Saturday, November 9, 2024
spot_imgspot_img
spot_img
spot_img
spot_img
spot_img
spot_img

Health : ಸೊಪ್ಪು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಹಸಿರು ತರಕಾರಿಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸೊಪ್ಪಿನಲ್ಲಿ ಸಹಜವಾದ ಔಷಧೀಯ ಗುಣಗಳಿವೆ (natural medicinal qualities). ಹಲವಾರು ಪೋಷಕಾಂಶಗಳಿದ್ದು, ಇವುಗಳನ್ನು ತಿನ್ನುವುದರಿಂದ ಸಿಗುವ ಆರೋಗ್ಯಕ್ಕೆ ತುಂಬಾ ಉಪಯುಕ್ತ.

ಇನ್ನೂ ಸೊಪ್ಪುಗಳಲ್ಲಿ ಈ ಸೊಪ್ಪುಗಳು ತುಂಬಾ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.

ಇದನ್ನು ಓದಿ : ಮನುಷ್ಯರಿಗಿಂತ ಪ್ರಾಣಿಗಳೇ ಗುಣದಲ್ಲಿ ಮೇಲು ; ಹೇಗಂತಿರಾ.? ಈ ವಿಡಿಯೋ ನೋಡಿ.!

* ಪಾಲಕ್ ಸೊಪ್ಪು :
ಈ ಸೊಪ್ಪು ಜೀರ್ಣಕ್ರಿಯೆಯ ಸಮಸ್ಯೆ ಹಾಗೂ ತೂಕ ಇಳಿಸುವವರಿಗೆ ಸಹಾಯ ಮಾಡುತ್ತದೆ. ಇದು ಪೋಲಿಕ್‌ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಹೆಚ್ಚಿನ ಪ್ರಮಾಣದ ಪೈಬರ್ ಅನ್ನು ಸಹ ಒಳಗೊಂಡಿದೆ.

ಪಾಲಕ್ ಸೊಪ್ಪನ್ನು (spinach) ತಿನ್ನುವುದರಿಂದ ದೃಷ್ಟಿಗೆ ಕೂಡ ಒಳ್ಳೆಯದು. ಮೂಳೆಗಳನ್ನು ಬಲಪಡಿಸಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

* ಮೆಂತೆ ಸೊಪ್ಪು :
ಈ ಸೊಪ್ಪಿನಲ್ಲಿ ಕಹಿ (bitterness) ಗುಣ ಇದ್ದರೂ ಸಹ ಅದು ಔಷಧೀಯ ಗುಣಗಳನ್ನು ಹೊಂದಿದೆ. ಹೊಟ್ಟೆ ನೋವು, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆ ಸೊಪ್ಪಿನಿಂದ ಮನೆ ಔಷಧಿಯನ್ನು ತಯಾರಿಸಬಹುದು. ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆ ಸೊಪ್ಪು ತುಂಬಾ ಪ್ರಯೋಜನಕಾರಿಯಾಗಿದೆ.

* ಕೊತ್ತಂಬರಿ ಸೊಪ್ಪು :
ಈ ಸೊಪ್ಪಿನಲ್ಲಿ ವಿಟಮಿನ್ ಎ, ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್​ಗಳು ಅಧಿಕವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು (immune system) ಹೆಚ್ಚಿಸಲು ಸಹಾಯ ಮಾಡುತ್ತದೆ.

ಸೊಪ್ಪನ್ನು ತಿಂದರೆ ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದು ಕ್ಯಾಲ್ಸಿಯಂ, ಕಬ್ಬಿಣ ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಮ್​ನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ.

* ಒಂದೆಲಗ ಸೊಪ್ಪು :
ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಒಂದು ಅದ್ಭುತ ಸೊಪ್ಪು. ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಕೆ ಮಾಡಲಾಗುತ್ತದೆ.

ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣೆ ಶಕ್ತಿ (concentration and memory) ವೃದ್ಧಿ, ಕಲಿಕೆಯ ಶಕ್ತಿ ಹೆಚ್ಚಿಸಲು ಈ ಸೊಪ್ಪು ತುಂಬಾ ಸಹಾಯಕಾರಿ.

* ಕರಿಬೇವು :
ಕರಿಬೇವಿನಲ್ಲಿ ವಿಟಮಿನ್ ಸಿ ಮತ್ತು ಬೀಟಾ- ಕ್ಯಾರೋಟಿನ್ ಅಂಶಗಳಿದ್ದು, ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಉಪಯೋಗಿಸಲ್ಪಡುತ್ತದೆ.

ಇದನ್ನು ಓದಿ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.!

ಯಾವುದೇ ಔಷಧಿಗಳಿಂತ ಮನುಷ್ಯನ ದೇಹದಲ್ಲಿ ರಕ್ತದಲ್ಲಿ ಸಕ್ಕರೆ ಅಂಶದ ಮಟ್ಟವನ್ನು ನಿಯಂತ್ರಣದಲ್ಲಿಟ್ಟು, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಕರಿಬೇವಿನ (curry) ಸೊಪ್ಪು ನಿಯಂತ್ರಣದಲ್ಲಿಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img