ಜನಸ್ಪಂದನ ನ್ಯೂಸ್, ಡೆಸ್ಕ್ : ರಾತ್ರಿ ವೇಳೆ ಮಹಿಳೆಯರು ಒಬ್ಬಂಟಿಯಾಗಿ ಸುತ್ತಾಡಬಾರದು ಅದು ಸುರಕ್ಷಿತವಲ್ಲ ಎಂದು ಹೇಳುತ್ತಿರುತ್ತಾರೆ. ಆದ್ರೆ ಇಲ್ಲೊಂದು ವಿರುದ್ಧವಾದ ಘಟನೆ ನಡೆದಿದೆ.
ವಿವಸ್ತ್ರವಾದ ಯುವತಿಯೋರ್ವಳು ನಡು ರಾತ್ರಿಯಲ್ಲಿ ಪಾರ್ಕ್ ಒಂದರಲ್ಲಿ ಯುವಕನ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಘಟನೆಯ ಕುರಿತಾದ ವಿಡಿಯೋವೊಂದು ವೈರಲ್ ಆಗಿದೆ.
ಇದನ್ನು ಓದಿ : ಜಾಹೀರಾತಿನಲ್ಲಿ ಸಮವಸ್ತ್ರ ಧರಿಸಿ ಕಾಣಿಸಿಕೊಂಡ ಮಹಿಳಾ ಕಾನ್ಸ್‌ಟೇಬಲ್ ಸಸ್ಪೆಂಡ್ ; Video ನೋಡಿ.
ಯುವತಿಯೋರ್ವಳು ನಟ್ಟ ನಡು ರಾತ್ರಿಯಲ್ಲಿ ವಿವಸ್ತ್ರವಾಗಿ ಪಾರ್ಕ್ ಗೆ ಬಂದಿದ್ದು, ಅಲ್ಲಿದ್ದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ.
ಈ ಅಘಾತಕಾರಿ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಪುರುಷರಿಗೂ ಕೂಡಾ ಸೂಕ್ತ ರಕ್ಷಣೆ ಬೇಕಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ರಷ್ಯಾದ ಯುವತಿಯೋರ್ವಳು ರಾತ್ರಿ ವೇಳೆ ಪಾರ್ಕ್ ಅಲ್ಲಿ ಹಾಯಾಗಿ ಕುಳಿತಿದ್ದ ಯುವಕನನ್ನು ಕಂಡಿದ್ದು, ವಿವಸ್ತ್ರವಾಗಿ ಆತನ ಬಳಿ ಹೋಗಿ ಲೈಂಗಿಕ ಕ್ರಿಯೆ ನಡೆಸುವಂತೆ ಕೇಳಿ ಕೊಂಡಿದ್ದಾಳೆ.
ಇದನ್ನು ಓದಿ : Health : ಊಟದ ಬಳಿಕ ಅಥವಾ ಊಟದ ಮಧ್ಯದಲ್ಲಿ ನೀರು ಕುಡಿತೀರಾ? ಹಾಗಿದ್ರೆ ಈ ಸುದ್ದಿ ಓದಿ.!
ಇದಕ್ಕೊಪ್ಪದ ಆತನ ಮೇಲೆ ದೌರ್ಜನ್ಯ ಎಸಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದಾಳೆ. ಕೊನೆಯಲ್ಲಿ ಪೊಲೀಸರು ಬಂದು ಆ ಯುವಕನ್ನು ರಕ್ಷಿಸಿದ್ದಾರೆ.
ಈಕೆಯ ಈ ಹುಚ್ಚಾಟದಿಂದ ಪಾರಾಗಲು ಯುವಕ ಒದ್ದಾಡುತ್ತಿದ್ದಾಗ ಅಲ್ಲಿಗೆ ಬಂದ ಪೊಲೀಸರು ಆ ಮಹಿಳೆಯನ್ನು ಹಿಡಿದು ಬಂಧಿಸಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು Human Nature ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ಪಾರ್ಕ್‌ನಲ್ಲಿ ಮಹಿಳೆ ಪುರುಷನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದನ್ನು ನೋಡುತ್ತಾ ನಿಂತ ಪೊಲೀಸರು’ ಎಂಬ ಶೀರ್ಷಿಕೆ ನೀಡಲಾಗಿದೆ.
ಇದನ್ನು ಓದಿ : BSNL : 229 ರೂ. ರೀಚಾರ್ಜ್ ಪ್ಲಾನ್ಗೆ ಭಾರೀ ಡಿಮ್ಯಾಂಡ್; ದಿನಕ್ಕೆ 2GB ಡೇಟಾ ಸೇರಿ ಹಲವು ಬೆನಿಫಿಟ್ಸ್.!
ಆಗಸ್ಟ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 10.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಪುರುಷನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆಕೇಗೆ ಯಾವ ಶಿಕ್ಷೆ ಕೊಡ್ತೀರಾ’ ಎಂದು ಕಮೆಂಟ್ ಮಾಡಿದರೆ, ಮತ್ತೋರ್ವ ‘ಪುರುಷರಿಗೆ ರಕ್ಷಣೆ ಎಲ್ಲಿದೆ’ ಎಂದು ಪ್ರಶ್ನಿಸಿದ್ದಾರೆ.
Police just watch as woman sexually assaults man in park pic.twitter.com/udLx9YUiiO
— Human Nature (@Human101Nature) August 18, 2024