Wednesday, March 12, 2025
HomeJobIRG : ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img
spot_img

IRG : ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕದ ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆ
(Stamps and Registration Department)ಯು ಅಧಿಕೃತ ಅಧಿಸೂಚನೆಯ ಮೂಲಕ Group – D ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು Offline ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಧಿಕೃತ Notification ನಲ್ಲಿ ಸೂಚಿಸಿರುವ ಅರ್ಹತೆ ಬಗ್ಗೆ ತಿಳಿದುಕೊಳ್ಳಿ. ಇಲ್ಲಿ ಈ ಹುದ್ದೆಗಳ ಬಗ್ಗೆ ಒಂದಿಷ್ಟು ವಿಷಯವನ್ನು ಕೊಡಲಾಗಿದೆ.

ಇದನ್ನು ಓದಿ : Astrology : ಪ್ರೀತಿ – ಪ್ರೇಮ ಅಂತ ಹೆಚ್ಚು ತಲೆ ಕೆಡಿಸಿಕೊಳ್ತಾರಂತೆ ಈ ರಾಶಿಯವರು.!

ಅರ್ಹತಾ ವಿವರಗಳು ಇಂತಿವೆ :

ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ (SSLC) ತರಗತಿಯನ್ನು ಪೂರ್ಣಗೊಳಿಸಿರಬೇಕು .

ವಯೋಮಿತಿ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಗರಿಷ್ಠ ವಯಸ್ಸು 40 ವರ್ಷ ಮೀರಿರಬಾರದು.

ಇದನ್ನು ಓದಿ : ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ಆರೋಪ ; ಹಿರಿಯ ಪೊಲೀಸ್ ಅಧಿಕಾರಿ Suspend.!

ಅರ್ಜಿ ಸಲ್ಲಿಸಲು ಕ್ರಮಗಳು :

  • ನೀವೂ IRG ಕರ್ನಾಟಕ ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ.
  • ಅಭ್ಯರ್ಥಿಯು ಅರ್ಹತಾ (eligibilities) ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ .
  • ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ e-mail ID ಮತ್ತು Mobile ಸಂಖ್ಯೆಯನ್ನು ನಮೋದಿಸಿ.
  • ID ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಛಾಯಾಚಿತ್ರ, ರೆಸ್ಯೂಮ್, ಯಾವುದೇ ಅನುಭವ (Age, Educational Qualification, Recent Photograph, Resume, Any Experience) ಸೇರಿದಂತೆ ಇತ್ಯಾದಿ ದಾಖಲೆಗಳನ್ನು ಇಟ್ಟುಕೊಳ್ಳಿ.
    ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು Download ಮಾಡಿ ಮತ್ತು ನಿಗದಿತ ನಮೂನೆಯಲ್ಲಿ Form ನ್ನು ಭರ್ತಿ ಮಾಡಿ.
  • ನೀವೂ ಅರ್ಜಿ ಶುಲ್ಕ (Application fees) ಪಾವತಿಸುವ ವರ್ಗದರಾಗಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  • ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರ (Details) ಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
  • ಕೊನೆಯದಾಗಿ ಅರ್ಜಿ ನಮೂನೆಯನ್ನು
    ಅರ್ಜಿ ನಮೂನೆಯನ್ನು ಸ್ವಯಂ-ದೃಢೀಕರಿಸಿದ (Self attested) ದಾಖಲೆಗಳೊಂದಿಗೆ ಸಂಬಂಧಿತ ಸೂಚಿಸಲಾದ ವಿಳಾಸಕ್ಕೆ ಕಳುಹಿಸಿ.

ಇದನ್ನು ಓದಿ : ನೀವೂ ಕೂಡಾ ಪ್ಯಾಂಟ್‌ ಜೇಬಿನಲ್ಲಿ Mobile ಇಟ್ಟುಕೊಳ್ತೀರಾ.? ತಪ್ಪದೇ ಈ ವಿಡಿಯೋ ನೋಡಿ.!

ಅರ್ಜಿ ಸಲ್ಲಿಸುವ ವಿಳಾಸ :

ನೋಂದಣಿಯ ಇನ್ಸ್‌ಪೆಕ್ಟರ್ ಜನರಲ್ ಮತ್ತು ಅಂಚೆಚೀಟಿಗಳ ಆಯುಕ್ತರ ಕಚೇರಿ, ಕಂದಾಯ ಕಟ್ಟಡ, 8 ನೇ ಮಹಡಿ, ಕೆಜಿ ರಸ್ತೆ, ಬೆಂಗಳೂರು (Office of the Inspector General of Registration and Commissioner of Stamps, Revenue Building, 8th Floor, KG Road, Bangalore) – 560009.

