Thursday, March 13, 2025
HomeJobBharath ಪೆಟ್ರೋಲಿಯಂನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img
spot_img

Bharath ಪೆಟ್ರೋಲಿಯಂನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತ್ ಪೆಟ್ರೋಲಿಯಂ (Bharat Petroleum) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಹತೆಯನ್ನು ಪರಿಶೀಲಿಸಿ, ಇಲ್ಲಿ ಕೊಡಲಾದ ಮಾಹಿತಿಯನ್ನು ಓದುವುಸಲ್ಲದೆ ಅಧಿಕೃತ website ಗೆ ಭೇಟಿ ನೀಡಿ ನಂತರ Online ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : 

ಹುದ್ದೆಗಳ ವಿವರ :

  • ನೇಮಕಾತಿಯ ಹೆಸರು : ಭಾರತ್ ಪೆಟ್ರೋಲಿಯಂ.
  • ಹುದ್ದೆಗಳ ಹೆಸರು : ಪೆಟ್ರೋಲಿಯಂ ಜೂನಿಯರ್ ಎಕ್ಸಿಕ್ಯುಟಿವ್ ಮತ್ತು ಸೆಕ್ರೆಟರಿ.

ಹುದ್ದೆಗಳ ಸಂಖ್ಯೆ :

  • ಅರ್ಜಿಗಳ ಸಂಖ್ಯೆಯನ್ನು ಆಧರಿಸಿ ಆಯ್ಕೆ ಪ್ರಕ್ರಿಯೆಯ ನಿರ್ಧರಿಸಲಾಗುತ್ತದೆ.

ವೇತನ ಶ್ರೇಣಿ :

  • ಜೂನಿಯರ್ ಎಕ್ಸಿಕ್ಯೂಟಿವ್ : ರೂ.30,000/- ರಿಂದ ರೂ. 1,20,000/-
  • ಸೆಕ್ರೇಟರಿ ಹುದ್ದೆಗೆ : ರೂ.40,000/- ರಿಂದ ರೂ.1,40,000/-

ಶೈಕ್ಷಣಿಕ ಅರ್ಹತೆ :

ಜೂನಿಯರ್ ಎಕ್ಸಿಕ್ಯುಟಿವ್ :

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರಾಸಾಯನಿಕ ವಿಜ್ಞಾನದಲ್ಲಿ B.sc ಪದವಿಯನ್ನು ಹೊಂದಿರಬೇಕು.
  • ಅಭ್ಯರ್ಥಿಯು ಕನಿಷ್ಠ ಶೇ. 60 (ಅಥವಾ ಸಮಾನವಾದ CGPA) ಅಂಕಗಳನ್ನು ಹೊಂದಿರಬೇಕು.
  • SC/ST/PwBD ಅಭ್ಯರ್ಥಿಗಳಿಗೆ ಇದನ್ನು ಶೇ. 55 ಕ್ಕೆ ಇಳಿಸಲಾಗಿದೆ.
  • ಅಭ್ಯರ್ಥಿಯು ಕನಿಷ್ಠ 60 ಶೇಕಡಾವಾರು (ಅಥವಾ ಸಮಾನ CGPA) ದೊಂದಿಗೆ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ Diploma (3 ವರ್ಷಗಳ ಕೋರ್ಸ್) ಹೊಂದಿರಬೇಕು.
  • SC/ST/PwBD ಅಭ್ಯರ್ಥಿಗಳು 55 ಶೇಕಡಾವಾರು ಹೊಂದಿರಬೇಕು.
  • ಅಭ್ಯರ್ಥಿಯು ಪೆಟ್ರೋಲಿಯಂ/ತೈಲ ಮತ್ತು ಅನಿಲ/ಪೆಟ್ರೋ-ರಾಸಾಯನಿಕ ಉದ್ಯಮದಲ್ಲಿ ಪ್ರಯೋಗಾಲಯದಲ್ಲಿ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು.

