ಜನಸ್ಪಂದನ ನ್ಯೂಸ್, ಡೆಸ್ಕ್ : ಕೋತಿಯೊಂದು (monkey) ಮಹಿಳೆಯೊಬ್ಬರ ಐಫೋನ್ ಕಸಿದುಕೊಂಡು ವಾಪಸ್ಸು ಕೊಡದೇ ಗೋಳಾಡಿಸಿದೇ ಆರಾಮವಾಗಿ ಕುಳಿತುಕೊಂಡಿದ್ದು, ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ಕೋತಿಯು ಮಹಿಳೆಯ ಐಫೋನ್ ಕಸಿದುಕೊಂಡು (Taking away the iPhone) ಕುಳಿತಿರುವುದನ್ನು ಕಾಣಬಹುದು. ಐಫೋನ್ ಅನ್ನು ಕಸಿದುಕೊಂಡ ನಂತರ ಆಕಡೆ ಇಕಡೆ ತಿರುಗಿಸಿ ಕಚ್ಚಲು ಪ್ರಯತ್ನಿಸುತ್ತಿದೆ (Trying to bite).
ಇದನ್ನು ಓದಿ : Weather : ನಾಳೆಯಿಂದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆಯಿಂದ ಮುನ್ಸೂಚನೆ.!
ಕೋತಿಯಿಂದ ಫೋನ್ ಅನ್ನು ವಾಪಸ್ಸು ಪಡೆಯಲು ಮಹಿಳೆಯು ಪ್ರಯತ್ನಿಸುತ್ತಿದ್ದಾಳೆ. ಕೋತಿಗೆ ಕನ್ನಡಕ ಮತ್ತು ಕೆಲವೊಮ್ಮೆ ಬಿಸ್ಕತ್ತು (Glasses and Biscuits) ತೋರಿಸಿ ಮೊಬೈಲ್ ತೆಗೆದುಕೊಳ್ಳಲು ಪ್ರಯತ್ನಿಸಿದರೂ ಕೋತಿ ಯಾರಿಗೂ ಕ್ಯಾರೆ ಎನ್ನುತ್ತಿಲ್ಲ.
ಕೋತಿಯನ್ನು ಪುಸಲಾಯಿಸಲು ಮಹಿಳೆ ಮತ್ತು ಅಲ್ಲಿದ್ದ ಇತರ ಜನರು ಪ್ರಯತ್ನಿಸುತ್ತಿದ್ದರೂ, ಯಾರ ಪ್ರಯತ್ನಕ್ಕೂ ಆ ಮಂಗ ಮಾರು ಹೋಗದೆ ಫೋನ್ ಹಿಡಿದು ಹಾಗೆಯೇ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನು ಓದಿ : ಲೋಕಾಯುಕ್ತ ದಾಳಿ : ಕಾನ್ಸ್‌ಟೇಬಲ್ ಮನೆಯಲ್ಲಿ ಕಂತೆ ಕಂತೆ ಹಣ; ಬೆಳ್ಳಿ ಪತ್ತೆ, ವಿಡಿಯೋ Viral.!
ಈ ವಿಡಿಯೋಗೆ ಅಡ್ವೆಂಚರ್ ಬಜೆಟ್ ಜೊತೆಗೆ ಹಣ್ಣಿನ ಬಜೆಟ್ ಕೂಡ ಬಹಳ ಮುಖ್ಯ ಎಂಬ ಟೈಟಲ್ ನೀಡಿ ಶೇರ್ ಮಾಡಲಾಗಿದೆ. ಕೋತಿಯ ಕೈಗೆ ಆಹಾರವನ್ನು ನೀಡಬೇಕಾಗಿತ್ತು ಇದರಿಂದ ಫೋನ್ ಅನ್ನು ಬಿಟ್ಟು ಆಹಾರವನ್ನು ತೆಗೆದುಕೊಳ್ಳುತ್ತಿತ್ತು ಎಂದು ಕಮೆಂಟ್ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ :
View this post on Instagram
ಹಿಂದಿನ ಸುದ್ದಿ : ಲೋಕಾಯುಕ್ತ ದಾಳಿ : ಕಾನ್ಸ್‌ಟೇಬಲ್ ಮನೆಯಲ್ಲಿ ಕಂತೆ ಕಂತೆ ಹಣ; ಬೆಳ್ಳಿ ಪತ್ತೆ, ವಿಡಿಯೋ Viral.!
ಜನಸ್ಪಂದನ ನ್ಯೂಸ್, ಡೆಸ್ಕ್ : ಆದಾಯ ಮೀರಿದ ಆಸ್ತಿ ಸಂಪಾದನೆಯ ಆರೋಪದ ಮೇಲೆ ಸಾರಿಗೆ ಇಲಾಖೆಯ ಮಾಜಿ ಕಾನ್‌ಸ್ಟೆಬಲ್‌ವೊಬ್ಬರ (Former Constable of Transport Department) ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿ ಪತ್ತೆ (large amount of property was discovered) ಮಾಡಿದ್ದಾರೆ.
ಇದನ್ನು ಓದಿ : ಏಕಾಂತದಲ್ಲಿದ್ದಾಗ ಮನೆಗೆ ಬಂದ ಪತಿ ; ಎದ್ನೋ ಬಿದ್ನೋ ಅಂತ ಅರಬೆತ್ತಲಾಗಿ ಓಡಿದ ಪತ್ನಿಯ Lover ; ವಿಡಿಯೋ ನೋಡಿ.!
ಮಧ್ಯಪ್ರದೇಶದ ಭೋಪಾಲ್‌ನಲ್ಲಿ (Bhopal, Madhya Pradesh) ಈ ಘಟನೆ ನಡೆದಿದ್ದು, ಈ ಕುರಿತು ವಿಡಿಯೋಗಳು ವೈರಲ್ ಆಗುತ್ತಿವೆ.
ದಾಳಿ ನಡೆಸಿದ ವೇಳೆ ₹200 ಮುಖ ಬೆಲೆಯ ನೋಟುಗಳ ಬಂಡಲ್ ಹಾಗೂ 40 ಕೆ.ಜಿ ಗಟ್ಟಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ ಎಂದು ANI ವರದಿ ಮಾಡಿದೆ.
ಇದನ್ನು ಓದಿ : Health : ಈ ಹಣ್ಣಿನಲ್ಲಿದೆ ಮಧುಮೇಹ, ಕ್ಯಾನ್ಸರ್ ತಡೆಯುವ ಶಕ್ತಿ ; ಬೆಳಿಗ್ಗೆ ತಿಂದ್ರೆ ಆರೋಗ್ಯದಲ್ಲಿ ಚಮತ್ಕಾರ.!
ಲೋಕಾಯುಕ್ತ ಪೊಲೀಸರು ₹2.85 ಕೋಟಿ ನಗದು ಸೇರಿದಂತೆ 3 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ (The property has been confiscated) ಎಂದು ವರದಿಯಿಂದ ತಿಳಿದು ಬಂದಿದೆ.
ನಗದು ಜತೆಗೆ ₹50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ (seize). ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಎಸ್‌ಪಿ ಮಾಹಿತಿ ನೀಡಿದ್ದಾರೆ.