ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಪಿಐ ಜಾವೇದ ಮುಶಾಪುರೆಯವರ ಕ್ರಿಯಾಶೀಲ ತನಿಖೆಯಿಂದ ಎರಡು ಬಂಗಾರ ಕಳುವಿನ ಪ್ರಕರಣಗಳು ಬಯಲಿಗೆ ಬಂದಿದೆ.
ಎರಡು ಕಳುವಿನ ಪ್ರಕರಣಗಳ ಪತ್ತೆ: ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಮದ ಅಡಿವಪ್ಪಾ ಲಗಮಪ್ಪಾ ಬಾಗರಾಯಿ
ಇವರ ಮನೆಯಿಂದ ಕಳೆದ 27-10-2024 ರಂದು 2200 ಗಂಟೆಯಿಂದ ದಿ. 28-10-2024 ರಂದು ಮುಂಜಾನೆ 6-30 ಗಂಟೆಯ ಅವಧಿಯಲ್ಲಿ ಸುಮಾರು 30 ಗ್ರಾಂ ತೂಕದ ಬಂಗಾರದ ಆಭರಣಗಳು ಕಳುವಾಗಿದ್ದವು.
ಇದನ್ನು ಓದಿ : ನೀರಿನಿಂದ ಆಚೆ ಜಿಗಿದು ಹಾವನ್ನೇ ಬೇಟೆಯಾಡಲು ಮುಂದಾದ ಮೀನು; ವಿಡಿಯೋ Viral.!
ಇನ್ನೊಂದು ಪ್ರಕರಣ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಯಮಕನಮರಡಿಯ ಸವಿತಾ ಬಸವರಾಜ ನಗಾರಿ ಇವರ ಪರ್ಸಿನಲ್ಲಿದ್ದ 2.5 ಗ್ರಾಂ ತೂಕದ ಬಂಗಾರದ ಆಭರಣಗಳು ಲಪಟಾಯಿಸಿದ್ದರು.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಲಕ್ಷ್ಮೀಕಾಂತ ಕೃಷ್ಣಪ್ಪಾ ಬೇಡರಹಟ್ಟಿ (19 ವರ್ಷ) , ಈರಣ್ಣಾ ರವಿ ನಾಯಿಕ (22 ವರ್ಷ) ಮತ್ತು ಸಂಜಯ ಸುರೇಶ ಗಡದಕ್ಕಿ (22 ವರ್ಷ) ಎಂಬುವವರನ್ನು ಇಂದು (23-11-2024) ದಸ್ತಗೀರ ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ : Special news : ನೀವು ಹುಟ್ಟಿದ ತಿಂಗಳಿನಿಂದ ತಿಳಿಯಬಹುದು ನಿಮ್ಮ ಗುಣ.!
ಇನ್ನು ಬಂಧಿತ ಆರೋಪಿಗಳ ಕಡೆಯಿಂದ ಎರಡು ಪ್ರಕರಣದಲ್ಲಿ ಕಳುವಾಗಿ ಹೋಗಿದ್ದ 5.5 ಗ್ರಾಂ. ತೂಕದ ಆಭರಣಗಳನ್ನು ವಶ ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಿಂದಿನ ಸುದ್ದಿ : Special news : ನೀವು ಹುಟ್ಟಿದ ತಿಂಗಳಿನಿಂದ ತಿಳಿಯಬಹುದು ನಿಮ್ಮ ಗುಣ.!
ಜನಸ್ಪಂದನ ನ್ಯೂಸ್, ವಿಶೇಷ : ಸಂಖ್ಯಾಶಾಸ್ತ್ರದಲ್ಲಿ (Numerology) ನಮ್ಮ ಹುಟ್ಟಿದ ದಿನ, ತಿಂಗಳು, ವರ್ಷ ಎಲ್ಲವೂ ಬಹಳ ಮುಖ್ಯ. ಇವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ .
ನಮ್ಮ ಮುಂದಿನ ಜೀವನ ಆರ್ಥಿಕ ಸ್ಥಿತಿ, ಕೌಟುಂಬಿಕ ಜೀವನ (Financial status, family life) ಹೀಗೆ ಎಲ್ಲವು ಇದರಿಂದ ನಿರ್ಧಾರವಾಗುತ್ತದೆ ಎಂದು ಹೇಳುತ್ತದೆ. ಹಾಗಾದರೆ ನಿಮ್ಮ ಹುಟ್ಟಿದ ತಿಂಗಳು, ನಿಮ್ಮ ಗುಣಗಳ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯೋಣ.
ಜನವರಿ :
ಈ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಯು ಯಾವುದಕ್ಕೂ ಹೆದರುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಾಗೂ ಅಭಿಪ್ರಾಯವನ್ನು (decision and opinion) ಬೇರೆಯವರ ಮಾತು ಕೇಳಿ ಬದಲಾಯಿಸಿಕೊಳ್ಳುವುದಿಲ್ಲವಂತೆ. ನಾಯಕತ್ವ ಗುಣಗಳನ್ನು (Leadership qualities) ಈ ವ್ಯಕ್ತಿ ಹೊಂದಿರುತ್ತಾರೆ.
