ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಿತ್ತೂರು (Kittur) ತಾಲೂಕಿನ ಪರಸನಟ್ಟಿ ಗ್ರಾಮದ ಕೆರೆಗೆ ಹಾರಿ ಯೋಧರೊಬ್ಬರು (soldier) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಭಾರತೀಯ ಸೇನೆಯಲ್ಲಿ (Indian army) ಸೇವೆ ಸಲ್ಲಿಸುತ್ತಿದ್ದ ಯೋಧ ನರೇಶ ಯಲ್ಲಪ್ಪ ಅಗಸರ (28) ಮೃತ ದುರ್ದೈವಿ.
ಇದನ್ನು ಓದಿ : ಒಂದು ಭಾಷೆಯ ಅಳಿವು ಉಳಿವಿನ ಮೂಲ ಸಮಸ್ಯೆಯೇ ಶಿಕ್ಷಣ ಮಾಧ್ಯಮ : ಪ್ರೋ. ಅಕ್ಕಿ.
ಇವರು ಚನ್ನಮ್ಮನ ಕಿತ್ತೂರು ತಾಲೂಕಿನ ದೇಗಾಂವ ಗ್ರಾಮದವರು ಎಂದು ತಿಳಿದು ಬಂದಿದೆ.
ಯೋಧ, ಐದು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ 20 ದಿನಗಳ ಹಿಂದೆಯಷ್ಟೇ ರಜೆಯ ಹಿನ್ನೆಲೆ ಊರಿಗೆ ಬಂದಿದ್ದರು. ರಜೆ (holiday) ಮುಗಿದು ನಾಳೆ ಮತ್ತೆ ಸೇನಾ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ, ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನು ಓದಿ : Health : ಕಾಲು ಸೆಳೆತದಿಂದ ಬಳಲುತ್ತಿದ್ದೀರಾ.? ಈ ರೀತಿ ಮಾಡಿ ನಿಮಿಷಗಳಲ್ಲಿ ಮಾಯವಾಗುತ್ತೆ ನೋವು.!
ಇನ್ನೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿ ಮೃತದೇಹದ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಕಿತ್ತೂರು ಪಿಎಸ್ಐ ಪ್ರವೀಣ ಗಂಗೋಳ ಪ್ರವೀಣ ಕೋಟಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ (check) ನಡೆಸಿದರು.
ಹಿಂದಿನ ಸುದ್ದಿ : ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಬಿಪಿಯನ್ನು ಹೀಗೆ Control ಮಾಡಿ.!
ಜನಸ್ಪಂದನ ನ್ಯೂಸ್, ಆರೋಗ್ಯ : ಮಾನವನಲ್ಲಿ ರಕ್ತದೊತ್ತಡ ಸಮಸ್ಯೆ (blood pressure problem) ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಂದು ವೇಳೆ ದೇಹದಲ್ಲಿ ರಕ್ತದೊತ್ತಡದ ಪ್ರಮಾಣ ಹೆಚ್ಚಾದರೆ ಹೃದಯಕ್ಕೆ ಅಪಾಯ ಉಂಟಾಗಿ, ಪ್ರಾಣವನ್ನೇ ಕಳೆದುಕೊಳ್ಳಬಹುದು.
ಇದನ್ನು ಓದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!
ಸಾಮಾನ್ಯವಾಗಿ ರಕ್ತದೊತ್ತಡ ಸುಮಾರು 120/80 mmHg ಇರಬೇಕು. ಆದರೆ 130/80 mmHg ಗಿಂತ ಹೆಚ್ಚಿದ್ದರೆ, ಇದು ಹೈ ಬಿಪಿ ಸಮಸ್ಯೆಯನ್ನು ಸೂಚಿಸುತ್ತದೆ.
ಲಕ್ಷಣಗಳು :
ಎದೆ ನೋವು (chest pain)
ಮೂರ್ಛೆ ಹೋಗುವುದು
ಮೂಗಿನಲ್ಲಿ ರಕ್ತಸ್ರಾವ (Bleeding in the nose)
ವಿಪರೀತ ತಲೆನೋವು
ಉಸಿರಾಟದಲ್ಲಿ ಸಮಸ್ಯೆ
ಕಾರಣಗಳು :
ಅನುವಂಶಿಕವಾಗಿ (Hereditary) ಅಥವಾ ವಯಸ್ಸಾದ ಮೇಲೆಯು ರಕ್ತದೊತ್ತಡ ಸಮಸ್ಯೆ ಉಂಟಾಗಬಹುದು.
ಧೂಮಪಾನ ಮತ್ತು ಅತಿಯಾದ ಮದ್ಯಪಾನ, ಕಳಪೆ ಆಹಾರ (poor food), ದೈಹಿಕ ಚಟುವಟಿಕೆಯ ಕೊರತೆಯು ಅಧಿಕ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.
