Sunday, December 8, 2024
HomeSpecial NewsSpecial news : ನಿಮ್ಮ ಬಳಿ 1 ರೂ. ಹಳೆ ನಾಣ್ಯ ಇದ್ದರೆ ನೀವಾಗಬಹುದು ಲಕ್ಷಾಧಿಪತಿ.!
spot_img

Special news : ನಿಮ್ಮ ಬಳಿ 1 ರೂ. ಹಳೆ ನಾಣ್ಯ ಇದ್ದರೆ ನೀವಾಗಬಹುದು ಲಕ್ಷಾಧಿಪತಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವು ಜನರು ವಿಶೇಷ ಹವ್ಯಾಸಗಳು (habits) ಇರುತ್ತವೆ. ಅದರಲ್ಲಿ ಅಪರೂಪದ ನೋಟುಗಳು, ನಾಣ್ಯಗಳನ್ನು (coins) ಕಲೆ ಹಾಕುವ ಹವ್ಯಾಸ ಸೇರಿದೆ.

ನಿಮಗೂ ವಿಶಿಷ್ಟವಾದ ನೋಟು (special note), ನಾಣ್ಯಗಳನ್ನು ಕೂಡಿಡುವ ಹವ್ಯಾಸ ಇದ್ರೆ ಮತ್ತು ನಿಮ್ಮ ಬಳಿ 1 ರೂಪಾಯಿ ಹಳೆಯ ನಾಣ್ಯ ಇದ್ದರೆ ರಾತ್ರೋ ರಾತ್ರಿ ನೀವಾಗಬಹುದು ಲಕ್ಷಾಂತರ ರೂಪಾಯಿ ಒಡೆಯ/ ಒಡತಿ.

ಇದನ್ನು ಓದಿ : Belagavi : ಘಟಪ್ರಭಾ ನದಿ ಹಿನ್ನಿರಲ್ಲಿ ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲು.!

ಈ ಮೇಲೆ ಪೋಟೋದಲ್ಲಿರುವ 1 ರೂಪಾಯಿ ಹಳೆಯ ನಾಣ್ಯ (old coin) ಸಂಗ್ರಹವಿದ್ದರೆ ನೀವು ಲಕ್ಷಾಧೀಶರಾಗಬಹುದು. ಇದಕ್ಕೊಸ್ಕರ ನೀವೆನು ಕಷ್ಟ ಪಡಬೇಕಾಗಿಲ್ಲ.

ನೀವು ನಿಮ್ಮ ಮನೆಯಲ್ಲಿ ಕುಳಿತು ನಿಮ್ಮಲ್ಲಿರುವ ಹಳೆಯ ನಾಣ್ಯದ photo ತೆಗೆದು ಅಪ್‌ಲೋಡ್ (upload) ಮಾಡಬೇಕು. ಅದು ಹಳೆಯ 1 ರೂಪಾಯಿ ನಾಣ್ಯವಾಗಿದ್ದರೂ, ಅದರಿಂದ ನೀವು ಹತ್ತು ಕೋಟಿ ರೂಪಾಯಿಗಳನ್ನು ಗಳಿಸಬಹುದು.

ಇಂಡಿಯಾ ಮಾರ್ಟ್ ವೆಬ್‌ಸೈಟ್ (India mart website) ಅನ್ನು (www.indiamart.com) ಭೇಟಿ ನೀಡಿ. ಅದರಲ್ಲಿ ನಿಮ್ಮ ಬಳಿ ಇರುವ ಹಳೆಯ ನಾಣ್ಯದ ಫೋಟೋ ತೆಗೆದು ಪೋಸ್ಟ್ ಮಾಡಬಹುದು. ನಿಮ್ಮ ಜಾಹೀರಾತನ್ನು (advertise) ನೋಡುವ ಆಸಕ್ತರು ನಿಮ್ಮನ್ನು ಸಂಪರ್ಕ ಮಾಡುತ್ತಾರೆ.

ಹಳೆಯ ಮತ್ತು ಅಪರೂಪದ ನಾಣ್ಯಗಳನ್ನು ಕಾಯಿನ್‌ಬಜಾರ್‌ನಂತಹ (Coinbazaar) ವೆಬ್‌ಸೈಟ್‌ಗಳು ಮಾರಾಟ ಮಾಡುತ್ತವೆ. ಹಳೆಯ ರೂಪಾಯಿ ನೋಟುಗಳು, ನಾಣ್ಯಗಳಂತಹ ಅಪರೂಪದ ವಸ್ತುಗಳನ್ನು ಮಾರಾಟ ಮಾಡಿ ಲಕ್ಷ, ಕೋಟಿಗಳಲ್ಲಿ ಹಣ ಗಳಿಸಬಹುದು.

ಇದನ್ನು ಓದಿ : NIA : ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಆದರೆ ಭಾರತೀಯ ರಿಸರ್ವ್ ಬ್ಯಾಂಕ್, ಹಳೆಯ ನೋಟುಗಳು ಅಥವಾ ನಾಣ್ಯಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುವುದರ ಕುರಿತು ಎಚ್ಚರಿಕೆ (warning) ನೀಡಿದೆ. ರಿಸರ್ವ್ ಬ್ಯಾಂಕಿನ ಹೆಸರು ಮತ್ತು ಚಿಹ್ನೆಯನ್ನು ಬಳಸಿಕೊಂಡು ಕೆಲವರು ಕಮಿಷನ್, ಶುಲ್ಕಗಳು ಮತ್ತು ತೆರಿಗೆಗಳನ್ನು (Fees and Taxes) ವಸೂಲಿ ಮಾಡಿ ವಂಚಿಸುತ್ತಿರುವುದು ಕಂಡು ಬಂದಿದೆ. ರಿಸರ್ವ್ ಬ್ಯಾಂಕ್ ಅಂತಹ ವ್ಯವಹಾರಗಳಿಗೆ ಎಂದಿಗೂ ಕಮಿಷನ್ ಅಥವಾ ತೆರಿಗೆ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ (clarified).

 

ಹಿಂದಿನ ಸುದ್ದಿ ಓದಿ : ನಗ್ನ ಪೋಟೋ ಕಳುಹಿಸುವಂತೆ ವೈದ್ಯೆಗೆ ಕಿರುಕುಳ ನೀಡಿದ PSI.!

ಜನಸ್ಪಂದನ ನ್ಯೂಸ್, ಬೆಂಗಳೂರು : ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್ ವಿರುದ್ಧ ಖಾಸಗಿ ಆಸ್ಪತ್ರೆ ವೈದ್ಯೆಯೊಬ್ಬರು (private hospital doctor) ದೂರು ನೀಡಿದ ಘಟನೆ ಬೆಂಗಳೂರು ನಗರದ ಬಸವನಗುಡಿ ಠಾಣೆಯಲ್ಲಿ ನಡೆದಿದೆ.

ಇದನ್ನು ಓದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ. ಪಂ. ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!

ವೈದ್ಯೆಗೆ ನಗ್ನ ಫೋಟೋ ಕಳಿಸುವಂತೆ ಪಿಎಸ್‌ಐ ಕಿರುಕುಳ (harassment) ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್​ ಬಿ. ದಯಾನಂದ್​​ ಅವರಿಗೆ ವೈದ್ಯೆ ದೂರು ನೀಡಿದ್ದಾರೆ.

ಬಸವನಗುಡಿ ಠಾಣೆಯ ಪೊಲೀಸ್​​ PSI ರಾಜಕುಮಾರ್​ ಜೋಡಟ್ಟಿ​​ ವಿರುದ್ಧ ಇಂತದ್ದೊಂದು ಆರೋಪ ಕೇಳಿಬಂದಿದೆ.

ಫೇಸ್​ಬುಕ್​​ ಮೂಲಕ 2020ರಲ್ಲಿ ಪಿಎಸ್​​ಐಗೆ ವೈದ್ಯೆಯ ಪರಿಚಯವಾಗಿದೆ. ಈ ವೇಳೆ ಪೊಲೀಸ್​​ ಅಕಾಡೆಮಿಯಲ್ಲಿ PSI ಟ್ರೈನಿಂಗ್​ನಲ್ಲಿದ್ದರು. ಯುವತಿ ಸಹ MBBS ವ್ಯಾಸಂಗ ಮಾಡುತ್ತಿದ್ದಳು. ಅದೇ ವರ್ಷ ಇಬ್ಬರಿಗೂ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿದೆ ಎನ್ನಲಾಗಿದೆ.

ಇದನ್ನು ಓದಿ : Health : ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿದೆಯೇ? ಈ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ.!

ಪಿಎಸ್‌ಐ ಯುವತಿಗೆ ನಗ್ನ ಫೋಟೋ ಕಳಿಸುವಂತೆ ಕಿರುಕುಳ ನೀಡಿದ್ದು, ಇದಕ್ಕೆ ಒಪ್ಪದಿದ್ದಕ್ಕೆ ವೈದ್ಯೆಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ವೈದ್ಯೆಯ call record ತೆಗೆದು ಕಿರುಕುಳ ನೀಡುತ್ತಿರುವ ಆರೋಪಿಸಲಾಗಿದೆ. ಇದರಿಂದ ನೊಂದ ವೈದ್ಯೆ ಬೆಂಗಳೂರು ಪೊಲೀಸ್ commissioner ಅವರಿಗೆ ದೂರು ನೀಡಿದ್ದಾರೆ.

ಅಲ್ಲದೇ ಸಬ್​ ಇನ್ಸ್​​ಪೆಕ್ಟರ್ ರಾಜಕುಮಾರ್ ವೈದ್ಯೆಯಿಂದ​ ಹಂತ ಹಂತವಾಗಿ 1.71 ಲಕ್ಷ ರೂ. ಹಣ ಪಡೆದಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ಹಣ ಬೇಕಾದರೆ ಠಾಣೆಗೆ ಬಂದು ತೊಗೊಂಡು ಹೋಗು ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ತೀವ್ರ ಮನನೊಂದ ವೈದ್ಯೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಈ ಕೇಸಿನಲ್ಲಿ ವೈದ್ಯೆಯ ಹೆಸರಿನಲ್ಲಿ ಫೇಸ್‌ಬುಕ್‌ fake account ಕ್ರಿಯೇಟ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಸಲಿಗೆ ಸ್ವಾತಿ ದ್ಯಾಮಕ್ಕನವರ್ ಅನ್ನುವ doctor account fake ಆಗಿದೆ. ಈ ಫೇಕ್ ಅಕೌಂಟ್ ನ್ನು ಸ್ವಾತಿಯ ಸಹೋದರ ಎಂದು ಹೇಳಿಕೊಂಡು ಬಂದಿರುವ ಇದೇ ಸಿದ್ದಪ್ಪ ದ್ಯಾಮಕ್ಕನವರ್ ಕ್ರಿಯೆಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಆಫೀಸರ್ ಹೆಸರಿನಲ್ಲಿ ರಿಯಲ್ ಪೊಲೀಸ್ ಅಧಿಕಾರಿಗೆ ವಂಚಿಸಲು ಯತ್ನಿಸಿದ ಫೇಕ್ ಪೊಲೀಸ್; ವಿಡಿಯೋ ಸಖತ್ Viral.!

ಈ ಆಸಾಮಿ ವೈದ್ಯೆ ಸ್ವಾತಿ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಹಣ ಹೊಡೆಯಲು ಉಪಾಯ ಮಾಡಿದ್ದ. ಫೇಸ್‌ಬುಕ್‌ ಮೂಲಕ PSI ಪರಿಚಯ ಮಾಡಿಕೊಂಡು ಹಂತ ಹಂತವಾಗಿ ಹಣ ವಸೂಲಿ ಮಾಡಿದ್ದನು. ಸ್ವಾತಿ ಹೆಸರಿನಲ್ಲಿ ಇಲ್ಲಿಯವರೆಗೆ ಪಿಎಸ್‌ಐ 50 ಸಾವಿರ ರೂ. ಹಣ ಪಡೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಹಣವನ್ನು ಮರಳಿ ಕೊಡದಿದ್ದಾಗ ಸಬ್ ಇನ್ಸಪೆಕ್ಟರ್ ಕೋಪಗೊಂಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು ಫೇಕ್ ಫೇಸ್‌ಬುಕ್‌ ಅಕೌಂಟ್ ಎಂಬುದು ಪತ್ತೆಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತ ನಗರ ಠಾಣೆ ಇನ್ಸಪೆಕ್ಟರ್ ತನಿಖೆ ಮಾಡುತ್ತಿದ್ದಾರೆ. ಈವರೆಗೂ ಆ ಯುವತಿ (ವೈದ್ಯೆ) ವಿಚಾರಣೆಗೆ ಹಾಜರಾಗಿಲ್ಲ. ಹುಡುಗಿ ರೀತಿ ಚಾಟ್ ಮಾಡಿ ಹುಡುಗಿ ಧ್ವನಿಯಲ್ಲಿ ಮಾತನಾಡಿ ಟ್ರ್ಯಾಪ್‌ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಸಬ್ ಇನ್ಸ್‌ಪೆಕ್ಟರ್ ಮತ್ತು ಯುವತಿ ನಡುವೆ ಹಣದ ವ್ಯವಹಾರ ನಡೆದಿದೆ. ಸಹೋದರ ಅಂತ ಬಂದಿರುವ ವ್ಯಕ್ತಿಯ ಬಗ್ಗೆ ಅನುಮಾನವಿದೆ. ಅಧಿಕಾರಿಯನ್ನೇ trap ಮಾಡಲು ಯತ್ನಿಸಿದಂತಿದೆ. ತನಿಖೆ ನಂತರ ಅಸಲಿ ಕಹಾನಿ ಗೊತ್ತಾಗಲಿದೆ ಎಂದು ಬೆರಳು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments