ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದು ತನ್ನ ವೇಗದ ಸರ್ವಿಸ್‌ನಿಂದಲೇ ಬ್ಲಿಂಕಿಟ್ ಮಾರುಕಟ್ಟೆಯಲ್ಲಿ ಫೇಮಸ್ ಆಗಿದೆ. ಇದೀಗ ಬ್ಲಿಂಕ್ ಇಟ್ ವೇಗವಾಗಿ ಸೇವೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
ಯುವಕನೋರ್ವ ಅಂಡರ್‌ವೇರ್ ಬುಕ್ ಮಾಡಿದ್ದು, ಆತನಿಗೆ ಬಿಕಿನಿ ಕಳುಹಿಸಿದೆ. ಸದ್ಯ ಈ ಎಡವಟ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಪ್ರಿಯಾಂಶ್ ಎಂಬವರು ಮಹಿಳೆಯರ ಬಿಕಿನಿ ಪ್ಯಾಂಟಿಯ ಪ್ಯಾಕೇಟ್ ಮತ್ತು ಬ್ಲಿಂಕಿಟ್ ಆಪ್ ಕವರ್ ಸಹಿತ ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬ್ಲಿಂಕಿಟ್ ಸೇವಾ ಕೇಂದ್ರಕ್ಕೆ ಕರೆ ಮಾಡಿದೆ. ಆದರೆ ಯಾರೂ ಸರಿಯಾಗಿ ಸ್ಪಂದಿಸಿಲ್ಲ. ಪಾರ್ಸೆಲ್ ಹಿಂದಿರುಗಿ ತೆಗೆದುಕೊಂಡು ಹಣ ರೀಫಂಡ್ ಮಾಡುವಂತೆ ಕೇಳಿದ್ರೂ ಪ್ರತಿಕ್ರಿಯೆ ನೀಡಿಲ್ಲ.
ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನ ಆಗಿಲ್ಲ. ಹಾಗಾಗಿ ನಾನೇ ಮಹಿಳೆಯರ ಪ್ಯಾಂಟಿ ಧರಿಸಲು ನಿರ್ಧರಿಸಬೇಕಿದೆ ಎಂದು ಪ್ರಯಾಂಶ್ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿ ಕೊಂಡಿದ್ದಾರೆ.
ಇದನ್ನು ಓದಿ : Special news : ಯಾವ ರಾಶಿಯವರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಗೊತ್ತಾ.?
ಇನ್ನೂ ಪ್ರಯಾಂಶ್ ಆರೋಪದ ಕುರಿತು ಬ್ಲಿಂಕಿಟ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇತ್ತ ಪ್ರಯಾಂಶ್ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರೇಹವಾರಿ ಕಮೆಂಟ್ ಮಾಡುತ್ತಿದ್ದಾರೆ.