ಜನಸ್ಪಂದನ ನ್ಯೂಸ್, ನೌಕರಿ : ಕೆಲಸ ಹುಡುಕುತ್ತಿರೋರಿಗೆ ಒಂದು ಒಳ್ಳೆ ಸುದ್ದಿ ಸಿಕ್ಕಿದೆ. ಭಾರತೀಯ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಗ್ರಾಮೀಣ ಡಾಕ್ ಸೇವಕ್ ಎಂಬ ಹುದ್ದೆಗಳಿಗೆ ಭಾರತೀಯ ಅಂಚೆ ಕಚೇರಿ ನೇಮಕ ಮಾಡಿಕೊಳ್ಳುತ್ತಿದೆ.
ಒಟ್ಟು 21,413 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತೆ. ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿಯನ್ನು ನೀವೂ ಇಲ್ಲಿ ಪಡೆಯುತ್ತಿರಿ. ಆದರೂ ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಕೃತ website ಗೆ ಭೇಟಿ ನೀಡಿ.
ಇದನ್ನು ಓದಿ : AAI ನೇಮಕಾತಿ : ಖಾಲಿ ಇರುವ 200 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಒಟ್ಟು ಹುದ್ದೆಗಳಲ್ಲಿ ಕರ್ನಾಟಕದಲ್ಲಿ 1,135 ಹುದ್ದೆಗಳಿವೆ. ಅಭ್ಯರ್ಥಿಗಳು ಯಾವುದೇ ಪರೀಕ್ಷೆ ಬರೆಯಬೇಕಾಗಿಲ್ಲ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಷ್ಟೆ.
ಹುದ್ದೆಗಳ ಮಾಹಿತಿ :
- ನೇಮಕಾತಿ ಇಲಾಖೆ : ಭಾರತೀಯ ಅಂಚೆ ಕಚೇರಿ.
- ಹುದ್ದೆಯ ಹೆಸರು : ಗ್ರಾಮೀಣ ಡಾಕ್ ಸೇವಕ್.
- ಹುದ್ದೆಗಳ ಸಂಖ್ಯೆ : 21,413.
- ಕೆಲಸದ ಸ್ಥಳ : ದೇಶಾದ್ಯಂತ.
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ನ ಮೂಲಕ.
ವಿದ್ಯಾರ್ಹತೆ :
ಮಾನ್ಯತೆ ಪಡೆದ ಸಂಸ್ಥೆಯಿಂದ SSLC ತರಗತಿ ಪಾಸಾಗಿದ್ರೆ ಅರ್ಜಿ ಹಾಕಬಹುದು.
ವಯೋಮಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ
40 ವರ್ಷ.
ವಯೋಮಿತಿ ಸಡಿಲಿಕೆ :
- ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ,
- ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು
- ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಇದನ್ನು ಓದಿ : Bhima ತೀರದಲ್ಲಿ ರಕ್ತದೋಕುಳಿ : ಮಾರಕಾಸ್ತ್ರಗಳಿಂದ ಕೊಚ್ಚಿ ಕುಖ್ಯಾತ ರೌಡಿಯ ಬರ್ಬರ ಹತ್ಯೆ.!
ವೇತನ ಶ್ರೇಣಿ :
- ಆಯ್ಕೆಯಾದ ಗ್ರಾಮೀಣ ಡಕ್ ಸೇವಕ್ (ಬ್ರ್ಯಾಂಚ್ ಪೋಸ್ಟ್ಮಾಸ್ಟರ್) ಹುದ್ದೆಗೆ ರೂ. 12,000/- ಇಂದ ರೂ. 29,380/- ಮತ್ತು
- ಗ್ರಾಮೀಣ ಡಕ್ ಸೇವಕ್ (ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ಮಾಸ್ಟರ್/ಡಕ್ ಸೇವಕ್) ಹುದ್ದೆಗೆ ರೂ. 10,000/- ಇಂದ ರೂ.24,470/- (ಮಾಸಿಕ ವೇತನ)
ನೇಮಕಾತಿ ವಿಧಾನ :
- ಭಾರತೀಯ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಹಾಕಬಹುದು.
- ಅದಕ್ಕಾಗಿ ನೀವು ಇಲಾಖೆಯ ಅಧಿಕೃತ website ಗೆ ಭೇಟಿ ನೀಡಿ ಅಲ್ಲಿ ನೋಂದಣಿ ಮಾಡ್ಕೊಳ್ಳಬೇಕು.
