ಜನಸ್ಪಂದನ ನ್ಯೂಸ್, ಬೆಂಗಳೂರು : ಪೊಲೀಸರ ವಿಶೇಷ ಕಾರ್ಯಾಚರಣೆ ಗ್ರೂಪ್‌ಗೆ (Police Special Operations Group) ಸೇರಿದ ಕಮಾಂಡೋ (Commando) ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ (suicide attempt) ಘಟನೆ ಕೇರಳದಲ್ಲಿ (Kerala) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
35 ವರ್ಷದ ವಿನೀತ್ ಭಾನುವಾರ ರಾತ್ರಿ ವೇಳೆ ಮೃತಪಟ್ಟಿದ್ದಾರೆ.
ಇದನ್ನು ಓದಿ : ಬಿಸಿ ನೀರಿಗಾಗಿ ವ್ಯಕ್ತಿಯ ಹೊಸ ಟ್ರಿಕ್ ; Video ನೊಡಿದ್ರೆ ಬಿದ್ದು ಬಿದ್ದು ನಗುತ್ತಿರಾ.!
ಮಲಪ್ಪುರಂ ಜಿಲ್ಲೆಯ ಅರೆಕೋಡ್ (Arecode of Malappuram District) ಪೊಲೀಸ್ ಶಿಬಿರದಲ್ಲಿ ತನ್ನ ಸೇವಾ ರೈಫಲ್ ನಿಂದ ಗುಂಡು ಹಾರಿಸಿಕೊಂಡು (Shooting from a rifle) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಮೃತ ಕಮಾಂಡೋ ಗರ್ಭಿಣಿ ಪತ್ನಿಯ ಜೊತೆಯಲ್ಲಿರಲು ರಜೆ ಕೇಳಿದ್ದರು. ಆದ್ರೆ, ರಜೆ ನೀಡಲು ನಿರಾಕರಿಸಿದ (Refuse to grant leave) ಹಿನ್ನೆಲೆ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.
ಅವರು ತೀವ್ರ ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹಿಂದಿನ ಸುದ್ದಿ : ವೇಶ್ಯೆವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಐವರು ಮಹಿಳೆಯರ ರಕ್ಷಣೆ.!
ಜನಸ್ಪಂದನ ನ್ಯೂಸ್, ಮೈಸೂರು : ವೇಶ್ಯೆವಾಟಿಕೆ ನಡೆಸುತ್ತಿದ್ದ ಇಬ್ಬರನ್ನೂ ಬಂಧಿಸಿದ ಪೊಲೀಸ್ ಐವರು ಮಹಿಳೆಯರನ್ನು ರಕ್ಷಣೆ ಮಾಡಿದ ಘಟನೆ ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣೆಯ (Hebbalu Police Station) ಬಳಿ ಬಸವನಗುಡಿ ವೃತ್ತದ ಮನೆಯೊಂದರಲ್ಲಿ ನಡೆದಿದೆ.
ಇದನ್ನು ಓದಿ : ತಾಕತ್ತಿದ್ದರೆ ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರು, ಸಚಿವರನ್ನು ವಜಾ ಮಾಡಿ ; ಸ್ವಾಮೀಜಿ.!
ಇನ್ನೂ ಈ ಐವರು ಮಹಿಳೆಯರು ಮೈಸೂರು, ಹಾಸನ, ಕೆ.ಆರ್ ನಗರ (Mysore, Hassan, K. R. Nagar) ಮೂಲದವರಾಗಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ.
ಒಡನಾಡಿ ಸಂಸ್ಥೆ ಮುಖ್ಯಸ್ಥ (Head of the organization) ಸ್ಟ್ಯಾನ್ಲಿ ಪರುಶು ಅವರು ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಇದನ್ನು ಓದಿ : ತಾಕತ್ತಿದ್ದರೆ ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರು, ಸಚಿವರನ್ನು ವಜಾ ಮಾಡಿ ; ಸ್ವಾಮೀಜಿ.!
ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಈ ವೇಳೆ ವೇಶ್ಯಾವಾಟಿಕೆ (Prostitution) ನಡೆಸುತ್ತಿದ್ದ ಮಹಿಳೆ ಮತ್ತು ಓರ್ವ ಗ್ರಾಹಕನನ್ನು ಅರೆಸ್ಟ್ ಮಾಡಲಾಗಿದೆ.
ಹೆಬ್ಬಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.