ಜನಸ್ಪಂದನ ನ್ಯೂಸ್, ತುಮಕೂರು : ತುಮಕೂರಿನ (Tumkur) ಜಯನಗರ ಬಳಿಯ ಚನ್ನಪ್ಪನಪಾಳ್ಯದಲ್ಲಿ ಪ್ರೀತಿಸಿದ ಹುಡುಗಿಯ ಮನೆ ಮುಂದೆ ಯುವಕನೊಬ್ಬ ಹುಡುಗಿ ಮನೆ ಮುಂದೆಯೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ (suicide) ಘಟನೆ ಇಂದು (ಶನಿವಾರ) ನಡೆದಿದೆ.
ಮೃತ ದುರ್ದೈವಿ ಮಂಜುನಾಥ್ (32) ಎಂದು ತಿಳಿದು ಬಂದಿದೆ.
ಇದನ್ನು ಓದಿ : ಇಂಡಿಯಾ ಗೇಟ್ ಬಳಿ ಕೇವಲ ಟವೆಲ್ ಕಟ್ಟಿಕೊಂಡು Dance ಮಾಡಿ ಛೀಮಾರಿ ಹಾಕಿಸಿಕೊಂಡ Model.!
ಹುಡುಗಿಯ ಕುಟುಂಬಸ್ಥರು ಮದುವೆ ಮಾಡಿಕೊಡಲು ನಿರಾಕರಿಸಿದ (refused to marry) ಹಿನ್ನೆಲೆಯಲ್ಲಿ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಟಿಟಿ ವಾಹನದ ಚಾಲಕನಾಗಿರುವ ಮಂಜುನಾಥ್, ಕೆಲ ತಿಂಗಳಿನಿಂದ ಪಕ್ಕದ ಮನೆಯ ಹುಡುಗಿಯನ್ನು ಲವ್ ಮಾಡುತ್ತಿದ್ದ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದ (love) ಕಾರಣ ಮದುವೆಯಾಗಲು (marriage) ಸಹ ಒಪ್ಪಿದ್ದರು. ಹೀಗಾಗಿ ಯುವಕ ಮದುವೆ ಮಾಡಿಕೊಡುವಂತೆ ಹುಡುಗಿಯ ಮನೆಯವರನ್ನ ಕೇಳಿದ್ದನಂತೆ.
ಆದರೆ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ಒಪ್ಪರಲಿಲ್ಲ. ಅಪ್ರಾಪ್ತೆ ಇರುವ ಹಿನ್ನೆಲೆಯಲ್ಲಿ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ.
ಇದನ್ನು ಓದಿ : ಇವರೇ ನೋಡಿ 33 ವರ್ಷಗಳ ಸೇವಾವಧಿಯಲ್ಲಿ 57 ಬಾರಿ ವರ್ಗಾವಣೆಯಾದ IAS ಅಧಿಕಾರಿ.!
ಆದರೆ ಹುಡುಗಿಯನ್ನು ಹುಚ್ಚನಂತೆ ಪ್ರೀತಿಸಿದ್ದ ಮಂಜುನಾಥ್, ಆಕೆ ಸಿಗುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ತಡರಾತ್ರಿ ಹುಡುಗಿಯ ಮನೆ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ (committed suicide by hanging himself) ಎಂದು ತಿಳಿದು ಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.
ಘಟನೆಯ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ (Jayanagar Police Station) ಪ್ರಕರಣ ದಾಖಲಾಗಿದೆ.
ಹಿಂದಿನ ಸುದ್ದಿ : ಭೀಕರ ರಸ್ತೆ ಅಪಘಾತ; ಐವರು ಸ್ಥಳದಲ್ಲೇ ಸಾವು.!
ಜನಸ್ಪಂದನ ನ್ಯೂಸ್, ವಿಜಯಪುರ : ವಿಜಯಪುರ ಜಿಲ್ಲೆಯ ತಾಳಿಕೋಟೆಯ (Talikote in Vijayapura district) ಬಿಳೆಬಾವಿ ಕ್ರಾಸ್ ಸಮೀಪ ಕಾರು ಮತ್ತು ತೊಗರಿ ಕಟಾವು ಮಷಿನ್ (Car and Togari harvester) ನಡುವೆ ಭೀಕರ ಅಫಘಾತ ಸಂಭವಿಸಿ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಇದನ್ನು ಓದಿ : Belagavi : ನಾಪತ್ತೆಯಾಗಿದ್ದ ಅಥಣಿ ವಕೀಲನ ಶವ ಕೃಷ್ಣಾ ನದಿಯಲ್ಲಿ ಪತ್ತೆ.!
ಮೃತಪಟ್ಟವರು ನಿಂಗಪ್ಪಾ ಪಾಟೀಲ್ (55), ಶಾಂತವ್ವ ಶಂಕರ ಪಾಟೀಲ್ (45), ಭೀಮಶಿ ಸಂಕನಾಳ (65), ಶಶಿಕಲಾ ಜೈನಾಪೂರ (50) ಹಾಗೂ ದಿಲೀಪ್ ಪಾಟೀಲ್ (45) ಎಂದು ತಿಳಿದು ಬಂದಿದೆ.
ಸಾವನ್ನಪ್ಪಿದವರು ವಿಜಯಪುರ ತಾಲೂಕು ಅಲಿಯಾಬಾದ್ (Vijayapura Taluk Aliyabad) ನಿವಾಸಿಗಳು ಎಂದು ತಿಳಿದು ಬಂದಿದೆ.
ಕಾರಿಗೆ ತೊಗರಿ ಕಟಾವು ಮಷಿನ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಪುರುಷರು, ಇಬ್ಬರು ಮಹಿಳೆಯರು (Three men, two women) ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!
ಯಾದಗಿರಿ ಜಿಲ್ಲೆಯ ಅಗ್ನಿ ಗ್ರಾಮದಲ್ಲಿ ಈ ಐವರು ಹುಡುಗಿ (ಕನ್ಯಾ) ನೋಡಲು ತೆರಳಿದ್ದು, ವಾಪಸ್ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಕ್ರೂಸರ್ ಓವರ್ ಟೇಕ್ (overtake) ಮಾಡುವ ಭರದಲ್ಲಿ ತೊಗರಿ ಕಟಾವು ಮಷಿನ್ಗೆ ಕಾರು ಮುಖಾಮುಖಿ ಡಿಕ್ಕಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ : Health : ಬೆಳಿಗ್ಗೆ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?
ಘಟನೆ ನಡೆದ ಸ್ಥಳಕ್ಕೆ ಬಂದ ತಾಳಿಕೋಟೆ ಪೊಲೀಸರು, ಕಾರಿನಲ್ಲಿದ್ದ ಶವಗಳನ್ನು ಜೆಸಿಬಿ ಮೂಲಕ ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಐವರ ಶವಗಳನ್ನು ಬಸವನ ಬಾಗೇವಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ತಾಳಿಕೋಟೆ ಪೊಲೀಸ್ ಠಾಣಾ (Talikote Police Station) ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.