- ನಂತರ ಅರ್ಜಿ ಸಲ್ಲಿಸಿ ಅನ್ನೋ ಆಯ್ಕೆ ಆರಿಸಿಕೊಂಡು ಹಂತ ಹಂತವಾಗಿ ಸರಿಯಾಗಿ ಭರ್ತಿ ಮಾಡಿ ಅರ್ಜಿ ಹಾಕಬೇಕು.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : ಫೆಬ್ರವರಿ 10, 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 3, 2025.
ಇದನ್ನು ಓದಿ : Video : ಬಸ್ಸಿನೊಳಗೆ ಶುರುವಾಯ್ತು ಎತ್ತುಗಳ ಕಾಳಗ ; ನಾವ್ ಈ ಆಟಕ್ಕಿಲ್ಲಾ ಎಂದು ಕಿಟಕಿಯಿಂದ ಹಾರಿದ ಪ್ರಯಾಣಿಕರು.!
ಅರ್ಜಿ ಶುಲ್ಕ :
- ಎಸ್ಸಿ/ಎಸ್ಟಿ/ಪಿಡಬ್ಲ್ಯುಡಿ/ಮಹಿಳಾ/ತೃತೀಯ ಲಿಂಗಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
- ಉಳಿದೆಲ್ಲ ಅಭ್ಯರ್ಥಿಗಳು ಆನ್ಲೈನ್ ಮೂಲಕ 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಪ್ರಮುಖ ಲಿಂಕ್ :
ಭಾರತೀಯ ಅಂಚೆ ಕಚೇರಿಯ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ link ಬಳಸಿ.
ಹಿಂದಿನ ಸುದ್ದಿ : ಸರಸ್ವತಿ ಪೂಜೆ ಸಂದರ್ಭ ಕಾಲೇಜು ವಿದ್ಯಾರ್ಥಿನಿಯಿಂದ ಅಶ್ಲೀಲ ನೃತ್ಯ ಪ್ರದರ್ಶನ ; ವಿಡಿಯೋ ವೈರಲ್.!
ಜನಸ್ಪಂದನ ನ್ಯೂಸ್, ಬೆಂಗಳೂರು : ಸರಸ್ವತಿ ಪೂಜೆ (Saraswati Pooja) ಸಮಯದಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯೋರ್ವಳು ಅಶ್ಲೀಲವಾಗಿ ನೃತ್ಯ ಮಾಡಿದ ಘಟನೆ ನಡೆದಿದೆ.
ಇನ್ನೂ ಘಟನೆಯ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಯುವತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇಪಾಳದಲ್ಲಿ (Nepal) ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : “ಡಾಬಾ ಬಂತು ಊಟ ಮಾಡಪ್ಪಾ” ಎಂದ ಕೂಡಲೇ ಆಂಬುಲೆನ್ಸ್ನಲ್ಲೇ ಎದ್ದು ಕೂತ dead ವ್ಯಕ್ತಿ.!
ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯೋರ್ವಳು (Engineering college student) ಸರಸ್ವತಿ ಪೂಜೆಯ ಸಂದರ್ಭದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ (Obscene dance performance) ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಈ ಕುರಿತ ವಿಡಿಯೋವನ್ನು tedhi.soch ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಸರಸ್ವತಿ ಪೂಜೆಯ ವೇಳೆ ವಿದ್ಯಾರ್ಥಿನಿಯೋರ್ವಳು ಸ್ಟೇಜ್ ಮೇಲೆ ಅಶ್ಲೀಲವಾಗಿ ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಶಾಲಾ -ಕಾಲೇಜುಗಳಲ್ಲಿ ಇವುಗಳಿಗೆ ಅವಕಾಶ ನೀಡಿದ್ದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : Vedio : ಮೃಗಾಲಯದಲ್ಲಿ ಮಗುವಿನ ಶರ್ಟ್ ಹಿಡಿದ ಹುಲಿ ; ತಾಯಿ ಬೈಯ್ತಾಳೆ ಬಿಡು ಎಂದ ಮಗು.!
ವಿದ್ಯಾರ್ಥಿನಿಯ ಅಶ್ಲೀಲ ನೃತ್ಯದ ವಿಡಿಯೋ ಇಲ್ಲಿದೆ :