Sunday, December 22, 2024
HomeNational Newsದೇಶದ ಅತಿ ದೊಡ್ಡ IT ದಾಳಿ: ಹಣ ಎಣಿಕೆಗಾಗಿ 36 ಯಂತ್ರಗಳ ಬಳಕೆ.!
spot_img

ದೇಶದ ಅತಿ ದೊಡ್ಡ IT ದಾಳಿ: ಹಣ ಎಣಿಕೆಗಾಗಿ 36 ಯಂತ್ರಗಳ ಬಳಕೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (Income Tax Department Officers) ದಾಳಿ ಮಾಡಿ ಚಿನ್ನಾಭರಣ ಮತ್ತು ಕೋಟ್ಯಂತರ ಹಣವನ್ನು ವಶಕ್ಕೆ (Seize the money) ಪಡೆದುಕೊಂಡಿರುತ್ತಾರೆ.

ಇವರು ವಶಕ್ಕೆ ಪಡೆದ ಚಿನ್ನಾಭರಣ, ಹಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.

ಇದನ್ನು ಓದಿ : Health : ಈ ಎಲೆಯ ನೀರು ಸೇವಿಸಿದರೆ ಸಾಕು ನಿಮ್ಮ ಬಿಳಿ ಕೂದಲು ಕಪ್ಪಾಗುವುದು.!‌

ದೇಶದ ಇತಿಹಾಸದಲ್ಲಿ ಐಟಿ ದಾಳಿಯಲ್ಲಿ ಇದು ಅತ್ಯಂತ ದೊಡ್ಡದಾಗಿದ್ದು (biggest IT attack in the country’s history), ಬರೋಬ್ಬರಿ 10 ದಿನ ಕಾರ್ಯಾಚರಣೆ (10 days operation) ನಡೆದಿದೆ ಎಂದು ವರದಿಯಾಗಿದೆ. 10 ದಿನದಲ್ಲಿ ಅಧಿಕಾರಿಗಳಿಗೆ ಸಿಕ್ಕ ಹಣ ಎಷ್ಟು ಅಂತ ಕೇಳಿದ್ರೆ ನಿಮ್ಮ ತಲೆ ತಿರುಗುವುದಂತು ಗ್ಯಾರಂಟಿ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೇಶದ ಅತಿ ದೊಡ್ಡ ದಾಳಿಯನ್ನು ಒಡಿಶಾ ರಾಜ್ಯದಲ್ಲಿ (State of Odisha) ನಡೆಸಿದ್ದಾರೆ. ಒಡಿಶಾ ರಾಜ್ಯದ ಮದ್ಯ ತಯಾರಿಕಾ ಕಂಪನಿ (A liquor manufacturing company) ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನ (Baud Distilleries Pvt) ಬಹುತೇಕ ಎಲ್ಲಾ ಬ್ರಾಂಚ್‌ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ನೀರಿನಿಂದ ಆಚೆ ಜಿಗಿದು ಹಾವನ್ನೇ ಬೇಟೆಯಾಡಲು ಮುಂದಾದ ಮೀನು; ವಿಡಿಯೋ Viral.!

ಅಧಿಕಾರಿಗಳು ಬರೋಬ್ಬರಿ 10 ದಿನ ದಾಳಿ ನಡೆಸಿ 352 ಕೋಟಿ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ (352 crore Rs. The money has been seized) ಎನ್ನಲಾಗಿದೆ. ಬೆಲೆಬಾಳುವ ವಸ್ತುಗಳನ್ನು ನೆಲದಡಿಯಲ್ಲಿ ಸಂಗ್ರಹಿಸಿದ್ದು, ಅವುಗಳನ್ನು ಪತ್ತೆ ಮಾಡಲು ವಿಶೇಷ ಸ್ಕ್ಯಾನಿಂಗ್ ವ್ಹೀಲ್ ಎಂಬ ಯಂತ್ರವನ್ನು (A machine called a special scanning wheel) ಅಧಿಕಾರಿಗಳು ಬಳಸಿಕೊಂಡಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ವೇಳೆ ಸಿಕ್ಕ ಹಣವನ್ನು ಎಣಿಸಲು ಬರೋಬ್ಬರಿ 36 ಹಣ ಎಣಿಕೆಯ ಯಂತ್ರಗಳನ್ನು (36 cash counting machines) ತರಿಸಿಕೊಂಡಿದ್ದರು. ಹಣ ಎಣಿಸಲು ವಿವಿಧ ಬ್ಯಾಂಕ್‌ಗಳ ನೌಕರರನ್ನು ಕೂಡ ಬಳಸಿಕೊಳ್ಳಲಾಗಿತ್ತಂತೆ. ದಾಳಿ ವೇಳೆ ಸಿಕ್ಕ ಹಣದ ಕೆಲ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಶೀರ್ಷಿಕೆಯಡಿಯಲ್ಲಿ ವೈರಲ್ ಆಗುತ್ತಿವೆ.

ಇದನ್ನು ಓದಿ : ಚಳಿಗಾಲದಲ್ಲಿ Brain ಸ್ಟ್ರೋಕ್‌ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?

ದಾಳಿಯಲ್ಲಿ ವಶಕ್ಕೆ ಪಡೆಯಲಾದ ಹಣವನ್ನು ಭಾರೀ ಭದ್ರತೆಯಲ್ಲಿ ಮೂಟೆಗಳಲ್ಲಿ ತುಂಬಿಸಿ ಸಾಗಿಸಲಾಯಿತು (It was packed in sacks under heavy security and transported). ಇನ್ನೂ ಆದಾಯ ತೆರಿಗೆ ಅಧಿಕಾರಿಗಳು ದಾಳಿಯ ಪ್ರತಿಯೊಂದು ಕ್ಷಣವನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಸದ್ಯ ಈ ಹಣವನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಬಿಗಿ ಭದ್ರತೆಯಲ್ಲಿ ಠೇವಣಿ ಇರಿಸಲಾಗಿದೆ (Deposited under tight security) ಎಂದು ವರದಿಯಾಗಿದೆ.

ಆಗಸ್ಟ್‌ನಲ್ಲಿ ಈ ಐಟಿ ದಾಳಿ ನಡೆದಿತ್ತು. ದಾಳಿ ನಡೆಸಿದ ಅಧಿಕಾರಿಗಳನ್ನು ಕೇಂದ್ರ ಸರ್ಕಾರ (central government) ಗೌರವಿಸಿದೆ. ಈ ಮಹಾ ಐಟಿ ದಾಳಿ ಆದಾಯ ತೆರಿಗೆ ತನಿಖಾ ಅಧಿಕಾರಿ ಎಸ್‌ಕೆ ಝಾ ಮತ್ತು ಹೆಚ್ಚುವರಿ ನಿರ್ದೇಶಕ ಗುರುಪ್ರೀತ್ ಸಿಂಗ್ ಅವರ ನೇತೃತ್ವದಲ್ಲಿ (Headed by Income Tax Investigation Officer SK Jha and Additional Director Gurpreet Singh) ನಡೆದಿತ್ತು ಎಂದು ವರದಿ ತಿಳಿಸಿದೆ.

ಹಿಂದಿನ ಸುದ್ದಿ : ಮರಕ್ಕೆ ಕಾರು ಡಿಕ್ಕಿ: ಬಿಮ್ಸ್ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ ಮೂವರ ಸಾವು.!

ಜನಸ್ಪಂದನ ನ್ಯೂಸ್, ಬಳ್ಳಾರಿ : ಕಾರೊಂದು ನಿಯಂತ್ರಣ ತಪ್ಪಿ (out of control) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬಳ್ಳಾರಿಯ ಮೂವರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡ ಘಟನೆ ಬಳ್ಳಾರಿ ತಾಲೂಕಿನ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ (Adjacent to Andhra Pradesh border) ವಿಡುಪನಕಲ್ಲು – ಚೇಳ್ಳಗುರ್ಕಿ ಮಧ್ಯೆ ರವಿವಾರ (ಡಿ.1) ಬೆಳಗಿನ ಜಾವ ಸಂಭವಿಸಿದೆ.

ಇದನ್ನು ಓದಿ : Special news : ಮುಖಕ್ಕೆ ಬ್ಲಾಂಕೆಟ್ ಹೊದ್ದಿಕೊಂಡು ಮಲಗುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ (Cancer specialist), ಡಾ. ಗೋವಿಂದರಾಜುಲು, ನೇತ್ರ ತಜ್ಞ (Ophthalmologist) ಡಾ. ಯೋಗೀಶ್ ಮತ್ತು ವಕೀಲ (Lawyer) ವೆಂಕಟನಾಯ್ಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ವೈದ್ಯ ಅಮರೇಗೌಡ ಪಾಟೀಲ್ ಎಂಬುವರಿಗೆ ಗಂಭೀರ ಗಾಯವಾಗಿದ್ದು (serious injuries), ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬ್ಯಾಂಕಾಕ್ ಪ್ರವಾಸ (Bangkok trip) ಮುಗಿಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣದ (Bangalore Airport) ಮೂಲಕ ಅನಂತಪುರಂ ಮಾರ್ಗವಾಗಿ (via Ananthapuram) ಈ ನಾಲ್ವರು ಬಳ್ಳಾರಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನು ಓದಿ : ಮಹಿಳೆಯರ ಒಳ ಉಡುಪು ಧರಿಸಿ ಮಾರ್ಕೆಟ್ ನಲ್ಲಿ ರೀಲ್ಸ್; ಮುಂದೆನಾಯ್ತು? Video ನೋಡಿ.!

ವಕೀಲ ವೆಂಕಟನಾಯ್ಡು ಅವರು ಕಾರನ್ನು ಡ್ರೈವ್ ಮಾಡುತ್ತಿದ್ದರು. ಆದರೆ ನಿದ್ರೆಯ ಮಂಪರಿನಲ್ಲಿ ಚೇಳ್ಳಗುರ್ಕಿ ಇನ್ನು 5 ಕಿ. ಮೀ. ಇರುವಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ.

ಅಮರೇಗೌಡ ಅವರ ಐ ಪೋನ್ ಅಪಘಾತದ ಮೆಸೇಜ್ ನೀಡಿದ್ದು, ಸಂಬಂಧಿಕರಿಗೆ ಮಾಹಿತಿ ಹೋಗಿದೆ. ಅಮರೇಗೌಡ ಅವರಿಗೆ ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಡಾ. ಗೋವಿಂದರಾಜುಲು ಅವರು ಖ್ಯಾತರಾಗಿದ್ದರು. ಬಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿತ್ತು

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments