Tuesday, October 22, 2024
spot_img
spot_img
spot_img
spot_img
spot_img
spot_img
spot_img

ಶಿಶು ಅಭಿವೃದ್ಧಿ ಯೋಜನೆ : ಜಿಲ್ಲೆಯಾದ್ಯಂತ 577 ಅಂಗನವಾಡಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಶಿಶು ಅಭಿವೃದ್ಧಿ ಯೋಜನೆಯಡಿ ಬಾಗಲಕೋಟೆ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ನೀವೂ  ಈ ಲೇಖನದಲ್ಲಿ ಪಡೆಯಬಹುದಾಗಿದೆ.

ಇದನ್ನು ಓದಿ : SSLC ಪಾಸಾದವರಿಗೆ ಪವರ್‌ಮ್ಯಾನ್ ಹುದ್ದೆಗೆ ಅರ್ಜಿ ಆಹ್ವಾನ.!

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪಾಸಾದ ಮಹಿಳಾ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಹುದ್ದೆಗಳ ಕುರಿತ ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ.

ಹುದ್ದೆಯ ವಿವರ :

ಉದ್ಯೋಗ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಹುದ್ದೆಗಳ ಹೆಸರು : ಕಾರ್ಯಕರ್ತೆ, ಸಹಾಯಕಿ
ಒಟ್ಟು ಹುದ್ದೆಗಳ ಸಂಖ್ಯೆ : 577
ಅಂಗನವಾಡಿ ಸಹಾಯಕಿ ಹುದ್ದೆಗಳ ಸಂಖ್ಯೆ : 106
ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ಸಂಖ್ಯೆ : 471

 

ಇದನ್ನು ಓದಿ : Special News : ಸಂಬಂಧದಲ್ಲಿ ಸ್ವತಂತ್ರವಾಗಿರಲು ಬಯಸುತ್ತಾರೆ ಈ ರಾಶಿಯವರು.!

ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳಿಗೆ ಅರ್ಹತೆಗಳು :

* ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ ತೇರ್ಗಡೆ ಆಗಿರಬೇಕು.
* ಅಂಗನವಾಡಿ ಸಹಾಯಕಿ ಹುದ್ದೆಗೆ 10ನೇ ತರಗತಿ ತೇರ್ಗಡೆ ಆಗಿರಬೇಕು.
* ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ತುಂಬಿರಬೇಕು. ಗರಿಷ್ಠ 35 ವರ್ಷ ವಯಸ್ಸು ದಾಟಿರಬಾರದು.
* ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಸಲ್ಲಿಸುವ ವಿಧಾನ :

* “karnemakaone.kar.nic.in/abcd/ApplicationForm_JA_org.aspx” ವೆಬ್‌ಗೆ ಭೇಟಿ ನೀಡಿ.
* ಹುದ್ದೆ ಬಯಸುವ ಜಿಲ್ಲೆ ಬಾಗಲಕೋಟೆ >> ತಾಲ್ಲೂಕು >> ಅಧಿಸೂಚನೆ ಸಂಖ್ಯೆ >> ಹುದ್ದೆ’ ಆಯ್ಕೆ ಮಾಡಿ.
* ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿ. ಆನ್‌ಲೈನ್‌ ಅರ್ಜಿ ನಮೂನೆ ಓಪನ್‌ ಆಗುತ್ತದೆ.
* ಕೇಳಲಾದ ಸಂಪೂರ್ಣ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
* ಅಗತ್ಯ ದಾಖಲೆಗಳನ್ನು ಆಯಾ ಹೆಸರಿನ ಮುಂದೆ ಇರುವ ಆಯ್ಕೆ ಬಟನ್‌ ಕ್ಲಿಕ್‌ ಮಾಡಿ ಅಪ್‌ಲೋಡ್ ಮಾಡಿರಿ.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಅಕ್ಟೋಬರ್‌ 16, 2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ನವ್ಹಂಬರ್‌ 15, 2024
ಇದನ್ನು ಓದಿ : ವಿಚ್ಛೇದನದ ಬಳಿಕ ಸೊಸೆ, ಅತ್ತೆ-ಮಾವನ ಮನೆಯಲ್ಲಿ ಇರುವಂತಿಲ್ಲ; High court ಮಹತ್ವದ ತೀರ್ಪು.!
ಅಗತ್ಯ ದಾಖಲೆಗಳು :

   1. ಜನನ ಪ್ರಮಾಣ ಪತ್ರ/ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ/ಪಿಯುಸಿ ಅಂಕಪಟ್ಟಿ.
2. ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.
3. ವಾಸಸ್ಥಳ ದೃಢೀಕರಣ ಪತ್ರ.
4. ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ.
5. ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
6. ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ.
7. ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.
8. ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ.
9. ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ.
10. ಇತರೆ ಅಗತ್ಯ ಮತ್ತು ಸಂಬಂಧಿತ ದಾಖಲೆಗಳು.

ಉದ್ಯೋಗ ವಿವರ :

ಹುದ್ದೆಯ ಹೆಸರು ಬಾಗಲಕೋಟೆ ಜಿಲ್ಲೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ
ವಿವರ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಸೂಚನೆ
ಪ್ರಕಟಣೆ ದಿನಾಂಕ : 16-10-2024
ಕೊನೆ ದಿನಾಂಕ : 15-11-2024
ಉದ್ಯೋಗ ವಿಧ : ಪೂರ್ಣಾವಧಿ
ಉದ್ಯೋಗ ಕ್ಷೇತ್ರ : ಸರ್ಕಾರಿ ವಲಯ
ವೇತನ ವಿವರ : INR 10000 to 15000 /Month

 

ಇದನ್ನು ಓದಿ : Health : ಈ ರೋಗಗಳಿಗೆ ಅತ್ಯುತ್ತಮ ಈ ನಿತ್ಯ ಪುಷ್ಪ.!

ಉದ್ಯೋಗ ಸ್ಥಳ :

ವಿಳಾಸ ಬಾಗಲಕೋಟೆ ಜಿಲ್ಲೆಯಾದ್ಯಂತ ನೇಮಕ
ಸ್ಥಳ : ಬಾಗಲಕೋಟೆ ಜಿಲ್ಲೆಯಾದ್ಯಂತ ನೇಮಕ.
ಪ್ರದೇಶ : ಕರ್ನಾಟಕ.
ಅಂಚೆ ಸಂಖ್ಯೆ : 587101

 

ಪ್ರಮುಖ ಲಿಂಕ್‌ :

https://anganwadirecruit.kar.nic.in/

Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img