ಜನಸ್ಪಂದನ ನ್ಯೂಸ್, ಲಕ್ನೋ : 31 ವರ್ಷದ ಕಾಂಗ್ರೆಸ್ ಕಾರ್ಯಕರ್ತನೋರ್ವ (Congress worker) ಬುಧವಾರ ಸಂಜೆ ಪಕ್ಷದ ಕಚೇರಿಯಲ್ಲಿ ಪ್ರಜ್ಞಾಹೀನ (unconscious) ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಂತರ ಅವರನ್ನು ಹಜರತ್ಗಂಜ್ನ ಆಸ್ಪತ್ರೆಗೆ ಸಾಗಿಸಲಾಗಿತ್ತಾರೂ ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.
ಸಾವನ್ನಪ್ಪಿದ ಯುವಕನನ್ನು ಗೋರಖ್ಪುರದ ನಿವಾಸಿ ಪ್ರಭಾತ್ ಪಾಂಡೆ (Prabhat Pandey)(31) ಎಂದು ತಿಳಿದು ಬಂದಿದೆ. ಡಿಸಿಪಿ (DSP) ಕೇಂದ್ರ ವಲಯ ರವೀನಾ ತ್ಯಾಗಿ, ಅವರ ದೇಹದ ಮೇಲೆ ಯಾವುದೇ ಗೋಚರ ಗಾಯಗಳಿಲ್ಲ ಎಂದು ಹೇಳಿದರು. ಮರಣೋತ್ತರ ಪರೀಕ್ಷೆಯನ್ನು (post-mortem examination) ನಡೆಸಿ ಸಾವಿನ ಕಾರಣವನ್ನು ನಿರ್ಧರಿಸಬಹುದು ಎಂದು CMS ಸಿವಿಲ್ ಆಸ್ಪತ್ರೆಯ ಡಾ. ರಾಜೇಶ್ ಶ್ರೀವಾಸ್ತವ ಮತ್ತು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ : Health : ಈ ಹಣ್ಣಿನಲ್ಲಿದೆ ಮಧುಮೇಹ, ಕ್ಯಾನ್ಸರ್ ತಡೆಯುವ ಶಕ್ತಿ ; ಬೆಳಿಗ್ಗೆ ತಿಂದ್ರೆ ಆರೋಗ್ಯದಲ್ಲಿ ಚಮತ್ಕಾರ.!
ಪಾಂಡೆ ಅವರ ಚಿಕ್ಕಪ್ಪ ಮನೀಶ್ ಪಾಂಡೆ, ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಆರೋಪದಡಿಯಲ್ಲಿ ಎಫ್ಐಆರ್ (FIR) ದಾಖಲಿಸಿದ್ದು, ಅವರ ಸೋದರಳಿಯನನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಎರಡು ಗಂಟೆಗಳ ಕಾಲ ಪ್ರಜ್ಞಾಹೀನರಾಗಿದ್ದರು ಎಂದು ಆರೋಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ (Deputy Chief Minister Brajesh Pathak) ಆಸ್ಪತ್ರೆಗೆ ಭೇಟಿ ನೀಡಿ ಪಾಂಡೆ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ಇದನ್ನು ಓದಿ : Bribe : ಖಜಾನೆ ಇಲಾಖೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ.!
ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ (ongress chief Ajay Rai) ನಿಧನಕ್ಕೆ ಸಂತಾಪ ಸೂಚಿಸಿ, ಈ ಕುರಿತು ಹೇಳಿಕೆ ನೀಡಿರುವ ರೈ, ಸರಕಾರ ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಕರಣ ಕುರಿತು ಹುಸೇಂಗಂಜ್ ಪೊಲೀಸ್ ಠಾಣೆ (Hussainganj police station) ಯಲ್ಲಿ ದೂರು ದಾಖಲಿಸಲಾಗಿದೆ.