ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ (Chikkodi of Belagavi District) ನಂದಿಕುರಳಿ ಕ್ರಾಸ್ ಬಳಿ ಎರಡು ಬೈಕುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ (A terrible accident) ಪೊಲೀಸ್ ಕಾನ್ಸಟೇಬಲ್ ಮೃತಪಟ್ಟ ಘಟನೆ ನಡೆದಿದೆ.
ಮೃತರು ಪೊಲೀಸ್ ಕಾನ್ಸ್‌ಟೇಬಲ್ ಮಂಜುನಾಥ್ ಸತ್ತಿಗೇರಿ (26) ಎಂದು ತಿಳಿದು ಬಂದಿದೆ.
ಇದನ್ನು ಓದಿ : ವೃದ್ದರನ್ನು ಬಹಳ ಹೊತ್ತು ಕಾಯಿಸಿದ ಅಧಿಕಾರಿಗಳಿಗೆ ನಿಂತು ಕೆಲಸ ಮಾಡುವ ಶಿಕ್ಷೆ ನೀಡಿದ IAS ಆಫೀಸರ್.!
ಮೂಲತಃ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ (Mahalingapura in Bagalkote district) ತಾಲ್ಲೂಕಿನ ಕೆಸರಗೊಪ್ಪ ಗ್ರಾಮದವರು ಎಂದು ತಿಳಿದು ಬಂದಿದೆ.
ಕಾನ್ಸ್‌ಟೇಬಲ್ ಮಂಜುನಾಥ್ ಕಳೆದ ಐದು ವರ್ಷಗಳಿಂದ (For the last five years) ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಆರು ತಿಂಗಳ ಹಿಂದಷ್ಟೇ ಇವರ ಮದುವೆಯಾಗಿತ್ತು ಎಂದು ಹೇಳಲಾಗುತ್ತಿದೆ.
ಕುಡಚಿಯಿಂದ ಬೈಕ್ ಮೇಲೆ ಬರುವಾಗ ಅಂಕಲಿ- ರಾಯಬಾಗ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.