Monday, October 7, 2024
spot_img
spot_img
spot_img
spot_img
spot_img
spot_img
spot_img

Health : ರಾತ್ರಿ ಮಲಗುವ ಮುಂಚೆ 1 ಲೋಟ ನೀರು ಕುಡಿದರೆ ಏನಾಗುವುದು ಗೊತ್ತೇ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮಲಗುವ ಮುಂಚೆ ಕೆಲವರು ನೀರು ಕುಡಿಯಬೇಕು ಎಂದು ಹೇಳಿದರೆ, ಇನ್ನು ಕೆಲವರು ನೀರು ಕುಡಿಯಲೇಬಾರದು ಎನ್ನುತ್ತಾರೆ. ಹಾಗಾದರೆ ಈ ಎರಡರಲ್ಲಿ ಒಳ್ಳೆಯ ಅಭಿಪ್ರಾಯ ಯಾವುದು ಎಂದು ತಿಳಿಯೋಣ ಬನ್ನಿ.

ಮಲಗುವ ಮುಂಚೆ ನೀರು ಕುಡಿಯುವುದರಿಂದ ಆಗುವ ಉಪಯೋಗ :

ನಾವು ದಿನವೂ ಬಹಳ ಕೆಲಸ ಮಾಡಿರುತ್ತೇವೆ. ಹೀಗಾಗಿ ನಮ್ಮ ದೇಹದ ಸ್ನಾಯುಗಳು ಸಾಕಷ್ಟು ಶ್ರಮಪಟ್ಟಿರುತ್ತವೆ. ಇದರಿಂದ ದೇಹವು ಸಾಕಷ್ಟು ನೀರಿನ ಅಂಶವನ್ನು ಕಳೆದುಕೊಂಡಿರುತ್ತದೆ. ಅಂದರೆ, ನೀರಿನ ಪ್ರಮಾಣ ಕುಂಠಿತಗೊಂಡಿರುತ್ತದೆ.

ಇದನ್ನು ಓದಿ : ಸ್ಮಾರ್ಟ್‌ಫೋನ್‌ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ತಿಳಿಯಲು ಈ Code ಬಳಸಿ.!

ನಿದ್ರೆಯ ಕೊರತೆಯಿಂದ ದೇಹಕ್ಕೆ ಅಸ್ವಸ್ಥತೆ ಉಂಟಾಗುವುದು. ಪರಿಣಾಮ ಒಣ ಗಂಟಲು ಮತ್ತು ಗೊರಕೆಯ ಸಾಧ್ಯತೆಗಳಿವೆ. ಇದೆಲ್ಲವನ್ನು ಹೋಗಲಾಡಿಸಲು ನಮ್ಮ ದೇಹ ಹೈಡ್ರೇಟ್​ ಆಗಿರಲೇಬೇಕು. ಹೀಗಾಗಿ ಮಲಗುವ ಮುನ್ನ ನೀರು ಕುಡಿಯುವುದು ಉತ್ತಮ‌.

ಈ ರೀತಿ ಮಾಡುವುದರಿಂದ ಒತ್ತಡಕ್ಕೊಳಗಾದ ಸ್ನಾಯುಗಳು ವಿಶ್ರಾಂತಿಗೆ ಜಾರುತ್ತವೆ ಮತ್ತು ಬಲಗೊಳ್ಳುತ್ತವೆ. ಸರಿಯಾಗಿ ನಿದ್ರೆ ಮಾಡುವುದರಿಂದ ಮರುದಿನ ತುಂಬಾ ಚುರುಕಾಗಿರಬಹುದು.

ಮಲಗುವ ಮೊದಲು ನೀರು ಕುಡಿದರೆ ದೇಹದಲ್ಲಿ ಸಂಗ್ರಹವಾದ ವಿಷವನ್ನು ಸಹ ಹೊರಹಾಕಬಹುದು. ಇದರಿಂದ ನಮ್ಮ ತ್ವಚೆ ನಯವಾದ ಹಾಗೂ ಮೃದುವಾಗಿರುತ್ತದೆ.

ಇದನ್ನು ಓದಿ : ಕುಳಿತುಕೊಳ್ಳಲು ಸೀಟ್ ಇಲ್ಲದೇ ಬಸ್‌ನಿಂದ ಕೆಳಗೆ ಇಳಿದ ಡ್ರೈವರ್.? Video ನೋಡಿ.

ನಾವು ನಿದ್ರಿಸಿದ ನಂತರ ನಮ್ಮ ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಹೀಗಾಗಿ ಮಲಗುವ ಮುನ್ನ ನೀರು ಕುಡಿಯುವುದು ಈ ಸಮಸ್ಯೆಗೆ ಪರಿಹಾರವಾಗಿದೆ. ದೇಹದ ಉಷ್ಣತೆಯು ಸಮತೋಲಿತವಾಗಿರುತ್ತದೆ.

ಮಲಗುವ ಮುಂಚೆ ನೀರು ಕುಡಿಯುವುದರಿಂದ ದೇಹಕ್ಕಾಗುವ ನಷ್ಟ :

ರಾತ್ರಿಯಲ್ಲಿ ಹೆಚ್ಚು ನೀರು ಕುಡಿಯುವುದರಿಂದ ಎದೆಯುರಿ ಕಾಡಬಹುದು. ಉಸಿರಾಟದ ತೊಂದರೆಯೂ ಸಹ ಉಂಟಾಗುತ್ತದೆ.

ಇದನ್ನು ಓದಿ : ತಂದೆ ಆಸ್ತಿ ಮಾರುವುದನ್ನು ಮಗ ತಡೆಯಲು ಸಾಧ್ಯವಿಲ್ಲ ; Supreme Court ಮಹತ್ವದ ತೀರ್ಪು.!

ನಾವು ರಾತ್ರಿಯಲ್ಲಿ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಿದರೆ, ಅವು ಉಸಿರಾಟದ ಪ್ರದೇಶಕ್ಕೆ ಪ್ರವೇಶಿಸಿ ಉಸಿರಾಟದ ತೊಂದರೆಗೆ ಕಾರಣವಾಗಬಹುದು.

ಮಲಗುವ ಮುನ್ನ ಹೆಚ್ಚು ನೀರು ಕುಡಿದರೆ ರಾತ್ರಿಯಿಡೀ ಬೇಕೆಂದಾಗ ಮೂತ್ರ ವಿಸರ್ಜನೆಗೆ ಎದ್ದೇಳಬೇಕಾಗುತ್ತದೆ. ಇದು ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದ ನಿದ್ರೆಗೆ ತುಂಬಾ ತೊಂದರೆಯಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img