ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿಯಲ್ಲಿ KSRTC ಕಂಡಕ್ಟರ್ ಮೇಲೆ ಹಲ್ಲೆ ನಡೆದ ಪ್ರಕರಣ ಈಗ ಬಿಗ್ ಟ್ವಿಸ್ಟ್ (big twist) ಪಡೆದುಕೊಂಡಿದೆ. ಇದೀಗ ಯುವತಿಯೋರ್ವಳು ನೀಡಿದ ದೂರಿನನ್ವಯ ಕಂಡಕ್ಟರ್‌ನ ವಿರುದ್ಧವೇ ಪೊಲೀಸರು ಪೋಕ್ಸೋ (POCSO) ಕೇಸ್ ದಾಖಲಿಸಿದ್ದಾರೆ.
ನಿನ್ನೆ ದಿನ (ದಿ.21) ಯುವತಿಯೋರ್ವಳು KSRTC ಬಸ್ಸಿನಲ್ಲಿ ಟಿಕೇಟ್ (ticket) ಕೊಡುವಂತೆ ಮರಾಠಿಯಲ್ಲಿ ಕೇಳಿದ್ದಾರೆ. ಆಗ ಕಂಡಕ್ಟರ್ (conductor), ಏಕೆ ಕನ್ನಡ ಬರೋದಿಲ್ವ, ಕನ್ನಡದಲ್ಲೇ ಕೇಳಿ ಅಂತ ಬೆಳಗಾವಿಯ ಸುಳೇಬಾವಿ ಹಾಗೂ ಬಾಳೆಕುಂದ್ರಿ ಮಾರ್ಗ (middle of the Sulebavi and Balekundri routes) ಮಧ್ಯದಲ್ಲಿ ಎಂದಿದ್ದಾರಂತೆ. ಇಷ್ಟಕ್ಕೆ ಕಂಡಕ್ಟರ್ ಮೇಲೆ ಮರಾಠಿ ಯುವಕರು ಬಸ್ ನಿಲ್ಲಿಸಿ ಹಲ್ಲೆ (attacked) ಮಾಡಿದ್ದರು ಅಂತ ಆರೋಪಿಸಲಾಗಿದೆ.
ಇದನ್ನು ಓದಿ : ಯುವತಿ ಜೊತೆ ಪಾಲಿಕೆ ಆಯುಕ್ತ ಚಕ್ಕಂದ : ಪತ್ನಿ ಎಂಟ್ರಿ ; ಮುಂದೆನಾಯ್ತು? ವಿಡಿಯೋ ನೋಡಿ.!
ಮರಾಠಿ ಯುವಕರ ಹಲ್ಲೆಯಿಂದ KSRTC ಬಸ್ ಕಂಡಕ್ಟರ್ ಮಹದೇವ ಹುಕ್ಕೇರಿ (Mahadeva Hukkeri) ಅವರನ್ನು ಬಿಮ್ಸ್ ಆಸ್ಪತ್ರೆಗೆ (BIMS Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೂವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (judicial custody) ಒಪ್ಪಿಸಲಾಗಿದೆ.
ಇದನ್ನು ಓದಿ : Arrest ಮಾಡಲು ಹೋದಾಗ ಹಲ್ಲೆ ಮಾಡಿದ ರೌಡಿಶೀಟರ್ ; ಗುಂಡು ಹಾರಿಸಿದ ಪೊಲೀಸ್.!
ಇದೀಗ Conductor ನ ಮೇಲಿನ ಹಲ್ಲೆ ಪ್ರಕರಣ ತಿರುವು ಪಡೆದುಕೊಂಡಿದೆ. ಮರಾಠಿ ಯುವಕರನ್ನು ಕರೆಸಿ ಹಲ್ಲೆ ಮಾಡಿಸಿದ್ದಂತ ಬಾಲಕಿಯ ಮೇಲೆ ನಿರ್ವಾಹಕ (Conductor) ಮಹದೇವ ಹುಕ್ಕೇರಿ ದೌರ್ಜ್ಯನ್ಯಕ್ಕೆ ಯತ್ನಿಸಿದ್ದ ಎಂದು ಆರೋಪಿಸಿ ಯುವತಿಯೋರ್ವಳು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಮಾರಿಹಾಳ ಪೊಲೀಸರು ಕಂಡಕ್ಟರ್ ಮೇಲೆ POCSO Case ದಾಖಲು ಮಾಡಿದ್ದಾರೆಂದು ತಿಳಿದು ಬಂದಿದೆ.
