Sunday, December 22, 2024
HomeCrime NewsBijapur : ಮನೆಗೆ ನುಗ್ಗಿ ಬಿಜೆಪಿಯ ಕಾರ್ಯಕರ್ತನ ಬರ್ಬರ ಹತ್ಯೆ.!
spot_img

Bijapur : ಮನೆಗೆ ನುಗ್ಗಿ ಬಿಜೆಪಿಯ ಕಾರ್ಯಕರ್ತನ ಬರ್ಬರ ಹತ್ಯೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಬಿಜೆಪಿ ಕಾರ್ಯಕರ್ತನನ್ನು ಮಾವೋವಾದಿಗಳು ಹತ್ಯೆ ಮಾಡಿದ ಘಟನೆ ನಡೆದಿದ್ದು, ಈ ಮೂಲಕ ಕಳೆದ ಏಳು ದಿನಗಳಲ್ಲಿ ಛತ್ತೀಸ್‌ಗಢದಲ್ಲಿ (Chhattisgarh) ಐವರು ನಾಗರಿಕರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಹತ್ಯೆಯಾದ ವ್ಯಕ್ತಿ 35 ವರ್ಷದ ಕುಡಿಯಾಮ್‌ (Kudiyaam) ಎಂದು ವರದಿಯಾಗಿದ್ದು, ಬಿಜಾಪುರ ಜಿಲ್ಲೆಯ ಸೋಮನ್‌ಪಲ್ಲಿ (Somanpally in Bijapur District) ಗ್ರಾಮದ ನಿವಾಸಿ ಎಂದು ವರದಿ ತಿಳಿಸಿದೆ.

ಇದನ್ನು ಓದಿ : ವಿವಾಹಿತ ಮಹಿಳೆಯರಿಂದ ಕ್ರೌರ್ಯ ಕಾನೂನು ದುರ್ಬಳಕೆ : Supreme Court

ಇವರು ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು, ಬಹಳ ದಿನಗಳಿಂದ ನಕ್ಸಲರ (Naxals) ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ ಎನ್ನಲಾಗಿದೆ.

ಈ ವಿಚಾರ ತಿಳಿದ ಮಾವೋವಾದಿಗಳು ಕುಡಿಯಾಮ್‌ ಮನೆಗೆ ನುಗ್ಗಿ ಅವರನ್ನು ಹೊರಗೆ ಎಳೆದು ಕ್ರೂರವಾಗಿ ಹತ್ಯೆ ಮಾಡಿ (Kill brutally) ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಮಾಹಿತಿ ಸಿಕ್ಕ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ (post mortem examination ) ಕಳುಹಿಸಿದ್ದಾರೆ. ಮಾವೋವಾದಿಗಳನ್ನು ಪತ್ತೆ ಹಚ್ಚಲು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ (search operation) ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ : ಸ್ಮಾರ್ಟ್‌ಫೋನ್‌ಲ್ಲಿ ಇರುವ aeroplane ಮೋಡ್’ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

ನಕ್ಸಲರು ಕೆಲ ದಿನಗಳ ಹಿಂದೆ ಇಬ್ಬರು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರನ್ನು (Former Gram Panchayat Member) ಹತ್ಯೆ ಮಾಡಿದ್ದರು. ಬಳಿಕ ಡಿಸೆಂಬರ್ 6ರಂದು ಅಂಗನವಾಡಿ ಸಹಾಯಕಿಯನ್ನು (Anganawadi Helper) ಕೊಲೆ ಮಾಡಿದ್ದರು.

ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಗಗ್ಡಾ ಅವರು, ಬಸ್ತಾರ್‌ನಲ್ಲಿ ಹತ್ಯೆಗೀಡಾದ ಬಹುತೇಕ ಬಿಜೆಪಿ ನಾಯಕರು ಬಿಜಾಪುರದವರೇ ಆಗಿರುವುದರಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದಿನ ಸುದ್ದಿ : ವಿವಾಹಿತ ಮಹಿಳೆಯರಿಂದ ಕಾನೂನು ದುರ್ಬಳಕೆ; ಸುಪ್ರೀಂ ಕೋರ್ಟ್

ಜನಸ್ಪಂದನ ನ್ಯೂಸ್, ಡೆಸ್ಕ್ : ತಮ್ಮ ಸ್ವಾರ್ಥಕ್ಕಾಗಿ (own selfishness) ಗಂಡ ಮತ್ತು ಅತ್ತೆ ಮಾವಂದಿರಿಗೆ ಕಿರುಕುಳ ನೀಡಲು ವಿವಾಹಿತ ಮಹಿಳೆಯರು (Married women) ಕ್ರೌರ್ಯ ಕಾನೂನನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಈ ಮೂಲಕ ಕ್ರೌರ್ಯ ಕಾನೂನನ್ನು ದುರ್ಬಳಕೆ (Abuse of Cruelty Law) ಮಾಡಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಇದನ್ನು ಓದಿ : ಮದುವೆಯಾಗಿ 7 ವರ್ಷ ಕಳೆದರೂ First Night ಗೆ ಒಪ್ಪದ ಮಹಿಳೆ; ಹೈಕೋರ್ಟ್ ಹೇಳಿದ್ದೇನು.?