ಫೆಬ್ರವರಿ :
ಈ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಯು ಸ್ವತಂತ್ರ ಜೀವನದ ಕನಸು (Dream of independent life) ಕಾಣುತ್ತಾರೆ. ಇವರು ಸಾಹಸಮಯ ಜೀವನ ಇಷ್ಟಪಡುತ್ತಾರೆ. ಅಲ್ಲದೇ ಹೆಚ್ಚು ನಿಷ್ಠಾವಂತರಾಗಿದ್ದು (faithful), ಉದ್ಯೋಗ ಕ್ಷೇತ್ರದಲ್ಲಿ ಯಾವಾಗಲೂ ಯಶಸ್ಸು ಸಿಗುತ್ತದೆ.
ಮಾರ್ಚ್ :
ಮಾರ್ಚ್ನಲ್ಲಿ ಜನಿಸಿದರೆ ವ್ಯಕ್ತಿಗಳು ತುಂಬಾ ತಾಳ್ಮೆ, ನಾಚಿಕೆ, ಕಲಾತ್ಮಕ ಗುಣಗಳನ್ನು (Artistic qualities) ಹೊಂದಿರುತ್ತಾರೆ. ಭಾವನೆಗಳಿಗೆ ಹೆಚ್ಚು ಒತ್ತು ನೀಡಿ, ಎಲ್ಲರಿಗೂ ಒಳಿತು ಬಯಸುವ ಮಂದಿ ಆಗಿರುತ್ತಾರೆ. ಶಾಂತಿ ಪ್ರಿಯರು, ಸಹಾನುಭೂತಿ ಗುಣ (Peace loving, compassionate nature) ಹೊಂದಿರುತ್ತಾರೆ.
ಏಪ್ರಿಲ್ :
ಈ ತಿಂಗಳಲ್ಲಿ ಜನಿಸಿದವರು ತುಂಬಾನೆ ಬಲಶಾಲಿಗಳು, ಮೇಲ್ನೋಟಕ್ಕೆ (Apparently) ಕಾಣುವುದಕ್ಕಿಂತ ತುಂಬಾನೆ ದೃಢಶಾಲಿಗಳು (strong) ಆಗಿರುತ್ತಾರೆ. ಮನೋಬಲದಿಂದ ಯಾವ ವಿಚಾರವನ್ನು ಬೇಕಾದರೆ ಜಯಿಸುವ ಮನೋಭಾವದವರಾಗಿದ್ದು, ಬೇರೆಯವರ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ. ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳಲು ಸಿದ್ಧರಿರುವ ವ್ಯಕ್ತಿಯಾಗಿರುತ್ತಾರೆ ಇವರು.
ಮೇ :
ಮೇ ತಿಂಗಳಲ್ಲಿ ಜನಿಸಿದವರಲ್ಲಿ ಕಲಾತ್ಮಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ಇವರು ಹೆಚ್ಚು ಸ್ನೇಹಿತರ ಗುಂಪನ್ನು (group of friends) ಹೊಂದಿರುತ್ತಾರೆ. ಯಾವಾಗಲು ಏನಾದರೂ ಕೆಲಸ ಮಾಡುತ್ತಲೇ ಇರಬೇಕು ಎಂಬ ವರ್ಗಕ್ಕೆ ಸೇರಿದವರು ಇವರು. ಕಷ್ಟದ ಸಮಯದಲ್ಲೂ ಆತ್ಮಸ್ಥೈರ್ಯ (self- confidence) ಕಳೆದುಕೊಳ್ಳದ ಜನರಾಗಿರುತ್ತಾರೆ.
ಜೂನ್ :
ಈ ತಿಂಗಳಿನಲ್ಲಿ ಜನಿಸಿದವರು ತುಂಬಾ ಭಾವನಾತ್ಮಕ ಜೀವಿಗಳಾಗಿರುತ್ತಾರೆ (An emotional being). ಬೇರೆಯವರಿಗೆ ನೋವಾಗುವಂತೆ ನಡೆದುಕೊಳ್ಳದ ಮನೋಭಾವದವರು. ಯಾರಿಗಾದರೂ ಕಷ್ಟ ಎಂದರೆ ಅವರ ಸಹಾಯಕ್ಕೆ ಮೊದಲು ಬರುವ ವ್ಯಕ್ತಿಗಳಾಗಿರುತ್ತಾರೆ. ಇವರು ಎಲ್ಲ ಸಮಯದಲ್ಲೂ ಧನಾತ್ಮಕ ವಿಚಾರಗಳ (Positive thoughts) ಕುರಿತು ಯೋಚಿಸುತ್ತಾರೆ.
ಜುಲೈ :
ಜುಲೈನಲ್ಲಿ ಜನಿಸಿದ ವ್ಯಕ್ತಿಗಳು ಬಹುಬೇಗ ಕೋಪಗೊಂಡರೂ ಅಷ್ಟೇ ಬೇಗ ಶಾಂತಿಯಿಂದ (peaceful) ಎಲ್ಲವನ್ನು ನಿಭಾಯಿಸುವ ಗುಣ ಹೊಂದಿರುತ್ತಾರೆ. ಇವರು ಕುಟುಂಬಕ್ಕಾಗಿ ಯಾವ ರೀತಿಯ ಕಷ್ಟಗಳನ್ನು ಕೂಡ ಎದುರಿಸುವ ಮನಸ್ಸು ಉಳ್ಳವರು.
ಆಗಸ್ಟ್ :
ಆಗಸ್ಟ್ನಲ್ಲಿ ಜನಿಸಿದ ವ್ಯಕ್ತಿ ಎಲ್ಲರನ್ನು ಪ್ರೀತಿಸುವ ಗುಣಗಳ ಹೊಂದಿರುತ್ತಾರೆ. ಇವರು ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು (More inclined towards spirituality) ಹೊಂದಿರುವವರು. ಕಷ್ಟಪಟ್ಟು ದುಡಿಯುವ ವರ್ಗಕ್ಕೆ ಸೇರಿದ ಮಂದಿ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಗುಣ ಇವರು ಹೊಂದಿರುತ್ತಾರೆ. ಹಿರಿಯರಿಗೆ, ಪ್ರೀತಿ ಪಾತ್ರರಲ್ಲಿ ವಿನಯದಿಂದ (Sincerely) ನಡೆದುಕೊಳ್ಳುವ ಗುಣ ಹೊಂದಿರುತ್ತಾರೆ.
ಸೆಪ್ಟೆಂಬರ್ :
ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ ಜನರು ಆಲೋಚನೆಗಳನ್ನು ದೃಢವಾಗಿ ನಂಬುವ ಗುಣದವರು. ಬೇರೆಯವರ ಮಾತಿಗಿಂತ ಅವರ ಮೇಲೆ ಅವರಿಗೆ ನಂಬಿಕೆ ಹೆಚ್ಚಾಗಿರುತ್ತದೆ (They trust their words more than anyone else’s words).
ಅಕ್ಟೋಬರ್ :
ಅಕ್ಟೋಬರ್ನಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚು ಪ್ರಮಾಣಿಕರು, ಬುದ್ಧಿವಂತರು, ಗುರಿ ಕಡೆಗೆ ಯಾವಾಗಲು ಯೋಚಿಸುವವರು (Conscientious, intelligent, always thinking towards the goal). ಇವರೆದುರು ವಾದ ಮಾಡುವುದು ಬಹಳ ಕಷ್ಟ. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿಯಲು ಯಾವಾಗಲು ಮುಂದಾಗಿರುತ್ತಾರೆ.
ನವೆಂಬರ್ :
ನವೆಂಬರ್ನಲ್ಲಿ ಜನಿಸಿದವರು ಕುಟುಂಬಕ್ಕಾಗಿ ಯಾವುದೇ ಹಂತದಲ್ಲಿ ಕೆಲಸ ಮಾಡಲು ತಯಾರಿರುತ್ತಾರೆ. ಯಾರನ್ನಾದರೂ ಒಮ್ಮೆ ನಂಬಿದರೆ ಕುರುಡಾಗಿ ಅವರನ್ನೇ ಹಿಂಬಾಲಿಸುವ ಗುಣ ಹೊಂದಿರುತ್ತಾರೆ. ದಾನ ಧರ್ಮದಲ್ಲಿ ಹೆಚ್ಚು ನಂಬಿಕೆ (More faith in charity) ಇಟ್ಟಿದ್ದು ಧೈರ್ಯಶಾಲಿಗಳು, ಸಮಾಜಮುಖಿ ಕಾರ್ಯದಲ್ಲಿ ನಂಬಿಕೆ ಇಟ್ಟುಕೊಂಡಿರುತ್ತಾರೆ.
ಡಿಸೆಂಬರ್ :
ಡಿಸೆಂಬರ್ ತಿಂಗಳಲ್ಲಿ ಜನಿಸಿದ ಜನರು ಉದ್ಯೋಗ ಕ್ಷೇತ್ರ ಹಾಗೂ ಹಣಕಾಸು ಸ್ಥಿತಿಯ (Employment sector and financial status) ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳುವುದಿಲ್ಲ. ಯಾವುದೇ ವಿಚಾರದ ಬಗ್ಗೆ ಮಾತನಾಡಲು, ಕೆಲಸ ಮಾಡಲು ಹಿಂಜರಿಯುವುದಿಲ್ಲ ಇವರು. ಪ್ರೀತಿ ಉಳಿಸಿಕೊಳ್ಳಲು ಎಂತಹ ರಿಸ್ಕ್ ಕೂಡ ತೆಗೆದುಕೊಳ್ಳುತ್ತಾರೆ.