ಜನಸ್ಪಂದನ ನ್ಯೂಸ್, ಬೆಂಗಳೂರು : ಹೆಣ್ಣು ಮಕ್ಕಳು ಬಹಳ ಇಷ್ಟಪಡುವ ಸ್ಥಳವೆಂದರೆ ಅದು ಬ್ಯೂಟಿ ಪಾರ್ಲರ್. ಆದರೆ ಇಲ್ಲೊಂದು ಕಡೆ ಬ್ಯೂಟಿ ಪಾರ್ಲರ್ ಬಂದ್ ಮಾಡಿಸಿ ಎಂದು ಯುವಕರು ಬೀದಿಗಿಳಿದು ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದಾರೆ. ಘಟನೆಯ ಕುರಿತು ವಿಡಿಯೋ ವೈರಲ್ ಆಗಿದೆ.
ಈ ವಿಚಿತ್ರ ಪ್ರತಿಭಟನೆ ಬಿಹಾರದ ಸಸಾರಾಮ್‌ನಲ್ಲಿ ನಡೆದಿದ್ದು, ಯುವಕರ ಗುಂಪೊಂದು ಬ್ಯೂಟಿ ಪಾರ್ಲರ್ ಅನ್ನು ಬಂದ್ ಮಾಡಿಸಿ ಎಂದು ಪ್ರತಿಭಟನೆ ಮಾಡಿದೆ.
ಇದನ್ನು ಓದಿ : ಗಂಡನನ್ನು ಫಾರಿನ್ ಗೆ ಕಳುಹಿಸಿ ಮಾವನೊಂದಿಗೆ ರೊಮ್ಯಾನ್ಸ್; YouTubeನಲ್ಲಿದೆ ಈ ಮೂವಿ.!
ವೈರಲ್ ವಿಡಿಯೋದಲ್ಲಿ ಒಂದಷ್ಟು ಯುವಕರ ಗುಂಪು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಬಂದ್ ಮಾಡಿಸಿ ಬಂದ್ ಮಾಡಿಸಿ ಬ್ಯೂಟಿ ಪಾರ್ಲರ್‌ಗಳನ್ನು ಬಂದ್ ಮಾಡಿಸಿ ಎಂದು ಘೋಷಣೆಯನ್ನು ಕೂಗುತ್ತಾ ಪ್ರತಿಭಟನೆಯನ್ನು ಮಾಡುತ್ತಿರುವ ದೃಶ್ಯವನ್ನು ನೋಡಬಹುದಾಗಿದೆ..
ಆದರೆ ಇದನ್ನು ಗಂಭೀರ ಉದ್ದೇಶಕ್ಕಾಗಿ ನಡೆಸಲಾಗಿದೆಯೇ ಅಥವಾ ಕೇವಲ ಮನೋರಂಜನೆಯ ಚೇಷ್ಟೆಗಾಗಿ ಮಾಡಲಾಗಿದೆಯೇ ಅಥವಾ ಈ ಪ್ರತಿಭಟನೆಯ ಹಿಂದಿನ ನಿಜವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಇದನ್ನು ಓದಿ : ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು ; ವಿಡಿಯೋ Viral.!
ಈ ಕುರಿತ ಪೋಸ್ಟ್ ಒಂದನ್ನು Bhojpuri_vlogs_00 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪ್ರತಿಭಟನೆಯ ಕುರಿತಾದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಆಗಸ್ಟ್ 15 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಕಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
ಇದನ್ನು ಓದಿ : ನಾಗರ ಹಾವನ್ನು ಪ್ರೀತಿಯಿಂದ ಮುದ್ದಿಸಲು ಬಂದ ಎಮ್ಮೆ ; ಮುಂದೆನಾಯ್ತು.? ಈ ವಿಡಿಯೋ ನೋಡಿ.!
ಇಂತಹ ಚಿತ್ರ ವಿಚಿತ್ರ ಪ್ರತಿಭಟನೆಗಳು ಕೂಡಾ ನಮ್ಮ ದೇಶದಲ್ಲಿ ನಡೆಯುತ್ತದೆಯೇ ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಮೊದಲು ಹುಡುಗರು ಹೇರ್ ಕಟ್ ಮಾಡಿಸಲು ಹೋಗುವ ಸಲೂನ್‌ಗಳನ್ನು ಬಂದ್ ಮಾಡಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಅರೇ ಈ ಹುಡುಗರಿಗೆ ಹೆಣ್ ಮಕ್ಳು ಹಾಗೂ ಬ್ಯೂಟಿ ಪಾರ್ಲರ್ ಮೇಲೆ ಇಷ್ಟ್ಯಾಕೆ ದ್ವೇಷನಪ್ಪಾ ಎಂದು ಕೆಲವರು ಪ್ರಶ್ನಿಸಿದ್ದಾರೆ.
View this post on Instagram