ಜನಸ್ಪಂದನ ನ್ಯೂಸ್, ಬೆಂಗಳೂರು : ಸದ್ಯ ರಾಜ್ಯ ಪೊಲೀಸ್ ಇಲಾಖೆಯಲ್ಲಿ 18,581 ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಹೊರಬಿದ್ದಿದ್ದು, 1,11,330 ಅನುಮೋದಿತ ಹುದ್ದೆ (Approved post) ಇದ್ದು, ಅವುಗಳ ಪೈಕಿ ಶೇಕಡಾ 16.69 ರಷ್ಟು ಸಿಬ್ಬಂದಿ ಕೊರತೆ ಇದೆ ಎಂಬ ಅಂಶ ಬಯಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಹಂಪಿಯಲ್ಲಿ ವಿದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ (Gang rape and murder) ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ರಾಜ್ಯ ಪೊಲೀಸ್ ಇಲಾಖೆಯ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು “ಸಿಬ್ಬಂದಿ ಕೊರತೆ (Staff shortage) ಯು ಕಾನೂನು ಮತ್ತು ಸುವ್ಯವಸ್ಥೆ (Law and order) ಯನ್ನು ಕಾಪಾಡುವಲ್ಲಿ, ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ವಿವಿಧ ಸವಾಲುಗಳಿಗೆ ಕಾರಣವಾಗುತ್ತದೆ. ಇದು ಈಗಿರುವ ಸಿಬ್ಬಂದಿ ಮೇಲೆ ಹೆಚ್ಚಿನ ಕೆಲಸದ ಒತ್ತಡವನ್ನುಂಟು (Work stress) ಮಾಡುತ್ತದೆ” ಎಂದು ಹೇಳುತ್ತಾರೆ.
ಇದನ್ನು ಓದಿ : ನಾಯಿ ಮತ್ತು ನಾಗರಹಾವಿನ ಮಧ್ಯ ಕಾಳಗ ; ಗೆದ್ದವರ್ಯಾರು ಮತ್ತು ಸೋತವರ್ಯಾರು ಈ ವಿಡಿಯೋ ನೋಡಿ.!
ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPR and D) ಪ್ರಕಾರ ರಾಷ್ಟ್ರೀಯ ಸರಾಸರಿ 196.88 ಕ್ಕೆ (1 ಲಕ್ಷ ಜನಸಂಖ್ಯೆಗೆ) ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಪೊಲೀಸ್-ಸಾರ್ವಜನಿಕ ಅನುಪಾತವು 165.04 ರಷ್ಟಿದೆ. ಅಂದರೆ ಅನುಪಾತಲ್ಲಿ ಕಡಿಮೆ ಇರುವುದು ತಿಳಿದು ಬರುತ್ತದೆ.
ಪ್ರಸ್ತುತ, 6,591 ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳು ಮತ್ತು 819 ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಉಳಿದಿರುವ ಬಗ್ಗೆ ಅಧಿಕೃತ ಮಾಹಿತಿಯ ಪ್ರಕಾರ ತಿಳಿದು ಬರುತ್ತದೆ. ಹೆಚ್ಚುವರಿಯಾಗಿ, 2,107 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (City Armed Reserve/District Armed Reserve) ಮತ್ತು 3,830 ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (Karnataka State Reserve Police) ಹುದ್ದೆಗಳು ಭರ್ತಿಯಾಗಿಲ್ಲ.
ಇದನ್ನು ಓದಿ : ಮೊಬೈಲ್‌ನಲ್ಲಿ ಮಾತನಾಡುತ್ತಾ ಮಗುವನ್ನ ಆಟೋದಲ್ಲೇ ಬಿಟ್ಟು ಹೋದ ತಾಯಿ ; ಚಾಲಕ ಮಾಡಿದ್ದೇನು.? ಈ ವಿಡಿಯೋ ನೋಡಿ.!
ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದ್ದು, ಈ ಖಾಲಿ ಹುದ್ದೆಗಳ ಭರ್ತಿ ಕುರಿತು 600 ಸಬ್-ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 4,115 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಅದಕ್ಕೆ ನೇಮಕಾತಿ ಅಧಿಸೂಚನೆಯನ್ನು ಇನ್ನೂ ಹೊರಡಿಸಲಾಗಿಲ್ಲ ಎಂದು ಮಂಗಳವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ತಿಳಿದರು.