ಕೆಲ‌ ದಿನಗಳ ಹಿಂದೆ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ (34) ಅವರು ಹಣ ಸುಲಿಗೆ ಮಾಡಲು ಪತ್ನಿ ಮತ್ತು ಆಕೆಯ ಕುಟುಂಬ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು (false case) ದಾಖಲಿಸುತ್ತಿದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರಿಗೆ ನ್ಯಾಯಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಗಳ ಮಧ್ಯೆ ಸುಪ್ರೀಂ ಕೋರ್ಟ್ ಈ ಕಳವಳ ವ್ಯಕ್ತಪಡಿಸಿದೆ.

ಗಂಡ ಮತ್ತು ಆತನ ಸಂಬಂಧಿಕರಿಂದ ಕ್ರೌರ್ಯವನ್ನು ದಂಡಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅನ್ನು ವಿವಾಹಿತ ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ (misuse) ಎಂದು ನ್ಯಾಯಾಲಯ ಮಂಗಳವಾರ ಪ್ರಕರಣದ (ದಾರಾ ಲಕ್ಷ್ಮಿ ನಾರಾಯಣ ಮತ್ತು ಇತರರು ವಿರುದ್ಧ ತೆಲಂಗಾಣ ರಾಜ್ಯ ಮತ್ತು ಇನ್ನೊಂದು) ವಿಚಾರಣೆ ವೇಳೆ ಹೇಳಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ಈ ನಿಬಂಧನೆಯು (Provision) ಮಹಿಳೆಯರನ್ನು ಕೌಟುಂಬಿಕ ಹಿಂಸಾಚಾರ ಮತ್ತು ಕಿರುಕುಳದಿಂದ ರಕ್ಷಿಸುವ ಉದ್ದೇಶವನ್ನು (Intended to protect against domestic violence and harassment) ಹೊಂದಿದ್ದು, ವೈಯಕ್ತಿಕ ದ್ವೇಷವನ್ನು ಬಿಚ್ಚಿಡಲು ಮಹಿಳೆಯರು ಈ ನಿಬಂಧನೆಯನ್ನು ಸಾಧನವಾಗಿ ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ.

ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಕೆಲವು ಮಹಿಳೆಯರು ಪತಿ ಮತ್ತು ಅವರ ಕುಟುಂಬಸ್ಥರನ್ನು ತಮ್ಮ ಅಸಮಂಜಸ ಬೇಡಿಕೆಗಳನ್ನು (unreasonable demands) ಅನುಸರಿಸುವಂತೆ ಒತ್ತಾಯಿಸಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ನ್ಯಾಯಪೀಠವು ತಿಳಿಸಿದೆ.

ಮಹಿಳೆಯೊಬ್ಬರು ಪತಿ ಮತ್ತು ಅತ್ತೆ ಮಾವನ ವಿರುದ್ಧ ದಾಖಲಿಸಿದ್ದ ಕ್ರೌರ್ಯ ಮತ್ತು ವರದಕ್ಷಿಣೆ ಪ್ರಕರಣಗಳನ್ನು (Dowry cases) ವಜಾಗೊಳಿಸುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತೆಲಂಗಾಣ ಹೈಕೋರ್ಟ್ (Telangana High Court) ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಮತ್ತು ಅವರ ಕುಟುಂಬ ಸದಸ್ಯರು ಮೇಲ್ಮನವಿ ಸಲ್ಲಿಸಿದ್ದರು. ಪತಿ ಡಿವೋರ್ಸ್ ಕೋರಿದ ಬಳಿಕ ಮಹಿಳೆ ಕೇಸ್ ದಾಖಲಿಸಿದ್ದರು. ವಾದಗಳನ್ನು ಪರಿಶೀಲಿಸಿದ (Arguments checked) ನಂತರ, ಆಕೆ ತನ್ನ ವೈಯಕ್ತಿಕ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಪ್ರಕರಣ ದಾಖಲಿಸಿದ್ದಾಳೆ. ಮಹಿಳೆಯರನ್ನು ರಕ್ಷಿಸುವ ಉದ್ದೇಶದ ಕಾನೂನು ನಿಬಂಧನೆಗಳನ್ನು ಈಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ (Supreme Court) ತೀರ್ಮಾನಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments