Sunday, December 22, 2024
HomeCrime NewsCrime : ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಭೀಕರ ಹತ್ಯೆ.!
spot_img

Crime : ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಭೀಕರ ಹತ್ಯೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿ (Kalaburgi) ನಗರದ ಹಾಗರಗಾ ಪ್ರದೇಶದಲ್ಲಿರುವ ಮುಜಾಹಿರ್ ನಗರ (Mujahir Nagar) ಬಡಾವಣೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಿಜಗುರಿ ನಿವಾಸಿ ಅಲಿ ಪಟೇಲ್ (28) ಹಾಗೂ ಅರ್ಫಾತ್ ಕಾಲೋನಿ ನಿವಾಸಿ ಖಲೀಲ್ ಅಹ್ಮದ್ ಅಲಿಯಾಸ್ ಹಮಾಲ್ ವಾಡಿ ಖಲೀಲ್ (37) ಎಂಬುವವರು ಹತ್ಯೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Health : ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನುವುದಕ್ಕಿಂತ ಮುಂಚೆ ಒಮ್ಮೆ ಯೋಚಿಸಿ.!

ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯ (Vishwavidyalaya Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

ಹಿಂದಿನ ಸುದ್ದಿ : ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನುವುದಕ್ಕಿಂತ ಮುಂಚೆ ಒಮ್ಮೆ ಯೋಚಿಸಿ.!

ಜನಸ್ಪಂದನ ನ್ಯೂಸ್, ಆರೋಗ್ಯ : ಬಾಳೆಹಣ್ಣು ಎಲ್ಲ ಕಾಲದಲ್ಲಿಯೂ ಸಿಗುವಂತಹ ಹಣ್ಣು. ಪೋಷಕಾಂಶಗಳಿಂದ ಸಮೃದ್ಧವಾಗಿರುವ (Rich in nutrients) ಇದರಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ.

ಈ ಬಾಳೆಹಣ್ಣನ್ನು ನಾವು ತಿನ್ನುವುದರಿಂದ ಅನೇಕ ರೀತಿಯ ದೀರ್ಘಕಾಲದ ಕಾಯಿಲೆಗಳಿಂದ (Chronic disease) ಮುಕ್ತಿ ಪಡೆಯಬಹುದಾಗಿದೆ. ಅಲ್ಲದೇ, ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಧಿಕವಾಗಿದ್ದು, ಪ್ರತಿದಿನ ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ತ್ವರಿತ ಶಕ್ತಿ (Quick power) ಸಿಗುತ್ತದೆ.

ಹೀಗಾಗಿ ಜಿಮ್ ಗೆ ಹೋಗುವವರು ಮತ್ತು ವ್ಯಾಯಾಮ ಮಾಡುವವರು (Gym goers and exercisers) ಬಾಳೆಹಣ್ಣು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತಾರೆ.

ಇದನ್ನು ಓದಿ : ಮದುವೆಯಾಗಿ 7 ವರ್ಷ ಕಳೆದರೂ First Night ಗೆ ಒಪ್ಪದ ಮಹಿಳೆ; ಹೈಕೋರ್ಟ್ ಹೇಳಿದ್ದೇನು.?

ಬಾಳೆಹಣ್ಣು ಮೆಗ್ನೀಸಿಯಮ್, ವಿಟಮಿನ್ ಬಿ6, ಪೊಟ್ಯಾಸಿಯಮ್, ರಂಜಕದಂತಹ ಜೀವಸತ್ವಗಳು ಮತ್ತು ಖನಿಜಗಳ (Vitamins and minerals like magnesium, vitamin B6, potassium, phosphorus) ಮೂಲವಾಗಿದೆ ಈ ಬಾಳೆಹಣ್ಣು.

ಇನ್ನು ಬಾಳೆಹಣ್ಣನ್ನು ಬೆಳಿಗ್ಗೆ ಎದ್ದು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ. ಅಲ್ಲದೇ ಸ್ನಾಯುಗಳ ಬಲ (Muscle strength) ಕೂಡ ಹೆಚ್ಚುತ್ತದೆ.

ಅಲ್ಲದೇ ಚಳಿಗಾಲದಲ್ಲಿ ಶಕ್ತಿ ಪಡೆಯಲು ಉತ್ತಮ ಮೂಲವೆಂದರೆ (A good source of energy) ಅದು ಬಾಳೆಹಣ್ಣು ಎಂದು ಹೇಳಬಹುದು. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆದ್ರೆ, ಈ ಕ್ರಿಯೆಗಳು ಚಳಿಗಾಲದಲ್ಲಿ ನಿಧಾನವಾಗಬಹುದು ಎನ್ನಲಾಗಿದೆ.