ಹಿಂದಿನ ಸುದ್ದಿ : ಪೊಲೀಸರು ತಮ್ಮ ಖಾಸಗಿ ವಾಹನದ ಮೇಲೆ “POLICE” ಅಂತ ಹಾಕಿಸಿಕೊಳ್ಳಬಹುದೇ.? ಇಲ್ಲಿದೆ ಗೃಹ ಸಚಿವರ ಸ್ಪಷ್ಟನೆ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಪೊಲೀಸರು ತಮ್ಮ ಖಾಸಗಿ ವಾಹನಗಳ (Private vehicles) ಮೇಲೆ “POLICE” ಎಂಬ ಸ್ಟಿಕ್ಕರ್ ಹಾಕಿಸಿಕೊಳ್ಳುವುದಕ್ಕೆ ಕಾನೂನಿನಲ್ಲಿ (In law) ಇದಕ್ಕೆ ಅವಕಾಶ ಇದೆಯೇ? ಹೀಗೊಂದು ಪ್ರಶ್ನೆ ಬಂದಾಗ ಸ್ವತಃ ಗೃಹ ಸಚಿವ ಜಿ.ಪರಮೇಶ್ವರ್ (Home Minister G. Parameshwar) ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ (Staff) ಅಷ್ಟೆ ಏಕೆ ಅವರ ಕುಟುಂಬಸ್ಥರು ಕೂಡ ತಮ್ಮ ಖಾಸಗಿ (Private) ವಾಹನದ ಮೇಲೆ “ಪೊಲೀಸ್” ಎಂದು ಬರೆಸಿರುವುದನ್ನು ನಾವು ದಿನ ನಿತ್ಯ ನೋಡುತ್ತೇವೆ. ಈ ಬಗ್ಗೆ ಶ್ರವಣ ಬೆಳಗೊಳದ ಶಾಸಕ ಬಾಲಕೃಷ್ಣ ಸಿ. ಎನ್ (MLA Balakrishna C. N) ಅವರು ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ತಮ್ಮ ಸ್ವಂತ (Private) ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ.? ಎಂದು ಪ್ರಶ್ನಿಸಿದ್ದರು.
ಇದನ್ನು ಓದಿ : ತನಿಷ್ಕ್ ಜ್ಯುವೆಲ್ಲರ್ಸ್ ಶೋರೂಮ್ಗೆ ನುಗ್ಗಿ 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ ; ವಿಡಿಯೋ ನೋಡಿ.!
ಶಾಸಕರ ಈ ಪ್ರಶ್ನೆಗೆ ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ (G̤Parameshwara) ಸ್ಪಷ್ಟನೆ ನೀಡಿದ್ದು, ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ (Officers and staff) ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ (There is no provision in law) ಎಂದು ಸ್ಪಷ್ಟವಾಗಿ ಉತ್ತರಿಸಿದ್ದಾರೆ.
ಒಂದು ವೇಳೆ ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳಾಗಲ್ಲಿ ಅಥವಾ ಸಿಬ್ಬಂದಿಗಳಾಗಲ್ಲಿ ತಮ್ಮ ಸ್ವಂತ (ಖಾಸಗಿ) ವಾಹನದ ಮೇಲೆ “POLICE” ಎಂದು ಬರೆಸುವಂತಿಲ್ಲ. ಹಾಗೊಂದು ವೇಳೆ ಬರೆಸಿದ್ದೇ ಆದರೆ ಅದು ಕಾನೂನು ಉಲ್ಲಂಘಿಸಿದಂತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿ : ಯುವತಿಯ ಮೇಲೆ ಒಮ್ಮೆಲೇ ಹತ್ತಾರು ಬೀದಿ ನಾಯಿಗಳ ದಾಳಿ : ಭಯಾನಕ Video ವೈರಲ್.?
ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಇಲಾಖೆಯಿಂದ ಕೊಡಲ್ಪಟ್ಟ ಇಲಾಖೆಯ ವಾಹನಗಳ ಮೇಲೆ ಪೊಲೀಸ್ (POLICE) ಎಂಬ ಸ್ಟಿಕ್ಕರ್ (Sticker) ಅಂಟಿಸಲಾಗಿರುತ್ತದೆ. ಇದು ಇಲಾಖೆಯ ವತಿಯಿಂದ ಅಧಿಕೃತವಾಗಿ ಅಂಟಿಸಲಾದ ಸ್ಟಿಕ್ಕರ್ ಹಾಗೆಯೇ ಸಿಬ್ಬಂದಿಗೆ ಇಲಾಖೆ ವತಿಯಿಂದ ಸಿಗುವ ವಾಹನಗಳ ಮೇಲೂ ಸಹ POLICE ಅಂತ ಹೆಸರು ಇದ್ದೇ ಇರುತ್ತೆ.
ಸ್ವಂತ (Privet) ವಾಹನದ ಮೇಲೆ ಪೊಲೀಸ್ ಅಧಿಕಾರಿಗಳಾಗಲ್ಲಿ ಅಥವಾ ಸಿಬ್ಬಂದಿಗಳಾಗಲ್ಲಿ ಪೊಲೀಸ್ ಎಂದು ಬರೆಸಿದ್ದರೇ ಅವರ ವಿರುದ್ಧ 2022 ರ ಸರ್ಕಾರದ ಸುತ್ತೋಲೆ (Government Circular) ಪ್ರಕಾರ ಕಾನೂನು ಕ್ರಮ (Legal action) ಆಗುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಲಿಖಿತ ಉತ್ತರ ನೀಡಿದ್ದಾರೆ.