ಜನಸ್ಪಂದನ ನ್ಯೂಸ್, ಡೆಸ್ಕ್ : ಯುವತಿಯೋರ್ವಳು ಆತ್ಮಹತ್ಯೆ ಮಾಡ್ಕೊಬೇಕು ಎಂದು ರೈಲು ಹಳಿಯ ಮೇಲೆ ಮಲಗಿದ್ದು, ತಕ್ಷಣ ರೈಲು ಚಾಲಕನ ತ್ವರಿತ ಕ್ರಮದಿಂದ ಆಗಬಹುದಾದ ದುರಂತ ಸಂಭವಿಸಿದೆ.
ಬಿಹಾರದ ಚಕಿಯಾ ನಿಲ್ದಾಣದ ಸಮೀಪ ಇಂತದ್ದೊಂದು ಘಟನೆ ನಡೆದಿದ್ದು, ಈ ಕುರಿತು ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : ಯೂಟ್ಯೂಬ್ Video ನೋಡಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ; ಮುಂದೆನಾಯ್ತು ಗೊತ್ತಾ.?
ಚಕಿಯಾ ನಿಲ್ದಾಣದ ಹೊರ ಸಿಗ್ನಲ್ ಬಳಿ ನಿಲ್ಲಿಸಲಾಗಿದ್ದ ರೈಲಿನ ಕೆಳಗೆ ಬ್ಯಾಗ್ ಅನ್ನು ಬೆನ್ನಿನ ಮೇಲೆ ಇಟ್ಟುಕೊಂಡು ಯುವತಿ ಟ್ರ್ಯಾಕ್ ಮೇಲೆ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ವೇಳೆ ಮೋತಿಹಾರಿಯಿಂದ ಮುಜಾಫರ್ಪುರಕ್ಕೆ ರೈಲು ತೆರಳುತ್ತಿತ್ತು. ಆದರೆ ಯುವತಿ ಹಳಿಯ ಮೇಲೆ ಮಲಗಿಕೊಂಡಿರುವುದನ್ನು ಅರಿತ ರೈಲು ಚಾಲಕ, ತಕ್ಷಣ ಬ್ರೇಕ್ ಹಾಕಿದ್ದಾನೆ. ರೈಲು ವೇಗವಾಗಿ ಚಲಿಸುತ್ತಿದ್ದರೂ ಕೂಡ ಚಾಲಕನ ತ್ವರಿತ ಕ್ರಮದಿಂದ ದುರಂತವನ್ನು ತಪ್ಪಿಸಲು ಸಾಧ್ಯವಾಗಿದೆ.
ಚಾಲಕ ತಕ್ಷಣ ಕೆಳಗೆ ಇಳಿದು ಯುವತಿ ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದರೆ ಯುವತಿ ಆತನ ಮಾತು ಕೇಳದೆ ಅಲ್ಲಿಂದ ಎದ್ದು ಬರಲು ನಿರಾಕರಿಸಿದ್ದಾಳೆ. ರೈಲು ತುಂಬಾ ಹೊತ್ತು ನಿಂತಿದ್ದರಿಂದ ಪರಿಸ್ಥಿತಿ ಹೆಚ್ಚು ಉದ್ವಿಗ್ನವಾಯಿತು.
ಚಾಲಕ ಎಷ್ಟೇ ಕೇಳಿಕೊಂಡರೂ ಯುವತಿ ಕೇಳದ ಕಾರಣ ಅಲ್ಲಿಗೆ ಬಂದ ಸ್ಥಳೀಯರು ಬಂದು ಮನವೊಲಿಸಿ ಟ್ರ್ಯಾಕ್‍ನಿಂದ ಬಲವಂತವಾಗಿ ಹೊರಗೆ ಎಳೆದಿದ್ದಾರೆ. ವೈಯಕ್ತಿಕ ವಿಷಯದ ಬಗ್ಗೆ ನೊಂದ ಯುವತಿ ಜೋರಾಗಿ ಅಳುತ್ತಿದ್ದಳು.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
ತನ್ನ ಗೆಳೆಯನನ್ನು ಮದುವೆಯಾಗುವ ವಿಚಾರದಲ್ಲಿ ಕುಟುಂಬದಲ್ಲಿ ವಿವಾದ ನಡೆದಿದ್ದರಿಂದ ಯುವತಿ ಬೇಸರಗೊಂಡಿದ್ದಳು. ಆಕೆಯ ಕುಟುಂಬವು ಈ ಸಂಬಂಧವನ್ನು ವಿರೋಧಿಸಿತ್ತು. ಇದರಿಂದಾಗಿ ಆಕೆ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾಳೆ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ.
ವಿಡಿಯೋ ನೋಡಿ :
बिहार के मोतिहारी में ट्रेन के आगे लेटी अचानक लड़की।ट्रेन के लोको पायलट ने इमरजेंसी ब्रेक लगाकर जान बचाई। रेलवे ट्रैक पर कुछ देर हुआ हाईवोल्टेज ड्रामा!रेलवे ट्रैक से लड़की हटने को नही थी तैयार …@Rail_Minister pic.twitter.com/UPxE3ZtHNQ
— Suresh Jha (@jhasureshjourno) September 10, 2024