Wednesday, March 12, 2025
HomeViral Videoಮದುವೆಯ ಮೆರವಣಿಗೆಯಲ್ಲಿ ಬಲವಂತವಾಗಿ ಕುದುರೆಗೆ ಸಿಗರೇಟ್ ಸೇದಿಸಿದ ಯುವಕರು ; Vedio ವೈರಲ್.!
spot_img
spot_img
spot_img
spot_img
spot_img

ಮದುವೆಯ ಮೆರವಣಿಗೆಯಲ್ಲಿ ಬಲವಂತವಾಗಿ ಕುದುರೆಗೆ ಸಿಗರೇಟ್ ಸೇದಿಸಿದ ಯುವಕರು ; Vedio ವೈರಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮದುವೆ ಮೆರವಣಿಗೆ ಸಂದರ್ಭದಲ್ಲಿ ಕೆಲ ಕಿಡಿಗೇಡಿ ಯುವಕರು ಬಲವಂತವಾಗಿ (forcibly) ಕುದುರೆಗೆ ಸಿಗರೇಟ್​ ಸೇದಿಸಿರುವ ಅಮಾನವೀಯತೆಯ ಆಘಾತಕಾರಿ ಘಟನೆಯೊಂದು (hocking incident) ನಡೆದಿದ್ದು, ಸದ್ಯ ಅದರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಮದುವೆ ಮೆರುವಣಿಗೆಗೆ (wedding procession) ಎಂದು ತಂದ ಕುದುರೆಗೆ ಕೆಲ ದುಷ್ಟ ಯುವಕರು ಕಿರುಕುಳ ನೀಡಿದ್ದಾರೆ. ಆ ದುಷ್ಟ ಯುವಕರು (mischievous youths) ಕುದುರೆಯನ್ನು ನೆಲದ ಮೇಲೆ ಮಲಗಿಸಿ ಬಲವಂತವಾಗಿ ಧೂಮಪಾನ ಮಾಡುವಂತೆ ಮಾಡಿದ್ದಾರೆ. ಅಲ್ಲದೆ ಒಬ್ಬ ವ್ಯಕ್ತಿ ತನ್ನ ಬೂಟುಗಳೊಂದಿಗೆ ಮಲಗಿದ ಕುದುರೆ ಮೇಲೆ ಪುಷ್​ಅಪ್ಸ್​ಗಳನ್ನು (push-ups) ಮಾಡಿದ್ದಾನೆ.

ವಿಡಿಯೋದಲ್ಲೇನಿದೆ :

ಕೆಲ ದುಷ್ಟ ಯುವಕರು ಮದುವೆ ಮೆರವಣಿಗೆಗೆ ಎಂದು ತಂದಿದ್ದ ಕುದುರೆ (horse) ಯನ್ನು ಹೇಗೋ ಕೆಳಗೆ ಮಲಗಿಸಿದ್ದಾರೆ ಇದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ನೆಲದ ಮೇಲೆ ಮಲಗಿದ ಕುದುರೆ ಬಾಯಿಗೆ ಬಲವಂತವಾಗಿ ಸಿಗರೇಟ್ (forced cigarette) ಒಂದು ತುರುಕಿ ಅದು ಸೇದುವಂತೆ ಮಾಡಿದ್ದಾರೆ. ಅಷ್ಟಕೆ ಸುಮ್ಮನಾಗಿ ಈ ದುರುಳರು ಮಲಗಿದ ಕುದುರೆ ಮೇಲೆ ಪುಷ್​ಅಪ್ಸ್​ಗಳನ್ನು (push-ups)  ಮಾಡುವುದನ್ನು ಸಹ ನೀವು ವಿಡಿಯೋ ದಲ್ಲಿ ಕಾಣಲು ಸಿಗುತ್ತದೆ.

ಕಿಡಿಗೇಡಿ ಯುವಕರ ಗುಂಪು ಕುದುರೆಗೆ ಇಷ್ಟೇಲಾ ಕಿರುಕುಳ (harass) ನೀಡಿದ್ದರು ಸಹ ಮದುವೆ ಪ್ರದರ್ಶನದಲ್ಲಿ ಭಾಗವಹಿಸಿದ್ದ ಯಾವುದೇ ಅತಿಥಿಗಳು ದುಷ್ಕರ್ಮಿ ಯುವಕರ ಕೃತ್ಯಗಳನ್ನು ಯಾರೂ ಕೂಡ ಪ್ರಶ್ನಿಸಲಿಲ್ಲ. ಅವರೆಲ್ಲರೂ ನೃತ್ಯ (Dance) ಮಾಡುವುದನ್ನು ಮತ್ತು ಪ್ರಾಣಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನೋಡಿ ಆನಂದಿಸಿದ್ದಾರೆ (enjoyed).

