Thursday, March 27, 2025
HomeInternationalವಿಕ್ಕಿಪೀಡಿಯಾ ವಿಕಾಸ್ ಹೊಸ ಸಾಂಗ್ : ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ Singles Girl's.!
spot_img
spot_img
spot_img
spot_img
spot_img

ವಿಕ್ಕಿಪೀಡಿಯಾ ವಿಕಾಸ್ ಹೊಸ ಸಾಂಗ್ : ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ Singles Girl\’s.!

- Advertisement -
WhatsApp Channel Join Now
Telegram Group Join Now
Instagram Account Follow Now

ಜನಸ್ಪಂದ, ನ್ಯೂಸ್, ಬೆಂಗಳೂರು : ವಿಕ್ಕಿಪಿಡಿಯಾ ವಿಕಾಸ್ ಯಾರಿಗೆ ಗೊತ್ತಿಲ್ಲ ಹೇಳಿ. ನಾನು ನಂದಿನಿ ಬೆಂಗಳೂರಿಗೆ ಬಂದಿನಿ ಹಾಡಿನ ಮೂಲಕ ಸಿಕ್ಕಾಪಟ್ಟೆ ಫೇಮಸ್ (Famous) ಆದವರು ಈ ವಿಕಾಸ್.

ಇನ್ನೂ ವಿಕಾಸ್ ಹುಡುಗಿಯರ ಡ್ರೆಸ್ ನಲ್ಲಿ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾಗಿ ಯುವ ಜನತೆಯ (young people) ಗಮನ ಸೆಳೆಯುತ್ತವೆ. ವಿಕಾಸ್ ಕ್ರಿಯೇಟ್ ಮಾಡಿದ ವಿಡಿಯೋಗಳು ಸಾಕಷ್ಟು ಮೆಚ್ಚುಗೆ ಪಡೆದಿವೆ ಎನ್ನಬಹುದು.

ಇತ್ತೀಚೆಗೆ ಅವರ single girls ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ಬಹಳಷ್ಟು ಜನರ ಗಮನ ಸೆಳೆದಿದೆ. ಪುಟ್ಟ ಮಕ್ಕಳ ಜಿಂಗಲ್ ಬೆಲ್ಸ್, ಜಿಂಗಲ್ ಬೆಲ್ಸ್, ಜಿಂಗಲ್ ಆಲ್ ದ್ ವೇ (jingle bells, jingle bells, jingle all the way) ರೈಮ್ಸ್‌ನ ರಿಲೀಕ್ಸ್‌ಗೆ ವಿಕ್ಕಿಪೀಡಿಯ ವಿಕಾಸ್, ಸಿಂಗಲ್ ಗರ್ಲ್ಸ್, ಸಿಂಗಲ್ ಗರ್ಲ್ಸ್, ಸಿಂಗಲ್ ಆಲ್ ದ್ ವೇ (single girls, single girls, single all the way) ಎಂಬ ಹಾಡನ್ನು create ಮಾಡಿದ್ದಾರೆ.

ಈ ಹಾಡಿನಲ್ಲಿ ವಿಕಾಸ್ ಯುವತಿಯರು ಮದುವೆಯಾಗದೇ (not married) ಇರಲು ಕಾರಣವನ್ನು ತಿಳಿಸಿದ್ದಾರೆ. ಮದುವೆಯಾಗದೇ ಇರುವ ಯುವತಿಯ ಆಸೆ ಏನು? ಮದುವೆ ಯಾಕೆ ಆಗಲ್ಲ? ಅವಳ ಗುರಿ ಏನು ಎನ್ನುವ ಬಗ್ಗೆ ವಿಕ್ಕಿಪೀಡಿಯಾ ವಿಕ್ಕಿ ಈ ಹಾಡಿನ ಮೂಲಕ ತಿಳಿಸಿದ್ದಾರೆ.

ಹುಡುಗಿಯ ಆಸೆಗಳು ಹಾಗೂ ಹುಡುಗನ ಆಸೆಗಳು ಬೇರೆ ಬೇರೆ ಇರುವುದರಿಂದ ಮದುವೆ ಆಗದೆ ಹುಡುಗಿಯರು ಒಂಟಿಯಾಗಿ (alone) ಇರುತ್ತಾರೆ ಎನ್ನುವುದು ಈ ಹಾಡಿನ ಅರ್ಥವಾಗಿದೆ. ಈ ಹಾಡಿಗೆ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿವೆ.

WhatsApp Channel Join Now
Telegram Group Join Now
Instagram Account Follow Now
- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!