ಜನಸ್ಪಂದನ ನ್ಯೂಸ್, ಡೆಸ್ಕ್ : ಸಮುದ್ರಕ್ಕೆ ಹಾರಲು ಯತ್ನಿಸಿದ ಮಹಿಳೆಯನ್ನು ಕ್ಯಾಬ್ ಚಾಲಕ ಮತ್ತು ಸಂಚಾರ ಪೊಲೀಸರು ರಕ್ಷಿಸಿದ್ದು, ಈ ಕುರಿತು ವಿಡಿಯೋವೊಂದು ವೈರಲ್ ಆಗಿದೆ.
ನ್ಹಾವಾ ಶೆವಾ ಅಟಲ್ ಬಿಹಾರಿ ವಾಜಪೇಯಿ ಟ್ರಾನ್ಸ್ ಹಾರ್ಬರ್ ಲಿಂಕ್ ಸೇತುವೆಯಲ್ಲಿ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಇದನ್ನು ಓದಿ : ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ನಡು ರಸ್ತೆಯಲ್ಲಿ ಹೊಡೆದ ವಿದ್ಯಾರ್ಥಿನಿ; Video viral.!
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಮಹಿಳೆ ಸೇತುವೆಯಿಂದ ಜಿಗಿಯಲು ಪ್ರಯತ್ನಿಸುತ್ತಿದ್ದಂತೆ ಕ್ಯಾಬ್ ಚಾಲಕ ತಕ್ಷಣ ಆಕೆಯ ಕೂದಲು ಹಿಡಿದುಕೊಳ್ಳುವುದನ್ನು ಕಾಣಬಹುದು.
ಕಾರು ನಿಲ್ಲಿಸಿ ಮಹಿಳೆ ರಸ್ತೆ ದಾಟುತ್ತಿರುವ ಬಗ್ಗೆ ಕರೆ ಬಂದಿತ್ತು ಕೂಡಲೇ ಗಸ್ತು ವಾಹನವು ಸ್ಥಳಕ್ಕೆ ಧಾವಿಸಿತು. ಪೊಲೀಸರು ಆಕೆಯನ್ನು ಮಾತನಾಡಿಸಲೂ ನೋಡಿದರೂ ಆದರೆ ಸಮುದ್ರಕ್ಕೆ ಹಾರುವ ಯತ್ನದಲ್ಲಿದ್ದ ಮಹಿಳೆ, ಯಾರ ಮಾತನ್ನು ಕೇಳಿಸಿಕೊಳ್ಳದೇ ಸೇತುವೆ ಮೇಲಿಂದ ಜಿಗಿದಳು.
ಆದರೆ, ಕ್ಯಾಬ್ ಚಾಲಕ ಮತ್ತು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಕೆಯನ್ನು ಹಿಡಿದು ರಕ್ಷಿಸುವಲ್ಲಿ ಯಶಸ್ವಿಯಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಇದನ್ನು ಓದಿ : Video : ಹೋಟೆಲ್‌ನಲ್ಲಿ ಇಬ್ಬರು ಯುವತಿಯರ ಜೊತೆ ಪತಿಯ ಸರಸ; ರೆಡ್ ಹ್ಯಾಂಡ್ಆಗಿ ಹಿಡಿದ ಪತ್ನಿ.!
ವರದಿಯ ಪ್ರಕಾರ ಮುಲುಂಡ್ ಮೂಲದ ಮಹಿಳೆ, 31 ವರ್ಷದ ಸಂಜಯ್ ಯಾದವ್ ಅವರನ್ನು ಸೇತುವೆಯ ಮೇಲೆ ಕ್ಯಾಬ್ ನಿಲ್ಲಿಸುವಂತೆ ಕೇಳಿಕೊಂಡಿದ್ದರು. ದೃಶ್ಯಗಳ ಪ್ರಕಾರ, ಮಹಿಳೆ ಅಟಲ್ ಸೇತುವಿನ ಸುರಕ್ಷತಾ ತಡೆಗೋಡೆಯ ಮೇಲೆ ಕುಳಿತಿದ್ದಳು. ಸಮುದ್ರಕ್ಕೆ ಏನನ್ನೋ ಎಸೆದ ಮಹಿಳೆ ತಾನೂ ಕೂಡ ಜಿಗಿಯಲು ಪ್ರಯತ್ನಿಸಿದಳು.