Instagram ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಒಬ್ಬ ವ್ಯಕ್ತಿ ತನ್ನ ಬೂಟುಗಳೊಂದಿಗೆ ಕುದುರೆಯ ಮೇಲೆ ಹತ್ತಿ ಅದರ ದೇಹದ ಮೇಲೆ ಪುಷ್-ಅಪ್‌ಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಮಲಗಿದ್ದ ಕುದುರೆ ಅಸಹಾಯಕವಾಗಿ (helplessly) ಮದುವೆಯ ಅತಿಥಿಗಳ ಕ್ರೂರ ಕೃತ್ಯ (cruel acts) ಗಳಿಗೆ ಬಲಿಯಾಯಿತು.

ಹಿಂದಿನ ಸುದ್ದಿ : ಹೋಳಿಗೆ ಪ್ರಿಯರಿಗೆ Shocking News ಕೊಟ್ಟ ಆಹಾರ ಇಲಾಖೆ.!

ಜನಸ್ಪಂದನ ನ್ಯೂಸ್, ಬೆಂಗಳೂರು : ಇನ್ನೇನು ಯುಗಾದಿ ಹಬ್ಬ (Yugadi Festival) ಬರುತ್ತಿರುವುದರಿಂದ ಅಂಗಡಿಗಳಲ್ಲಿ ರೆಡಿಮೇಡ್​ ಹೋಳಿಗೆಯ ಘಮ ಜೋರಾಗುತ್ತೆ. ಬಿಸಿ ಬಿಸಿ ಹೋಳಿಗೆ ಮಾಡಿ ಅದನ್ನು ಒಂದು ಪ್ಲಾಸ್ಟಿಕ್​​​ ಕವರ್ ನಲ್ಲಿ ಸೇರಿಸಿ ಇಡುತ್ತಾರೆ. ಆದ್ರೆ, ಅದನ್ನು ತಿನ್ನುವ ಮುನ್ನ ಜನರು ಎಚ್ಚರ ವಹಿಸುವುದು ಒಳ್ಳೆಯದು (People would do well to be careful).

ಯಾಕೆಂದರೆ ಹೋಟೆಲ್​ಗಳಲ್ಲಿ ಹೋಳಿಗೆ ಮಾಡಲು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದು (Plastic is being used to make Holige in hotels), ಈ ಹಿನ್ನೆಲೆ ಬೆಂಗಳೂರಿನ ಕೆಲ ಅಂಗಡಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Arrest ಮಾಡಲು ಹೋಗಿದ್ದ ಪೊಲೀಸರನ್ನೇ ತಪಾಸಣೆ ಮಾಡಿಸಿದ ಆರೋಪಿ ; ವಿಡಿಯೋ ವೈರಲ್.!

ಆಹಾರ ಇಲಾಖೆ ಅಧಿಕಾರಿಗಳು ಬೆಂಗಳೂರು ಹಾಗೂ ಮೈಸೂರಿನಲ್ಲಿ (Bangalore and Mysore) ತಪಾಸಣೆ ನಡೆಸಿದ್ದು, ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದೆ.

ಮೈಸೂರಿನ ಎರಡು ಅಂಗಡಿಗಳಲ್ಲಿ ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದೆ. ಹೀಗಾಗಿ ಮೈಸೂರಿನ ಎರಡು ಹೋಳಿಗೆ ಅಂಗಡಿಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Special news : ನೀವು ಹುಟ್ಟಿದ ತಿಂಗಳು ಯಾವ್ದು.? ನಿಮ್ಮ ಗುಣದ ಬಗ್ಗೆ ತಿಳಿದುಕೊಳ್ಳಿ.!

ಹೋಳಿಗೆಗೆ ಪ್ಲಾಸ್ಟಿಕ್ ಕವರ್ ಬಳಸಿದ್ರೆ ವಿಷಕಾರಿ ಅಂಶ (Toxicity) ಹೋಳಿಗೆ ಸೇರುವ ಸಾಧ್ಯತೆ ಇದೆ. ಇದರಿಂದ ಹೋಳಿಗೆಗೆ ಪ್ಲಾಸ್ಟಿಕ್​ ಬಳಸಬಾರದು ಎಂದು ಸೂಚಿಸಲಾಗಿದೆ. ಒಂದು ವೇಳೆ ಇಂತಹ ಹೋಳಿಗೆಯನ್ನು ನಾವು ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!