ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ನಗರದ ಹಿಂಡಲಗಾ ಜೈಲಿನಲ್ಲಿ (Hindalaga Jail, Belagavi) ಗಾಂಜಾಗಾಗಿ ಜೈಲರ್ ಹಾಗೂ ಖೈದಿ ನಡುವೆ ನಡೆದ ಗಲಾಟೆಯಲ್ಲಿ ವಿಚಾರಣಾಧೀನ ಕೈದಿಯೋರ್ವ ಜೈಲರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ (Fatally assaulted) ನಡೆಸಿರುವ ಘಟನೆ ತಡವಾಗಿ ಬಳಕೆಗೆ ಬಂದಿದೆ.
ಡಿಸೆಂಬರ್ 11ರಂದು ಜೈಲಿನಲ್ಲಿ ನಡೆದಂತಹ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಡಿ.11ರಂದು ಸಹಾಯಕ ಜೈಲರ್ ಜಿ.ಆರ್.ಕಾಂಬಳೆ ಅವರು ಕೇಂದ್ರ ಕಾರಾಗೃಹದಲ್ಲಿ ಕಾವಲು ಕಾಯುತ್ತಿದ್ದಾಗ ಬ್ಯಾರಕ್ ನಂ.08, ಸರ್ಕಲ್-2ರ ಹಿಂಬದಿಯ ಗೋಡೆ ಕಡೆಗೆ ಹೋಗಿದ್ದರು. ಗೋಡೆಯ ಪಕ್ಕದಲ್ಲಿ ಜಾಮರ್ ಕೇಬಲ್ ಅಳವಡಿಸಲು ಅಗೆದಿದ್ದ ಗುಂಡಿಯಲ್ಲಿ ಪ್ಲಾಸ್ಟಿಕ್ ಸುತ್ತಿದ ಪ್ಯಾಕೆಟ್ ಪತ್ತೆಯಾಗಿದೆ. ಆಗ ಜಿ.ಆರ್.ಕಾಂಬಳೆ ಅವರು ಪ್ಲಾಸ್ಟಿಕ್ ಪೊಟ್ಟಣವನ್ನು ತೆಗೆದುಕೊಂಡು ಮುಖ್ಯ ಅಧೀಕ್ಷಕರಿಗೆ ವರದಿ ಸಲ್ಲಿಸಲು ಹೊರಟಿದ್ದರು.
ಇದನ್ನೂ ಓದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ.!
ಈ ವೇಳೆ ಸಹಾಯಕ ಜೈಲರ್ (Assistant Jailor) ಜಿ.ಆರ್.ಕಾಂಬಳೆ ಮೇಲೆ ಕೈದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ವಿಚಾರಣಾಧೀನ ಕೈದಿ (An undertrial prisoner) ಶಾಹಿದ್ ಖುರೇಷೆ ಎಂಬಾತನಿಂದ ಈ ಹಲ್ಲೆ ನಡೆದಿದೆ.
ಅಧಿವೇಶನ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು. ಬೆಳಗಾವಿಯ ಹಿಂಡಲಗಾ ಜೈಲು ಅಧಿಕಾರಿಗಳು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ತಾಕತ್ತಿದ್ದರೆ ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರು, ಸಚಿವರನ್ನು ವಜಾ ಮಾಡಿ ; ಸ್ವಾಮೀಜಿ.!
ಸಹಾಯಕ ಜೈಲರ್ ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ವೈದ್ಯರಿಂದ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿ ಎನ್ ಎಸ್ ಕಾಯ್ದೆಯ ಅಡಿ 132, 115 (2) 352 ಹಾಗೂ NDPS ಕಾಯ್ದೆ 42 ಅಡಿಯಲ್ಲಿ ಜೈಲು ಮುಖ್ಯ ಅಧಿಕ್ಷಕ ಕೃಷ್ಣಮೂರ್ತಿ ದೂರು ದಾಖಲಿಸಿದ್ದಾರೆ.