ಪ್ರಮುಖ ದಿನಾಂಕ :

  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 28 ಜನವರಿ 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28 ಫೆಬ್ರುವರಿ 2025.  

ಪ್ರಮುಖ ಲಿಂಕುಗಳು :

  • ನೋಟಿಫಿಕೇಶನ್ : Click Here
  • ಅರ್ಜಿ ಲಿಂಕ್ / ಅರ್ಜಿ ಫಾರ್ಮ್ : Click Here

ಹಿಂದಿನ ಸುದ್ದಿ : ಮಹಿಳಾ ಪ್ರೊಬೆಷನರಿ ಪೊಲೀಸ್ ಅಧಿಕಾರಿಯೊಂದಿಗೆ DySP ಲವ್ವಿಡವ್ವಿ.!

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ (High ground Police Station) ಡಿವೈಎಸ್ಪಿ ವಿರುದ್ಧ ಪತ್ನಿ ದೂರು ನೀಡಿದ ಘಟನೆ ನಡೆದಿದೆ.

Dysp ಗೋವರ್ಧನ್ ವಿರುದ್ಧ ಪತ್ನಿ ಅಮೃತ ಅವರು ದೂರು (Complaint) ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಕರ್ನಾಟಕ ಇಂಧನ ಇಲಾಖೆಯಲ್ಲಿ ಖಾಲಿ ಇರುವ Linemen ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಡಿವೈಎಸ್ಪಿ ಗೋವರ್ಧನ್ ಹಾಗೂ ಅವರ ತಂದೆ ವಿರುದ್ಧ ಪರಸ್ತ್ರೀಗಾಗಿ ಪತ್ನಿಯ ಕೊಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ. ಗಂಡನ ಮನೆಯವರು ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಾಸಿದ್ದಾರೆ (They tried to kill by pouring kerosene) ಎಂದು ಆರೋಪಿಸಿದ್ದಾರೆ. ಅಲ್ಲದೇ ಪತಿಯ ಜೊತೆಗೆ ಸಂಪರ್ಕದಲ್ಲಿದ್ದ ಮಹಿಳಾ ಪ್ರೊಬೆಷನರಿ ಡಿವೈಎಸ್ಪಿ ವಿರುದ್ಧ ಕೂಡ ಅಮೃತ ದೂರು ನೀಡಿದ್ದಾರೆ.

ಪರಸ್ತ್ರೀಗೆ ಮಕ್ಕಳಿದ್ದರೂ ತನ್ನ ಪತಿಯ ಜೊತೆಗೆ ಸಲುಗೆಯಿಂದ ಇದ್ದಾರೆ ಎಂದು ಆರೋಪಿಸಿರುವ ಅಮೃತಾ, ಪತಿ ಎಲ್ಲೇ ಕೆಲಸಕ್ಕೆ ಸೇರಿದರೂ ಪತಿಯ ಗೆಳತಿ ಅಲ್ಲಿಗೆ ಬರುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : ರಸ್ತೆ ಮಧ್ಯೆ ಯುವತಿಗೆ ಪೆಟ್ರೋಲ್ ಸುರಿದ ಯುವಕ ; ಮುಂದೆನಾಯ್ತು video ನೋಡಿ.! 

ಪರಸ್ತ್ರೀ ಸಂಪರ್ಕ ವಿಚಾರ ಅಮೃತಾಗೆ ತಿಳಿದ ಕೂಡಲೇ ಕೋಪಗೊಂಡ Dysp ಗೋವರ್ಧನ್ ಹಲ್ಲೆ ನಡೆಸಿದ್ದಾರೆ. ಡಿವೋರ್ಸ್ ಕೊಡುವುದಾಗಿ ಪತಿಯಿಂದ ಬೆದರಿಕೆ ಆರೋಪ ಕೇಳಿ ಬಂದಿದೆ. ನನ್ನ ಗಂಡನ ಸಹವಾಸ ಸಹವಾಸ ಬಿಡುವಂತೆ ಆತನ ಗೆಳತಿಗೂ ಕೂಡ ಅಮೃತ ಹೇಳಿದ್ದರು. ಇದಕ್ಕೆ ಗೋವರ್ಧನ್ ಗೆ ಆಕೆ ನಿನ್ನ ಹೆಂಡತಿಗೆ ಡಿವೋರ್ಸ್ ನೀಡು ಎಂದು ಒತ್ತಾಯಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಈ ಕುರಿತು ಡಿವೈಎಸ್ಪಿ ಗೋವರ್ಧನ್ ಪತ್ನಿ ಅಮೃತ ಬೆಂಗಳೂರಿನ ಹೈ ಗ್ರೌಂಡ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!