ಪೊಲೀಸರನ್ನು ನೋಡಿದ ಮಹಿಳೆ ಸಮುದ್ರಕ್ಕೆ ಹಾರಲು ಪ್ರಯತ್ನಿಸಿದಳು ಎಂದು ಹೇಳಲಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಆಕೆಯ ಕೂದಲನ್ನು ಹಿಡಿದುಕೊಂಡ ಚಾಲಕನು ಮಹಿಳೆಯನ್ನು ರಕ್ಷಿಸಿದನು.
ಪೊಲೀಸ್ ಸಿಬ್ಬಂದಿ ಲಲಿತ್ ಅಮರಶೆಟ್, ಕಿರಣ್ ಮ್ಹಾತ್ರೆ, ಯಶ್ ಸೋನಾವಾನೆ ಅವರನ್ನೊಳಗೊಂಡ ತಂಡವು ಆರಂಭದಲ್ಲಿ ರೈಲಿಂಗ್ ಮೇಲೆ ಹತ್ತಿ ಕ್ಯಾಬ್ ಡ್ರೈವರ್ ಹಿಡಿದಿದ್ದ ಮಹಿಳೆಯರನ್ನು ಹಿಡಿದುಕೊಂಡರು. ಮಹಿಳೆಯನ್ನು ನವಿ ಮುಂಬೈನ ಪೊಲೀಸ್ ಠಾಣೆಗೆ ಕರೆದೊಯ್ದು ಆಕೆಯ ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಲಾಯಿತು.
ಇದನ್ನು ಓದಿ : ಶಾಲೆಯಲ್ಲಿ ವಿಡಿಯೋ ಮಾಡುತ್ತಿದ್ದ ಶಿಕ್ಷಕಿ ; ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ, ಹೊಡೆದಾಟದ ವಿಡಿಯೋ Viral.!
ಅಟಲ್ ಸೇತು ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಇದು 21.8 ಕಿಲೋಮೀಟರ್ ಉದ್ದವನ್ನು ಹೊಂದಿದೆ. 16.5 ಕಿಲೋಮೀಟರ್ ಸಮುದ್ರದ ಮೇಲೆ ಮತ್ತು ಉಳಿದ 5.5 ಕಿಲೋಮೀಟರ್ ಭೂಭಾಗದಲ್ಲಿ ಹಾದು ಹೋಗಲಿದೆ.
ಈ ಸೇತುವೆ ಮೇಲೆ ದ್ವಿಚಕ್ರ ವಾಹನಗಳು, ಮೊಪೆಡ್‌ಗಳು, ರಿಕ್ಷಾ ಮತ್ತಿತರ ಮೂರು ಚಕ್ರದ ವಾಹನಗಳು, ಟ್ರ್ಯಾಕ್ಟರ್‌ಗಳು ಸೇರಿದಂತೆ ನಿಧಾನಗತಿಯ ವಾಹನಗಳಿಗೆ ನಿಷೇಧ ಹೇರಲಾಗಿದೆ.
ಈ ಸೇತುವೆ ಮುಂಬಯಿಯಿಂದ ನವಿ ಮುಂಬಯಿಗೆ 2 ಗಂಟೆಗೆ ಬದಲಾಗಿ ಕೇವಲ 20 ನಿಮಿಷಗಳಲ್ಲಿ ಪ್ರಯಾಣಿಸಲು ಜನರಿಗೆ ಅನುವು ಮಾಡಿಕೊಡುತ್ತಿದೆ.
Viewers Discretion Advised
Responding promptly to an attempt to die by suicide at MTHL Atal Setu, the on-duty officials, PN Lalit Shirsat, PN Kiran Mahtre, PC Yash Sonawane & PC Mayur Patil of @Navimumpolice jumped over the railing & rescued the individual saving her life.
— पोलीस आयुक्त, बृहन्मुंबई – CP Mumbai Police (@CPMumbaiPolice) August 16, 2024