ಜನಸ್ಪಂದನ ನ್ಯೂಸ್, ಅಥಣಿ : ಕಳೆದ 3 ದಿನಗಳ ಹಿಂದೆ ನಾಪತ್ತೆಯಾಗಿದ್ದ (missing) ಅಥಣಿ ವಕೀಲರೊಬ್ಬರು (lawyer) ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅಥಣಿ ನ್ಯಾಯವಾದಿ ಸುಭಾಷ್ ಪಾಟಣಕರ ( 56) ಕೃಷ್ಣಾ ನದಿಯಲ್ಲಿ (Krishna River) ಇಂದು (ಡಿ.6) ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನು ಓದಿ : Health : ಉಗುರುಗಳೇ ಹೇಳುತ್ತವೆ ನಿಮ್ಮ ಆರೋಗ್ಯದ ಗುಟ್ಟು.!
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ (Kokatanur village of Athani taluk) ನಿವಾಸಿಯಾದ ವಕೀಲ ಸುಭಾಷ್ ಅವರು ಡಿ. 3ರಂದು ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.
ನ್ಯಾಯವಾದಿ ಸುಭಾಷ್ (55) ಅವರು ಕಾಣೆಯಾಗಿದ್ದಾರೆ ಎಂದು ವದಂತಿ ಹಬ್ಬಿತ್ತು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ತನಿಖೆಗಿಳಿದ ಅಥಣಿ ಪೊಲೀಸರಿಗೆ ಹಳ್ಯಾಳ (Halyal) ಗ್ರಾಮದ ಹೊರವಲಯದ ಕೃಷ್ಣಾ ನದಿ ಸೇತುವೆ ಮೇಲೆ ನ್ಯಾಯವಾದಿ ಸುಭಾಷ್ ಬೈಕ್ ಬಿಟ್ಟಿದ್ದರು ಎನ್ನಲಾಗಿದೆ.
ಇದನ್ನು ಓದಿ : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ; ಆರೋಪಿಗೆ ಕಠಿಣ ಶಿಕ್ಷೆ ಪ್ರಕಟ.!
ಈ ಆಧಾರದ ಮೇಲೆ ನದಿಗೆ ಹಾರಿರಬಹುದು ಎಂದು ಶಂಕಿಸಲಾಗಿತ್ತು. ನಿನ್ನೆಯಿಂದ ಪೊಲೀಸರು, ಅಗ್ನಿಶಾಮಕ ಹಾಗೂ ಎಸ್.ಡಿ.ಆರ್.ಎಫ್ (SDRF) ತಂಡದಿಂದ ಶೋಧ ಕಾರ್ಯ ನಡೆದಿತ್ತು.
ಅಥಣಿ ಪೊಲೀಸ್ ಠಾಣೆಯಲ್ಲಿ (Athani police station) ಪ್ರಕರಣ ದಾಖಲಾಗಿದೆ.