ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಟಿ. ದಾಸರಹಳ್ಳಿಯ (T. Dasarahalli) ಮಲ್ಲಸಂದ್ರ ಆಸ್ಪತ್ರೆಯ ನರ್ಸ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ಮಲ್ಲಸಂದ್ರ ಹೆರಿಗೆ ಆಸ್ಪತ್ರೆಯ ನರ್ಸ್ (Maternity hospital nurse) ಗಂಗಲಕ್ಷ್ಮೀ ಹೆರಿಗೆ ಮಾಡಿಸಲು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ.
ಬಾಗಲಗುಂಟೆಯ ಕಮಲಮ್ಮ ಎಂಬ ಮಹಿಳೆ ಮಲ್ಲಸಂದ್ರ ಆಸ್ಪತ್ರೆಗೆ ಬಂದಿದ್ದು, ಈ ವೇಳೆ 6,500 ರೂಪಾಯಿ ಬೇಡಿಕೆ (6,500 demanded Rs) ಇಟ್ಟಿದ್ದಾರೆ. ಅಲ್ಲದೇ 5000 ಫೋನ್ಪೇ ಮೂಲಕ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : India Post : ಇಂಡಿಯಾ ಪೋಸ್ಟ್ ಆಫೀಸ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಲಂಚ ಪಡೆಯುತ್ತಿದ್ದ ವೇಳೆ ನರ್ಸ್ ಗಂಗಲಕ್ಷ್ಮಿ ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಲೋಕಾಯುಕ್ತ ಪೊಲೀಸರು ಗಂಗಾಲಕ್ಷ್ಮೀಯನ್ನು ಬಂಧಿಸಿ ವಿಚಾರಣೆ (Arrest and interrogate) ನಡೆಸಿದರು.
ಲೋಕಾಯುಕ್ತ ಎಸ್‌ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಹಿಂದಿನ ಸುದ್ದಿ : ಕುಂಬಳಕಾಯಿ ಬೀಜ ಚಿಕ್ಕದಾದರೂ ಅದರ ಪ್ರಯೋಜನಗಳು ಅಪಾರ.!
ಜನಸ್ಪಂದನ ನ್ಯೂಸ್, ಆರೋಗ್ಯ : ಕುಂಬಳಕಾಯಿಯು (Pumpkin) ಭಾರತದಲ್ಲಿ ತರಕಾರಿಗಳಲ್ಲಿ ಪ್ರಸಿದ್ಧಿ ಪಡೆದ ಒಂದು ವಿಶಿಷ್ಠವಾದ ತರಕಾರಿ (special vegetable). ವಿಶೇಷವಾಗಿ ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾಗುತ್ತದೆ.
ಕುಂಬಳಕಾಯಿ ತರಕಾರಿ ಮಾಡುವಾಗ ಬಹಳಷ್ಟು ಜನರು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ನಿಮಗೆ ಗೊತ್ತಾ. ವಿಶ್ವದ 100 ಅತ್ಯಂತ ಶಕ್ತಿಶಾಲಿ ಆಹಾರಗಳ ಪಟ್ಟಿಯನ್ನು BBCಯು ಸಿದ್ಧಪಡಿಸಿದೆ. ಇದರಲ್ಲಿ ಕುಂಬಳಕಾಯಿ ಬೀಜ ಆರನೇ ಸ್ಥಾನವನ್ನು ಪಡೆದಿದೆ ಅಂತ (BBC has prepared a list of the 100 most powerful foods in the world. In this pumpkin seed has got the sixth position).
ಇದನ್ನು ಓದಿ : ‘ನನ್ನ girlfriend ನಿಂಗೆ, ನಿನ್ನ girlfriend ನಂಗೆʼ ; ಬೆಂಗಳೂರಲ್ಲಿ ಹೊಸ ವರ್ಷಕ್ಕೆ ಸ್ವ್ಯಾಪಿಂಗ್ ದಂಧೆ.?
ಕುಂಬಳಕಾಯಿ ಬೀಜಗಳು ಪೌಷ್ಠಿಕಾಂಶದ ವಿಷಯದಲ್ಲಿ ಮೀನಿಗಿಂತಲೂ ಹೆಚ್ಚು ಶಕ್ತಿಯುತವಾಗಿವೆ (More powerful than fish) ಎಂಬುದು ಇನ್ನೊಂದು ಆಶ್ಚರ್ಯಕರ ಸಂಗತಿ.
* ಕುಂಬಳಕಾಯಿ ಬೀಜಗಳು ಕೂದಲು ಉದುರುವುದನ್ನು ತಡೆಯುತ್ತವೆ. ಇದರಲ್ಲಿನ ಫೈಟೊಕೆಮಿಕಲ್ ಸಂಯುಕ್ತಗಳು (Phytochemical compounds) ಕೂದಲು ಉದುರುವಿಕೆಗೆ ಕಾರಣವಾಗುವ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್ ಟಿ) ಉತ್ಪಾದನೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ.
ಡಿಎಚ್ ಟಿ ಮಟ್ಟವನ್ನು ಕಡಿಮೆ ಮಾಡುವ ಮೂಲಕ, ಕುಂಬಳಕಾಯಿ ಬೀಜಗಳು ಕೂದಲು ಉದುರುವಿಕೆ ನಿಧಾನಗೊಳಿಸಿ, ಇರುವ ಕೂದಲನ್ನು ಸಂರಕ್ಷಿಸಲು (To preserve existing hair) ಸಹಾಯ ಮಾಡುತ್ತದೆ.
ಇದನ್ನು ಓದಿ : Video : ಸುಂದರ ಮಹಿಳೆಯನ್ನು ನೋಡಿ ದಂಡ ಹಾಕದೇ ಬಿಟ್ಟು ಕಳುಹಿಸಿದ್ರಾ ಪೊಲೀಸರು.?
* ಈ ಬೀಜಗಳಲ್ಲಿ ಇರುವ ಸತುವು ದೇಹವನ್ನು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು (The immune system) ಬಲಪಡಿಸುತ್ತದೆ.
* ಇದರಲ್ಲಿರುವ ಕ್ಯಾರೊಟಿನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಕೆಲಸ ಮಾಡುತ್ತವೆ.
* ವಿಟಮಿನ್ ಇ ಹೊಂದಿರುವುದರಿಂದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತದೆ.
ಇದನ್ನು ಓದಿ : Health : ಈ ಹಣ್ಣಿನಲ್ಲಿದೆ ಮಧುಮೇಹ, ಕ್ಯಾನ್ಸರ್ ತಡೆಯುವ ಶಕ್ತಿ ; ಬೆಳಿಗ್ಗೆ ತಿಂದ್ರೆ ಆರೋಗ್ಯದಲ್ಲಿ ಚಮತ್ಕಾರ.!
* ಕುಂಬಳಕಾಯಿ ಬೀಜಗಳು ಕಬ್ಬಿಣ ಮತ್ತು ಮ್ಯಾಂಗನೀಸ್‌ನ ಮೂಲವಾಗಿವೆ. ದೇಹದಲ್ಲಿನ ರಕ್ತಹೀನತೆಯನ್ನು (Anemia) ತೆಗೆದು ಹಾಕುವಲ್ಲಿ ಕಬ್ಬಿಣವು ಸಹಾಯಕವಾದರೆ, ಮ್ಯಾಂಗನೀಸ್ ದೇಹ ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
* ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್, ರಂಜಕ ಮತ್ತು ಸತುವು (Magnesium, phosphorus and zinc) ಉತ್ತಮ ಪ್ರಮಾಣದಲ್ಲಿದ್ದು, ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಅಗತ್ಯವಾಗಿ ಇವು ಬೇಕು.
* ಈ ಬೀಜಗಳ ನಿಯಮಿತ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.
* ಕುಂಬಳಕಾಯಿ ಬೀಜಗಳು ಇನ್ಸುಲಿನ್ ಅನ್ನು ಸುಧಾರಿಸಿ, ಮಧುಮೇಹದ ತೊಂದರೆಗಳನ್ನು ತಡೆಯುತ್ತವೆ (Improve insulin, prevent complications of diabetes).
ಇದನ್ನು ಓದಿ : ವೃದ್ದರನ್ನು ಬಹಳ ಹೊತ್ತು ಕಾಯಿಸಿದ ಅಧಿಕಾರಿಗಳಿಗೆ ನಿಂತು ಕೆಲಸ ಮಾಡುವ ಶಿಕ್ಷೆ ನೀಡಿದ IAS ಆಫೀಸರ್.!
* ಇದರಲ್ಲಿರುವ ಪ್ರೋಟೀನ್ ಮತ್ತು ಫೈಬರ್ ಹಸಿವು ಮತ್ತು ತೂಕವನ್ನು ನಿಯಂತ್ರಿಸುತ್ತದೆ. ಇನ್ನೂ 100 ಗ್ರಾಂ ಕುಂಬಳಕಾಯಿ ಬೀಜಗಳು ಕೇವಲ 164 ಕ್ಯಾಲೊರಿಗಳನ್ನು ಹೊಂದಿವೆ (100 grams of pumpkin seeds has only 164 calories) ಎಂದು ವರದಿಗಳು ತಿಳಿಸಿವೆ.
* ಹೃದಯದ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಉರಿಯೂತ, ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡುತ್ತದೆ.