎಂದು ಬರೆಸುವಂತಿಲ್ಲ. ಹಾಗೊಂದು ವೇಳೆ ಬರೆಸಿದ್ದೇ ಆದರೆ ಅದು ಕಾನೂನು ಉಲ್ಲಂಘಿಸಿದಂತೆ ಎಂದು ಗೃಹ ಸಚಿವ ಡಾ.‌ಜಿ.ಪರಮೇಶ್ವರ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ : ಯುವತಿಯ ಮೇಲೆ ಒಮ್ಮೆಲೇ ಹತ್ತಾರು ಬೀದಿ ನಾಯಿಗಳ ದಾಳಿ : ಭಯಾನಕ Video ವೈರಲ್.?

ಪೊಲೀಸ್‌ ಸಿಬ್ಬಂದಿಗೆ ಪೊಲೀಸ್‌ ಇಲಾಖೆಯಿಂದ ಕೊಡಲ್ಪಟ್ಟ ಇಲಾಖೆಯ ವಾಹನಗಳ ಮೇಲೆ ಪೊಲೀಸ್‌ (POLICE) ಎಂಬ ಸ್ಟಿಕ್ಕರ್‌ (Sticker) ಅಂಟಿಸಲಾಗಿರುತ್ತದೆ. ಇದು ಇಲಾಖೆಯ ವತಿಯಿಂದ ಅಧಿಕೃತವಾಗಿ ಅಂಟಿಸಲಾದ ಸ್ಟಿಕ್ಕರ್‌ ಹಾಗೆಯೇ ಸಿಬ್ಬಂದಿಗೆ ಇಲಾಖೆ ವತಿಯಿಂದ ಸಿಗುವ ವಾಹನಗಳ ಮೇಲೂ ಸಹ POLICE ಅಂತ ಹೆಸರು ಇದ್ದೇ ಇರುತ್ತೆ.

ಸ್ವಂತ (Privet) ವಾಹನದ ಮೇಲೆ ಪೊಲೀಸ್ ಅಧಿಕಾರಿಗಳಾಗಲ್ಲಿ ಅಥವಾ ಸಿಬ್ಬಂದಿಗಳಾಗಲ್ಲಿ ಪೊಲೀಸ್ ಎಂದು ಬರೆಸಿದ್ದರೇ ಅವರ ವಿರುದ್ಧ 2022 ರ ಸರ್ಕಾರದ ಸುತ್ತೋಲೆ (Government Circular) ಪ್ರಕಾರ ಕಾನೂನು ಕ್ರಮ (Legal action) ಆಗುತ್ತದೆ ಎಂದು ಗೃಹ ಸಚಿವ ಡಾ. ಜಿ‌.ಪರಮೇಶ್ವರ ಲಿಖಿತ ಉತ್ತರ ನೀಡಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!