ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣದಲ್ಲಿ (social media) ಬರ್ತ್ ಡೇ ಪಾರ್ಟಿ ಕುರಿತಾದ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ನೋಡುಗರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಬರ್ತ್ ಡೇ ಪಾರ್ಟಿಯಲ್ಲಿ ಹೈಡ್ರೋನ್ ಬಲೂನ್ಗಳು ಸ್ಫೋಟಗೊಂಡ (Balloons burst) ಪರಿಣಾಮ ಯುವತಿಯ ಮುಖ ಸುಟ್ಟು ಹೋಗಿರುವ (The young woman’s face was burnt) ಘಟನೆ ವಿಯೆಟ್ನಾಂನ ಹನೋಯಿಯಲ್ಲಿ ನಡೆದಿದೆ.
ಇದನ್ನು ಓದಿ : ಯಾವ ರಾಶಿಯವರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಗೊತ್ತಾ.?
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಚ್ಚರಿಕೆ ವಹಿಸುವಂತೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಒಂದು ಕೈಯಲ್ಲಿ ಕೇಕ್ ಮತ್ತೊಂದು ಕೈಯಲ್ಲಿ ಬಲೂನ್ಗಳನ್ನು ಹಿಡಿದುಕೊಂಡಿರುವ ಯುವತಿ ಕ್ಯಾಂಡಲ್ ಊದಲು ಶುರು ಮಾಡಿದ್ದಾಳೆ. ಈ ವೇಳೆ ಹೈಡ್ರೋಜನ್ ಬಲೂನ್ಗಳಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲೇ ಸ್ಫೋಟಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : ಅಥಣಿ : ಭೀಕರ ರಸ್ತೆ ಅಪಘಾತ, ತಂದೆ-ಮಗಳ ಸಾವು.!
ಪರಿಣಾಮ ಬೆಂಕಿಯು ಯುವತಿ ಮುಖಕ್ಕೆ ತಗುಲಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಯುವತಿ ಗಿಯಾಂಗ್ ಮುಖಕ್ಕೆ ಬೆಂಕಿ ತಗುಲಿದ್ದು, ಆಕೆಯ ಮುಖದ ಮೇಲೆ ಕೆಲವು ತಿಂಗಳು ಸುಟ್ಟ ಕಲೆಗಳು ಇರುತ್ತವೆ. ಆಕೆ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
View this post on Instagram
ಹಿಂದಿನ ಸುದ್ದಿ : ಕೋರ್ಟ್ ಆವರಣದಲ್ಲಿಯೇ ಅತ್ತೆ – ಸೊಸೆ ಜಗಳ ; Vedio ನೋಡಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಗಳಲ್ಲಿ ಅತ್ತೆ (mother in law) ಸೊಸೆ ಮಧ್ಯೆ ಆಗಾಗ ಜಗಳ ನಡೆಯುತ್ತವೆ. ಇವರ ಗಲಾಟೆ ತಾರಕಕ್ಕೇರಿ ನ್ಯಾಯಾಲಯ, ಪೊಲೀಸ್ ಠಾಣೆಯ ಮೆಟ್ಟಿಲೇರಿದ ಉದಾಹರಣೆಗಳು ಸಾಕಷ್ಟಿವೆ.
ಇದೀಗ ಕೋರ್ಟ್ ಆವರಣದಲ್ಲಿಯೇ ಅತ್ತೆ ಸೊಸೆಯ (daughter in law) ಜಗಳವಾಡಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ : ಬಿಗ್ ಟ್ವಿಸ್ಟ್ ; ಬೆಳಗಾವಿಯಲ್ಲಿ ಹಲ್ಲೆಗೊಳಗಾಗಿದ್ದ ಕಂಡಕ್ಟರ್ ಮೇಲೆ ಬಿತ್ತು ಪೋಕ್ಸೋ ಕೇಸ್.!
ವಿಚಾರಣೆಗಾಗಿ ಬಂದಿದ್ದ ಸಂದರ್ಭ ಅತ್ತೆ- ಸೊಸೆ ಕೋರ್ಟ್ ಆವರಣದಲ್ಲಿಯೇ ಪರಸ್ಪರ ಕೈ ಮಿಲಾಯಿಸಿ ಜಗಳವಾಡಿದ್ದಾರೆ. ಇವರ ಜಗಳವನ್ನು ಕಂಡು ಅಲ್ಲಿದ್ದ ಜನರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ (In Nashik, Maharashtra) ಈ ಘಟನೆ ನಡೆದಿದ್ದು, ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ಅತ್ತೆ ಸೊಸೆ ಕೋರ್ಟ್ ಆವರಣದಲ್ಲಿಯೇ ಗಲಾಟೆ ಶುರು ಮಾಡಿದ್ದಾರೆ.
ಇದನ್ನು ಓದಿ : ಪೋನ್ ಪೇ ಮೂಲಕ ಲಂಚ ಪಡೆದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ.!
ಮೊದಲು ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ನಂತರ ಮಾತುಕತೆ ತಾರಕಕ್ಕೇರಿ ದೊಡ್ಡ ಜಗಳವೇ ನಡೆದಿದೆ. ಅತ್ತೆ ಸೊಸೆ ಪರಸ್ಪರ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲಿದ್ದ ಸಾರ್ವಜನಿಕರು ಗಲಾಟೆ ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ (The public tried to stop the commotion but could not). ಅಂತಿಮವಾಗಿ ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದರು ಎಂದು ವರದಿಯಿಂದ ತಿಳಿದು ಬಂದಿದೆ.
Ghar ke kalesh ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಫೆಬ್ರವರಿ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.3 ಲಕ್ಷ ವೀಕ್ಷಣೆ ಹಾಗೂ ಹಲವಾರು ಕಾಮೆಂಟ್ಸ್ (4.3 lakh views and many comments) ಪಡೆದುಕೊಂಡಿದೆ.
ಇದನ್ನು ಓದಿ : ಅರೆಸ್ಟ್ ಮಾಡಲು ಹೋದಾಗ ಹಲ್ಲೆ ಮಾಡಿದ ರೌಡಿಶೀಟರ್ ; ಗುಂಡು ಹಾರಿಸಿದ ಪೊಲೀಸ್.!
ಒಬ್ಬರು ನಿಜಕ್ಕೂ ಅತ್ತೆ ಸೊಸೆ ಜಗಳ ಭಯಾನಕ ಸಮಸ್ಯೆಯಾಗಿದೆ ಎಂದು ಕಮೆಂಟ್ ಮಾಡಿದರೆ, ಮಹಿಳಾ ಸಬಲೀಕರಣ (Women empowerment) ಎಂದು ಕಮೆಂಟ್ ಮಾಡಿದ್ದಾರೆ ಮತ್ತೊಬ್ಬರು.
ನೋಡಿ ವೈರಲ್ ವಿಡಿಯೋ :