ಹಿಂದಿನ ಸುದ್ದಿ : ಪೋನ್ ಪೇ ಮೂಲಕ ಲಂಚ ಪಡೆದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್‌ಪೆಕ್ಟರ್ (Inspector, Directorate of Civil Rights Enforcement) ಗೀತಾ ಮತ್ತು ಖಾಸಗಿ ವ್ಯಕ್ತಿ ರಿಚರ್ಡ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನು ಓದಿ : ಯುವತಿ ಜೊತೆ ಪಾಲಿಕೆ ಆಯುಕ್ತ ಚಕ್ಕಂದ : ಪತ್ನಿ ಎಂಟ್ರಿ ; ಮುಂದೆನಾಯ್ತು? ವಿಡಿಯೋ ನೋಡಿ.!
ಇನ್ಸ್‌ಪೆಕ್ಟರ್ ಗೀತಾ ಜಾತಿ ಪ್ರಮಾಣಪತ್ರದ ನೈಜತೆ ಪರಿಶೀಲಿಸುವುದಕ್ಕೆ (To verify the genuineness of caste certificate) ಪೋನ್ ಪೇ ಮೂಲಕ ಲಂಚ ಪಡೆದಿದ್ದರು (Received bribe through phone pay) ಎಂದು ತಿಳಿದು ಬಂದಿದೆ.
ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ (State Sewage Disposal Board) ವತಿಯಿಂದ ಮನೆ ಹಕ್ಕು ಪಡೆಯಲು ಜಾತಿ ಪ್ರಮಾಣಪತ್ರ ನೀಡಬೇಕಾಗಿತ್ತು (Caste certificate had to be given to get house right). ಹೀಗಾಗಿ ದಾಖಲೆ ನೀಡುವಂತೆ ದೂರುದಾರರು ಮನವಿ ಸಲ್ಲಿಸಿದ್ದರು. ಈ ಸಂಬಂಧ 25 ಸಾವಿರ ರೂ. ಲಂಚ ನೀಡುವಂತೆ ಮಹಿಳಾ ಇನ್ಸ್‌ಪೆಕ್ಟರ್ ಕೇಳಿದ್ದರು.
ಇದನ್ನು ಓದಿ : ಅರೆಸ್ಟ್ ಮಾಡಲು ಹೋದಾಗ ಹಲ್ಲೆ ಮಾಡಿದ ರೌಡಿಶೀಟರ್ ; ಗುಂಡು ಹಾರಿಸಿದ ಪೊಲೀಸ್.!
ಈ ಹಿನ್ನಲೆಯಲ್ಲಿ ಲೋಕೇಶ್ ಆರೋಪಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲಂಚ ನೀಡಲು ಇಷ್ಟವಿಲ್ಲದ ಲೋಕೇಶ್ ಅವರು ಪೋನ್ ಪೇ ಮೂಲಕ ಹಣ ಕಳುಹಿಸಿದ್ದರು. ಈ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ಗೀತಾ ಮತ್ತು ಖಾಸಗಿ ವ್ಯಕ್ತಿ ರಿಚರ್ಡ್ ನನ್ನು ಲೋಕಾಯುಕ್ತ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕಿಯ ದೂರು ಆಧರಿಸಿ ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆ (Marihal Police Station) ಯ ಪೊಲೀಸರು ಕಂಡಕ್ಟರ್ ಮಹದೇವ ಹುಕ್ಕೇರಿ ವಿರುದ್ಧ ಪೋಕ್ಸೋ ಕೇಸ್ (POCSO case) ದಾಖಲಿಸಿರುವುದಾಗಿ ತಿಳಿದು ಬಂದಿದೆ.