ಜನಸ್ಪಂದನ ನ್ಯೂಸ್, ಬೆಳಗಾವಿ : ಹೆತ್ತ ಮಗು ಅಂತ ನೋಡದೆ ತಾಯಿಯೊಬ್ಬಳು ಎರಡು ತಿಂಗಳ ಹಸುಗೂಸನ್ನು ಕೆರೆಗೆ ಎಸೆದಿರುವ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ಕಣಬರಗಿ (Kanbaragi of Belgaum Taluk) ಗ್ರಾಮದಲ್ಲಿ ನಡೆದಿದೆ.
ಹೆಣ್ಣು ಮಗುವಿಗೆ ಪಿಡ್ಸ್ ಬರುತ್ತೆ ಅಂತಾ ಹೆತ್ತ ತಾಯಿ ಎರಡು ತಿಂಗಳ ಹೆಣ್ಣು (A two month old baby girl) ಹಸುಗೂಸನ್ನು ಕೆರೆಗೆ ಎಸೆದು ಓಡುತ್ತಿದ್ದಂತೆಯೇ ಹಿಂಬಾಲಿಸಿದ (follow) ಸ್ಥಳೀಯರು ಕೂಡಲೇ ಆಕೆಯನ್ನ ಹಿಡಿದು ಕೆರೆ ಕಡೆಗೆ ಕರೆದುಕೊಂಡು ಬಂದಿದ್ದಾರೆ.
ಇದನ್ನು ಓದಿ : Hubli : ಇನ್ಸ್‌ಪೆಕ್ಟರ್‌ನಿಂದ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ.?
ಇದೇ ವೇಳೆ ಅಲ್ಲೇ ಕೆರೆಯಲ್ಲಿ (lake) ದನ ಕರುಗಳನ್ನು ತೊಳೆಯುತ್ತಿದ್ದ ಯುವಕರು ಹೀಗೆ ಮಗುವನ್ನು ಕೆರೆಗೆ ಎಸೆಯುವುದನ್ನು ಗಮನಿಸಿ ತಕ್ಷಣವೇ ಕೆರೆಗೆ ಹಾರಿ ಮಗು ರಕ್ಷಣೆ (save) ಮಾಡಿದ್ದಾರೆ.
ಹೀಗೆ ರಕ್ಷಣೆ ಮಾಡಿದ ಮಗುವನ್ನ ಆಕೆ ಕೈಗೆ ಕೊಟ್ಟು ಬುದ್ದಿವಾದ ಹೇಳಿದ್ದಾರೆ. ಆ್ಯಂಬುಲೆನ್ಸ್ ಕರೆಸಿ ಮಗುವನ್ನ ನಗರದಲ್ಲಿರುವ ಚಿಕ್ಕ ಮಕ್ಕಳ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಇದನ್ನು ಓದಿ : ಕಾರು-ಮಿನಿ Bus ಡಿಕ್ಕಿ ; ನವವಿವಾಹಿತರು ಸೇರಿ ನಾಲ್ವರ *ವು.!
ಹೀಗೆ ಮಗುವನ್ನು ಕೆರೆಗೆ ಎಸೆದ ತಾಯಿಯನ್ನು ಕಣಬರಗಿ ಗ್ರಾಮದ ನಿವಾಸಿ 35 ವರ್ಷದ ಶಾಂತಿ ಎಂದು ಹೇಳಲಾಗುತ್ತಿದೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆಳಗಾವಿ ಪೊಲೀಸರು, ಬಳಿಕ ಆಸ್ಪತ್ರೆಗೆ ಹೋಗಿ ಮಗುವಿನ ಆರೋಗ್ಯದ ಕುರಿತು ವಿಚಾರಿಸಿ ಅಲ್ಲೇ ಇದ್ದ ತಾಯಿ ಶಾಂತಿಯನ್ನ ಬಂಧಿಸಿದ್ದಾರೆ (arrested).
ಇದನ್ನು ಓದಿ : Belagavi : ಕೈದಿಯಿಂದ ಜೈಲರ್ ಮೇಲೆ ಮಾರಣಾಂತಿಕ ಹಲ್ಲೆ.!
ಮಾಳಮಾರುತಿ ಪೊಲೀಸ್ ಠಾಣಾ (Malamaruti Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.