ಇದನ್ನು ಓದಿ : ಅಪ್ರಾಪ್ತ ಪತ್ನಿ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಸಹ ಅತ್ಯಾಚಾರಕ್ಕೆ ಸಮ; Highcourt.!
ದೀರ್ಘಕಾಲದ ಒತ್ತಡವು (Chronic stress) ಸಹ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿದೆ.
ಅಧಿಕ ಕೊಲೆಸ್ಟ್ರಾಲ್, ಬೊಜ್ಜು ಮತ್ತು ಮಧುಮೇಹ (diabetes) ಸಹ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಉಂಟು ಮಾಡುತ್ತದೆ.
ಅಧಿಕ ರಕ್ತದೊತ್ತಡದಿಂದ ಈ ಗಂಭೀರ ಸಮಸ್ಯೆಗಳು ಉಂಟಾಗಬಹುದು :
* ಮುಂದೊಂದು ದಿನ ಮೂತ್ರಪಿಂಡದ ಕಾರ್ಯಗಳ (Kidney) ಮೇಲೆ ಅಧಿಕ ರಕ್ತದೊತ್ತಡವು ಪರಿಣಾಮ ಬೀರುತ್ತದೆ.
* ಅಧಿಕ ರಕ್ತದೊತ್ತಡ ಹೃದಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದ ಪರಿಧಮನಿಯ ಕಾಯಿಲೆಯ ಅಥವಾ ಹೃದಯ ವೈಫಲ್ಯ (heart failure) ಉಂಟಾಗುತ್ತದೆ.
* ಕಣ್ಣುಗಳಲ್ಲಿನ ರಕ್ತನಾಳಗಳಿಗೆ (blood vessels) ಹಾನಿಯನ್ನು ಸಹ ಉಂಟು ಮಾಡುತ್ತದೆ ಎನ್ನಲಾಗಿದೆ.
ಇದನ್ನು ಓದಿ : ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ PM ವಿದ್ಯಾಲಕ್ಷ್ಮೀ ಯೋಜನೆ ; 10 ಲಕ್ಷದವರೆಗೆ ಸಾಲ.!
* ಅಧಿಕ ರಕ್ತದೊತ್ತಡದಿಂದ ಮೆದುಳಿಗೆ ಸರಬರಾಜು (Supply to the brain) ಮಾಡುವ ರಕ್ತನಾಳಗಳಲ್ಲಿ ಅಡಚಣೆ ಅಥವಾ ಸಮಸ್ಯೆ ಉಂಟಾಗುತ್ತದೆ.
ನಿಯಂತ್ರಿಸುವುದು ಹೇಗೆ.?
ಮನಸ್ಸಿಗೆ ಉಲ್ಲಾಸ ಮತ್ತು ವಿಶ್ರಾಂತಿಯನ್ನು ನೀಡುವ ಧ್ಯಾನ ಅಥವಾ ಯೋಗವನ್ನು (Meditation or Yoga) ಅಭ್ಯಾಸ ಮಾಡಿ.
ಸೋಡಿಯಂ ಸೇವನೆಯನ್ನು ಕಡಿಮೆ (Reduce sodium intake) ಮಾಡುವುದು ಒಳ್ಳೆಯದು.
ಧೂಮಪಾನವನ್ನು ತ್ಯಜಿಸಿ ಮತ್ತು ಮದ್ಯವನ್ನು ಮಿತಿಗೊಳಿಸಿರಿ.
ಇದನ್ನು ಓದಿ : Belagavi : ಘಟಪ್ರಭಾ ನದಿ ಹಿನ್ನಿರಲ್ಲಿ ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲು.!
ಒತ್ತಡದ ಮಟ್ಟವನ್ನು ಮೇಲ್ವಿಚಾರಣೆ ಮಾಡಿ.
ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್ಗಳ ಸೇವನೆಯತ್ತ ಒತ್ತು ನೀಡಿ.
ಸಂಸ್ಕರಿಸಿದ ಆಹಾರ (Processed food) ಮತ್ತು ಸಕ್ಕರೆ ಪಾನೀಯಗಳನ್ನು ಕಮ್ಮಿ ಮಾಡಿ.
ನಡಿಗೆ, ಈಜು ಅಥವಾ ಸೈಕ್ಲಿಂಗ್ನಂತಹ ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಉತ್ತಮ.
ದೇಹದ ತೂಕ 5-10% ಕಳೆದುಕೊಳ್ಳುವುದರಿಂದ ಕೂಡ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಕಡಿಮೆ ಮಾಡಬಹುದು.