ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಯುವಜನತೆಯ ಹುಚ್ಚಾಟ ಒಂದೆರಡಲ್ಲ. ರೀಲ್ಸ್ ಗಾಗಿ ಏನೇನೋ ಹುಚ್ಚುಚ್ಚು ಸಾಹಸ ಮಾಡಲು ಹೋಗ್ತಾರೆ. ಸದ್ಯ ಮೂವರು ಯುವಕರು ಮೋಜಿಗಾಗಿ, ಹುಚ್ಚು ಸಾಹಸ ತೋರಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಇದನ್ನು ಓದಿ : ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ನಡು ರಸ್ತೆಯಲ್ಲಿ ಹೊಡೆದ ವಿದ್ಯಾರ್ಥಿನಿ; Video viral.!
ಮಹಾರಾಷ್ಟ್ರದ ನಾಗ್ಪುರದ ಉಮ್ರೆಡ್ ಪಟ್ಟಣದ ಸಮೀಪವಿರುವ ಮಕರಧೋಕ್ಡಾ ಅಣೆಕಟ್ಟಿನಲ್ಲಿ ನಡೆದಿದೆ.
ಮೂವರು ಯುವಕರ ಪೈಕಿ ಓರ್ವ ನೂರಾರು ಪ್ರವಾಸಿಗರ ಸಮ್ಮುಖದಲ್ಲೇ ಜಲಾಶಯದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಮೂವರು ಯುವಕರು ಅಣೆಕಟ್ಟು ನೋಡಲು ಬಂದಿದ್ದು, ಈ ವೇಳೆ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಅಣೆಕಟ್ಟಿನ ಇಳಿಜಾರಿದ್ದ ಕೋಡಿ ಮೇಲೆ ಹತ್ತಿ ಪ್ರಾಣಾಪಾಯ ತಂದುಕೊಂಡಿದ್ದಾರೆ.
ಇದನ್ನು ಓದಿ : Special news : ಶ್ರಾವಣ ಮಾಸದಲ್ಲಿ ಮಾಂಸಾಹಾರ ತಿನ್ಮಬಾರದು ಏಕೆ.? ಇಲ್ಲಿದೆ ವೈಜ್ಞಾನಿಕ ಕಾರಣ.
ಒಬ್ಬ ಯುವಕ ಮೇಲೆ ಹತ್ತಲು ಯಶಸ್ವಿಯಾದರೆ ಆತ ತನ್ನ ಇನ್ನಿಬ್ಬರು ಸ್ನೇಹಿತರನ್ನು ಮೇಲೆತ್ತಲು ಯತ್ನಿಸಿದ್ದಾನೆ. ಆದರೆ ಇಳಿಜಾರಿದ್ದರಿಂದ ಇಬ್ಬರು ಜಾರಿ ನೆಲಕ್ಕೆ ಬಿದ್ದಿದ್ದಾರೆ. ಇದೇ ಸಂದರ್ಭ ಅಣೆಕಟ್ಟಿನ ಮೇಲೆ ಹತ್ತಿದ್ದ ಯುವಕ ನೀರಿಗೆ ಬಿದ್ದಿದ್ದಾನೆ. ಆತನಿಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದಾನೆ.
ಆತನನ್ನು ರಕ್ಷಿಸಲು ಅಲ್ಲಿದ್ದ ಬೇರೆ ಯುವಕರು ಆತನ ಕಡೆ ಈಜಿಕೊಂಡು ಬರಲು ಮುಂದಾಗಿದ್ದಾರೆ. ಇಳಿಜಾರಿನ ಮೇಲೆ ಕೂಡಾ ಹತ್ತಲು ಕೆಲ ಯುವಕರು ಹರಸಾಹಸ ಪಟ್ಟಿದ್ದಾರೆ. ಆದರೆ ಹಲವು ಬಾರಿ ಮುಳುಗಿ ಮೇಲೆದ್ದ ಯುವಕ ಕೊನೆಗೆ ಪ್ರಾಣ ಬಿಟ್ಟಿದ್ದಾನೆ.
ಇದನ್ನು ಓದಿ : Health : ಮೂಗಿನಲ್ಲಿ ಬೆರಳು ಹಾಕುವ ಅಭ್ಯಾಸವಿದೆಯೇ.? ಹಾಗಿದ್ರೆ ಈ ಸುದ್ದಿ ಓದಿ.
ನೂರಾರು ಪ್ರವಾಸಿಗರ ಸಮ್ಮುಖದಲ್ಲೇ ಈ ದುರ್ಘಟನೆ ನಡೆದಿದೆ. ಕೆಲ ಯುವಕರು ಇದರ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಇದೀಗ ಘಟನೆಯ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
⚠️Disturbing Video
Stunt goes wrong in Makardhokda Lake, Nagpur.
Yesterday on Independence day a young boy drowned in Nagpur while performing the stunt.People tried to save him but their efforts went in vain. pic.twitter.com/YrcF0r1cR3
— TIND Posting (@tindposting) August 16, 2024