ಕಾರ್ಯದರ್ಶಿ :

  • ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (3 ವರ್ಷಗಳ ಕೋರ್ಸ್) ಹೊಂದಿರಬೇಕು.
  • 12 ನೇ ತರಗತಿ ಮತ್ತು 10 ನೇ ತರಗತಿಯಲ್ಲಿ ಕನಿಷ್ಠ ಶೇ.70 ಅಂಕಗಳು (ಅಥವಾ ಸಮಾನ CGPA) ಹೊಂದಿರಬೇಕು.
  • SC/ST/PwBD ಅಭ್ಯರ್ಥಿಗಳು 65 ಶೇಕಡಾವಾರು ಹೊಂದಿರಬೇಕು.
  • ಅಭ್ಯರ್ಥಿಯು ಆಡಳಿತಾತ್ಮಕ ಕಾರ್ಯದರ್ಶಿ, ಪಿಎ/ಕಾರ್ಯನಿರ್ವಾಹಕ ಸಹಾಯಕ/ಕಾರ್ಯದರ್ಶಿ ಕೆಲಸ/ಕಚೇರಿ ನಿರ್ವಹಣೆಯಲ್ಲಿ ಕನಿಷ್ಠ 6 ತಿಂಗಳ ಡಿಪ್ಲೊಮಾ ಅಥವಾ ಪ್ರಮಾಣಪತ್ರವನ್ನು ಹೊಂದಿರಬೇಕು.
  • ಅಭ್ಯರ್ಥಿಯು ಕನಿಷ್ಠ 5 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.

ವಯೋಮಿತಿ :

  • ಸಾಮಾನ್ಯ ವರ್ಗದವರು/ಆರ್ಥಿಕವಾಗಿ ಹಿಂದುಳಿದ ಕೆಟಗರಿ ಅಭ್ಯರ್ಥಿಗಳು : 29 ವರ್ಷ ವಯಸ್ಸು ಮೀರಿರಬಾರದು.
  • ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು : 3 ವರ್ಷ. ಮತ್ತು
  • SC/ST ಅಭ್ಯರ್ಥಿಗಳು : 5 ವರ್ಷ ವಯಸ್ಸಿನ ಸಡಿಲಿಕೆ ಇದೆ.

ಅರ್ಜಿ ಶುಲ್ಕ :

  • ಅಭ್ಯರ್ಥಿಗಳು ಮರುಪಾವತಿಸಲಾಗದ ರೂ.1,180 ಶುಲ್ಕವನ್ನು ಪಾವತಿಸಬೇಕು.
  • SC/ST ಮತ್ತು PwBD ಅಭ್ಯರ್ಥಿಗಳು : ಯಾವುದೇ ಅರ್ಜಿ ಶುಲ್ಕ ನೀಡಬೇಕಾಗಿಲ್ಲ.

ಆಯ್ಕೆ ಪ್ರಕ್ರಿಯೆ : ಬಹು-ಹಂತಗಳ ಆಯ್ಕೆ ಪ್ರಕ್ರಿಯೆ ಇದಾಗಿದೆ.

  • ಅರ್ಜಿ ಪರಿಶೀಲನೆ (ಶೈಕ್ಷಣಿಕ ಅರ್ಹತೆ, ಕೆಲಸದ ಅನುಭವ ಇತ್ಯಾದಿಗಳ ಆಧಾರದ ಮೇಲೆ).
  • ಲಿಖಿತ/ಕಂಪ್ಯೂಟರ್ ಆಧಾರಿತ ಪರೀಕ್ಷೆ.
  • ಪ್ರಕರಣ ಆಧಾರಿತ ಚರ್ಚೆ/ಗುಂಪು ಕಾರ್ಯ/ವೈಯಕ್ತಿಕ ಸಂದರ್ಶನ ಇತ್ಯಾದಿಗಳು.

ಅರ್ಜಿ ಸಲ್ಲಿಸುವ ವಿಧಾನ :

  • BPCL ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯನ್ನು banking ಸಿಬ್ಬಂದಿ ನೇಮಕಾತಿ ಸಂಸ್ಥೆ – IBPS ನಡೆಸುತ್ತಿದೆ.
  • IBPS ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು.
  • IBPS ನ BPCL ನೇಮಕ ಪ್ರಕ್ರಿಯೆ website https://ibpsonline.ibps.in/bpcljan25/ ಗೆ ಭೇಟಿ ನೀಡಿ.
  • Open ಆದ web page ನಲ್ಲಿ ‘Click Here For New Registration’ ಎಂದ ಸ್ಥಳದಲ್ಲಿ ಕ್ಲಿಕ್ ಮಾಡಿ.
  • ಮತ್ತೊಂದು web page Open ಆಗುತ್ತದೆ.
  • ಕೇಳಲಾದ basic details ನೀಡಿ ಮೊದಲು registration ಪಡೆಯಿರಿ.
  • ನಂತರ login ಆಗುವ ಮೂಲಕ detail application ಸಲ್ಲಿಸಿ.

ಪ್ರಮುಖ ದಿನಾಂಕ :

  • ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : ಜನವರಿ 22, 2025.
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : ಫೆಬ್ರವರಿ 22, 2025.
  • ನಿಮ್ಮ Online ಅರ್ಜಿ print ತೆಗೆದುಕೊಳ್ಳಲು ಕೊನೆ ದಿನಾಂಕ : ಮಾರ್ಚ 09, 2025.
  • ಅರ್ಜಿಯ ಶುಲ್ಕ ಪಾವತಿಗೆ : ಫೆಬ್ರುವರಿ 22, 2025 ರವರೆಗೆ ಅವಕಾಶ ನೀಡಲಾಗಿದೆ.

ಪ್ರಮುಖ ಲಿಂಕ್ :

ಅಭ್ಯರ್ಥಿಗಳು Bharath petroleum ನ ಅಧಿಕೃತ ವೆಬ್‌ಸೈಟ್ https://ibpsonline.ibps.in/bpcljan25/ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : AAP ನಾಯಕನ ಪತ್ನಿಯ ಬರ್ಬರ ಹತ್ಯೆ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಆಮ್ ಆದ್ಮಿ ಪಕ್ಷದ (AAP) ನಾಯಕ ಮತ್ತು ಪ್ರಮುಖ ಉದ್ಯಮಿಯೊಬ್ಬರ ಪತ್ನಿಯನ್ನು ಶಸ್ತ್ರಸಜ್ಜಿತ ದರೋಡೆಕೋರರು (Armed robbers) ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಡೆಹ್ಲೋದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಆಮ್ ಆದ್ಮಿ ಪಕ್ಷದ (AAP) ನಾಯಕ ಮತ್ತು ಪ್ರಮುಖ ಉದ್ಯಮಿ (businessman) ಅನೋಖ್ ಮಿತ್ತಲ್ ಅವರ ಪತ್ನಿ ಲಿಪ್ಸಿ ಮಿತ್ತಲ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಇದನ್ನು ಓದಿ : ರಸ್ತೆ ಮಧ್ಯೆ ಇಬ್ಬರು ಕಾಲೇಜ್ ವಿದ್ಯಾರ್ಥಿನಿಯರ ಜೊತೆ ವಿದ್ಯಾರ್ಥಿಯ Romance ; ವಿಡಿಯೋ ವೈರಲ್.!

ಸಿಧ್ವಾನ್ ಕಾಲುವೆ ಸೇತುವೆಯ ಬಳಿಯ ರುರ್ಕಾ ಗ್ರಾಮದ ಬಳಿ ಸುಮಾರು ಐದು ಶಸ್ತ್ರಸಜ್ಜಿತ ದರೋಡೆಕೋರರು ಮಿತ್ತಲ್ ದಂಪತಿಯ ವಾಹನವನ್ನು ಅಡ್ಡಗಟ್ಟಿದರು (Blocked the vehicle). ಬಳಿಕ ದಾಳಿಕೋರರು ಹರಿತವಾದ ಆಯುಧಗಳಿಂದ ದಂಪತಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದರು.

ಈ ಭೀಕರ ದಾಳಿಯಲ್ಲಿ ಲಿಪ್ಸಿ ಮಿತ್ತಲ್ ಕೊನೆಯುಸಿರೆಳೆದರು. ದುಷ್ಕರ್ಮಿಗಳು ಮಿತ್ತಲ್ ದಂಪತಿಯ ಕಾರು ಮತ್ತು ಇತರ ವಸ್ತುಗಳೊಂದಿಗೆ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ತರಗತಿಯಲ್ಲೇ ಶಿಕ್ಷಕಿಯರ ಮುಂದೆ ವಿದ್ಯಾರ್ಥಿಗಳಿಂದ ಬಿಯರ್ ಬಾಟಲ್ ಹಿಡಿದು Birthday Party ; ವಿಡಿಯೋ.!

ಸುಮಾರು ನಾಲ್ಕು ತಿಂಗಳ ಹಿಂದೆ ಎಎಪಿಗೆ ಸೇರ್ಪಡೆಗೊಂಡಿದ್ದ ಉದ್ಯಮಿ ಅನೋಖ್ ಮಿತ್ತಲ್, ಪಕ್ಷದೊಂದಿಗಿನ ಪಾಲ್ಗೊಳ್ಳುವಿಕೆ ವ್ಯವಹಾರ ಮತ್ತು ರಾಜಕೀಯ ವಲಯಗಳಲ್ಲಿ ಮಿತ್ತಲ್ ಕುಟುಂಬ ಗಮನ ಸೆಳೆದಿತ್ತು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!