ಜನಸ್ಪಂದನ ನ್ಯೂಸ್, ಡೆಸ್ಕ್ : ಕೈಯಲ್ಲಿರುವ ಸ್ಮಾರ್ಟ್ ಫೋನಿನಲ್ಲಿ ನೆಟ್ ವರ್ಕ್ ಸ್ಲೋ ಆಗಿದ್ದರೆ, ಅಥವಾ ಏನಾದರೂ ಪ್ರಾಬ್ಲಂಆದರೆ ಆ ಫೋನ್ ಬಿಟ್ಟು ಹೊಸ ಸ್ಮಾರ್ಟ್ ಫೋನ್ (new smartphone) ಖರೀದಿಗೆ ಮುಂದಾಗುತ್ತೇವೆ.
ಹಬ್ಬಗಳಲ್ಲಿಯೂ ಸಹ ಕೆಲ ಶೋರೂಮ್‌ಗಳು ಹಳೆ ಫೋನ್ ಸ್ವೀಕರಿಸುವ ಆಫರ್ ನೀಡುತ್ತಿರುತ್ತವೆ.
ಆದರೆ ನೀವು ಯಾವ ಶೋರೂಮ್‌ಗಳಲ್ಲಿ ಈ ಆಫರ್ ಇದೆ ಎಂದು ಹುಡುಕುವ ಅಗತ್ಯವಿಲ್ಲ. ಆನ್ಲೈನ್ ಮೂಲಕ ಮನೆಯಲ್ಲಿಯೇ ಕುಳಿತು ಸ್ಮಾರ್ಟ್ ಫೋನ್ ಮಾರಿ 80 ಸಾವಿರ ರೂಪಾಯಿವರೆಗೂ ಹಣ ಪಡೆಯಬಹುದು.
ದಿನದಿಂದ ದಿನಕ್ಕೆ ಹಳೆಯ ಸ್ಮಾರ್ಟ್‌ಫೋನ್ ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಬಹಳಷ್ಟು ಜನರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಹಳೆಯ (old) ಫೋನ್ ಮಾರಾಟ ಮಾಡಬಹುದು ಎಂಬ ವಿಷಯ ಗೊತ್ತಿಲ್ಲ.
ನೀವು ಮೊದಲು ಆನ್‌ಲೈನ್‌ನಲ್ಲಿ request ಮಾಡಿ, ನಿಮ್ಮ ಹಳೆಯ ಫೋನ್ ವಿವರಗಳನ್ನು entry ಮಾಡಿ. ಫ್ಲಿಪ್‌ಕಾರ್ಟ್ ಎಲ್ಲಾ ಮಾಹಿತಿಯನ್ನು ಪರಿಗಣಿಸಲಾಗುತ್ತದೆ. ಬಳಿಕ ಒಂದು ಬೆಲೆ ನಿಗದಿ ಮಾಡಿ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಖರೀದಿಸುತ್ತದೆ. ಫೋನ್ ಸ್ಥಿತಿಗೆ ಅನುಗುಣವಾಗಿ ಬೆಲೆ ಫಿಕ್ಸ್ ಮಾಡಲಾಗುತ್ತದೆ.
ಈ ರೀತಿ ಮಾರಾಟ ಮಾಡಬಹುದು :
Flipkart reset for instant cash service ಎಂಬ ಹೆಸರಿನಲ್ಲಿ ಡೆಡಿಕೇಟೆರಡ್ ಎಂಬ ಪೇಜ್ ಇದೆ. Flipkart Reset ಪೇಜ್‌ಗೆ (https://www.flipkart.com/reset-sell-store) ಭೇಟಿ ಕೊಡಿ. ಬಳಿಕ ಇಲ್ಲಿಯ ಕೆಲವು ಸ್ಟೆಪ್ಸ್ ಗಳನ್ನು ನೀವು follow ಮಾಡಿ.
ಮೊದಲು ನಿಮ್ಮ ಹಳೆಯ ಫೋನ್ details ಎಂಟ್ರಿ ಮಾಡಬೇಕು. ಫೋನ್ ಹೆಸರು, model ಸೇರಿದಂತೆ ಅಲ್ಲಿ ಇರುವ ಎಲ್ಲಾ ಮಾಹಿತಿಯನ್ನು ನಮೂದಿಸಿ. ಬಳಿಕ ಫೋನ್ ಮಾರಾಟ ಮಾಡುವ request ನೀಡಬೇಕು. ಆಬಳಿಕ ಫ್ಲಿಪ್‌ಕಾರ್ಟ್ ಸಿಬ್ಬಂದಿ ನೀವು ನಮೂದಿಸಿರುವ ಸ್ಥಳಕ್ಕೆ ಬರುತ್ತಾರೆ.
ನಂತರ ನಿಮ್ಮ ಸ್ಮಾರ್ಟ್‌ಫೋನ್ ನ್ನು ಅವರು ಪರಿಶೀಲನೆ ಮಾಡಿ, ಅಸೆಸ್ಮೆಂಟ್ ಮಾಡಿ ಅದರ ಗುಣಮಟ್ಟ (quality) ಆಧಾರಿಸಿ ಬೆಲೆ ನಿಗದಿ ಮಾಡುತ್ತಾರೆ. ನಂತರ ಫೋನ್ ತೆಗೆದುಕೊಂಡು ಹೋಗುವದರ ಬಗ್ಗೆ ನಿರ್ಧರಿಸಲಾಗುತ್ತದೆ.
Mobile pickup ಆದ ಬಳಿಕ ನಿಮಗೆ ಯಾವ ರೂಪದಲ್ಲಿ ಪೇಮೆಂಟ್ ಬೇಕು ಎಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ ಹಣವನ್ನು ವರ್ಗಾಯಿಸಲಾಗುತ್ತದೆ.
ಮನೆ ಬಾಗಿಲಿಗೆ ಬಂದು Mobile pickup ಮಾಡಿ ತೆಗೆದುಕೊಂಡು ಹೋಗಲಾಗುತ್ತದೆ. ಫ್ಲಿಪ್‌ಕಾರ್ಟ್ ಸಹ ಹಳೆಯ ಫೋನ್‌ಗಳನ್ನು ಮಾರಾಟ ಮಾಡುವ ಈ ಸೇವೆ ಸುರಕ್ಷಿತವಾಗಿದೆ ಎಂದು ಹೇಳಿಕೊಂಡಿದೆ. ಫ್ಲಿಪ್‌ಕಾರ್ಟ್ ನಿಮ್ಮ ಹಳೆಯ ಫೋನ್‌ನ್ನು ಗರಿಷ್ಠ 80,000 ರೂಪಾಯಿಗಳ ತನಕ ಖರೀದಿಸುತ್ತದೆಯಂತೆ