ಬಾಳೆ ಹಣ್ಣಿನ ಅತಿಯಾದ ಸೇವನೆಯು ಕೆಲವರಲ್ಲಿ ಗಂಟಲು ನೋವು ಅಥವಾ ಶೀತಕ್ಕೆ (Sore throat or cold) ಕಾರಣವಾಗಬಹುದು. ಓರ್ವ ವ್ಯಕ್ತಿಯು ಶೀತಕ್ಕೆ ಸಂಬಂಧಿಸಿದ ಅಲರ್ಜಿಯನ್ನೆನಾದರೂ ಹೊಂದಿದ್ದರೆ ಅವರು ಬಾಳೆ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸುವುದು ಒಳಿತು.

ಇದನ್ನು ಓದಿ : ಕೋಚಿಂಗ್ ಇಲ್ಲದೇ UPSC ಪರೀಕ್ಷೆ ಬರೆದು ಉತ್ತೀರ್ಣರಾದ IAS ಅಧಿಕಾರಿ ಇವರು.!

ನೀವು ಚಳಿಗಾಲದಲ್ಲಿಯೂ ಸಹ ವ್ಯಾಯಾಮ ಮಾಡುತ್ತಿದ್ದರೆ ಈ ಹಣ್ಣು ನಿಮಗೆ ಬಹಳ ಉಪಯುಕ್ತವಾಗಿದೆ. ಏಕೆಂದರೆ ಇದು ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ.

ನೀವು ಬಾಳೆಹಣ್ಣನ್ನು ತಿನ್ನಬೇಕು ಎಂದ್ರೆ ಅದಕ್ಕೆ ಉತ್ತಮವಾದ ಸಮಯ ಯಾವುದೆಂದರೆ ಅದು ಬೆಳಿಗ್ಗೆ. ಬಾಳೆಹಣ್ಣುಗಳನ್ನು ಮುಂಜಾನೆ ತಿನ್ನುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ (Eating in the morning helps in digestion). ಆದರೆ ರಾತ್ರಿ ವೇಳೆ ತಿನ್ನುವುದನ್ನು ನಿಲ್ಲಿಸಬೇಕು. ಏಕೆಂದರೆ ಅವು ಲೋಳೆಯ ಪ್ರಮಾಣವನ್ನು ಅಧಿಕ ಮಾಡಿ, ಶೀತ ಮತ್ತು ಕೆಮ್ಮಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಇನ್ನೂ ಮಧುಮೇಹಿಗಳು ಬಾಳೆಹಣ್ಣನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬಹುದಾಗಿದೆ. ಏಕೆಂದರೆ ಈ ಹಣ್ಣು ನೈಸರ್ಗಿಕ ಸಕ್ಕರೆ ಅಂಶ (Natural sugar content) ಹೊಂದಿದೆ.

ಆದರೆ ರಾತ್ರಿ ಹೊತ್ತು ಅಥವಾ ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನಲು ಸುರಕ್ಷಿತವಲ್ಲ ಎಂಬುದು ಕೆಲ ಆರೋಗ್ಯ ತಜ್ಞರ ಅಭಿಪ್ರಾಯ. ಬಾಳೆಹಣ್ಣು ಒಂದು ತೂಕವಿರುವ ಹಣ್ಣಾಗಿದ್ದು, ಜೀರ್ಣಿಸಿಕೊಳ್ಳಲು ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತದೆ.

 

ಹಿಂದಿನ ಸುದ್ದಿ : ಮದುವೆಯಾಗಿ ಏಳು ವರ್ಷ ಕಳೆದರೂ ಫಸ್ಟ್‌ ನೈಟ್‌ಗೆ ಒಪ್ಪದ ಮಹಿಳೆ; ಹೈಕೋರ್ಟ್ ಹೇಳಿದ್ದೇನು.?

ಜನಸ್ಪಂದನ ನ್ಯೂಸ್, ಡೆಸ್ಕ್ : ಮದುವೆಯಾಗಿ ಏಳು ವರ್ಷವಾದರೂ (seven year’s) ಗಂಡನ ಮೇಲೆ ಕೋಪಗೊಂಡಿದ್ದ ಮಹಿಳೆ ಫಸ್ಟ್‌ ನೈಟ್‌ಗೆ ಒಪ್ಪದ ಕಾರಣ ಹೈಕೋರ್ಟ್‌ ವಿಚ್ಛೇದನ (Divorce) ಮಂಜೂರಾತಿ ಕಾಯಂ ಮಾಡಿದೆ.

ಇದನ್ನು ಓದಿ : ಇಂಡಿಯಾ ಗೇಟ್ ಬಳಿ ಕೇವಲ ಟವೆಲ್‌ ಕಟ್ಟಿಕೊಂಡು Dance ಮಾಡಿ ಛೀಮಾರಿ ಹಾಕಿಸಿಕೊಂಡ Model.!

ಮಹಿಳೆಯು ತನ್ನ ಲೆವೆಲ್ ಗೆ ತಕ್ಕಂತೆ ಆರತಕ್ಷತೆ ಮಾಡದ ಕಾರಣ ಇಟ್ಟುಕೊಂಡು ವೈವಾಹಿಕ ಜೀವನ (married life) ನಡೆಸಲು ಆಸಕ್ತಿ ತೋರಲಿಲ್ಲ.

ಹೀಗಾಗಿ ಕೌಟುಂಬಿಕ ನ್ಯಾಯಾಲಯವು (Family Court) ಮಾಡಿದ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿದೆ.

ಪ್ರಕರಣದ ಹಿನ್ನೆಲೆ :
ಪೋಷಕರು ನಿಶ್ಚಯಿಸಿದ ಮಹಿಳೆ ಜತೆ ರವಿ ಎಂಬುವವರು 2017ರ ಸೆ. 27ರಂದು ವಿವಾಹವಾಗಿದ್ದರು. ಆದರೆ, 2019ರಲ್ಲಿ ರವಿಯವರು ವಿವಾಹ ಅನೂರ್ಜಿತಗೊಳಿಸಿ (cancel) ವಿಚ್ಛೇದನ ಮಂಜೂರು (Divorce granted) ಮಾಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಮದುವೆ ಬಳಿಕ ನನ್ನ ಮನೆಗೆ ಬಂದ ಪತ್ನಿ, ಮೊದಲ ರಾತ್ರಿಗೆ (first night) ಒಪ್ಪದೇ, ತನ್ನ ಅಂತಸ್ತು ಹಾಗೂ ಕನಸಿಗೆ ತಕ್ಕಂತೆ ಅದ್ಧೂರಿಯಾಗಿ ಆರಕ್ಷತೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಳು.

ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಆಬಳಿಕವೂ ಮೊದಲ ರಾತ್ರಿಯನ್ನು ಮಂದೂಡುತ್ತಲೇ ಬಂದಳು. ಅಲ್ಲದೇ ಹಲವು ಕಾರಣಗಳನ್ನು (Many reasons) ನೀಡಿ ನನ್ನನ್ನು ನಿಂದಿಸುತ್ತಿದ್ದಳು (insulting). ಕೆಲ ಸಂದರ್ಭದಲ್ಲಂತೂ ಬೆಡ್‌ ರೂಂನಲ್ಲಿ ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.

ಮದುವೆ ಆದ ಕೆಲ ತಿಂಗಳ ಬಳಿಕ ಅಪಘಾತದಲ್ಲಿ ಅವಳ (ಪತ್ನಿಯ) ತಂದೆ ಮೃತಪಟ್ಟರೆ, ಅದಕ್ಕೂ ನಾನೇ (ಪತಿ) ಕಾರಣ ಎಂದು ದೂಷಿಸಿದರು. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ (Consider the ideas) ವಿಚ್ಛೇದನ ಮಂಜೂರು ಮಾಡಬೇಕು ಎಂದು ರವಿ ಕೋರಿದ್ದರು. ಇವರ ಅರ್ಜಿ ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು (Bangalore Family Court) 2022ರ ಜ.30 ರಂದು ಆದೇಶ (ordered) ಹೊರಡಿಸಿದೆ.

ಆದರೆ ಪತ್ನಿಯೂ ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ (appeal) ಸಲ್ಲಿಸಿದ್ದು, ಪತಿಯನ್ನು ನಾನು ಲವ್ ಮಾಡುತ್ತೇನೆ. ಹೀಗಾಗಿ ವೈವಾಹಿಕ ಜೀವನ ಮುಂದುವರಿಸಲು ಬಯಸುತ್ತಿದ್ದೇನೆ. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ (Rejected).

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments