ಜನಸ್ಪಂದನ ನ್ಯೂಸ್, ಡೆಸ್ಕ್ : ಪತ್ನಿ ಹಬ್ಬ ಆಚರಿಸಲು ತವರು ಮನೆಗೆ ಹೋದ ವೇಳೆ ಶಿಕ್ಷಕನೊರ್ವ ಬೇರೊಬ್ಬಳು ಯುವತಿಯನ್ನು ಮನೆಗೆ ಕರೆಸಿ ಚಕ್ಕಂದವಾಡುತ್ತಿದ್ದ ವೇಳೆ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಬಿಹಾರದ ಪುರ್ನಿಯಾದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಝುನ್ನಿ ಈಸ್ತಂಬರ್ ಪಂಚಾಯತ್‌ನ ಬೇಗಂಪುರ ಮಾಧ್ಯಮಿಕ ಶಾಲೆಯ ಶಿಕ್ಷಕ ಶೇಖರ್ ಪಾಸ್ವಾನ್ ಅಲಿಯಾಸ್ ರಾಜೇಶ್ ಕುಮಾರ್ ಎಂಬಾತ ಸಿಕ್ಕಿಬಿದ್ದಿದ್ದಾನೆ ಎಂದು ವರದಿ ತಿಳಿಸಿದೆ.
ಇದನ್ನು ಓದಿ : Onlineನಲ್ಲಿ ಖರೀದಿಸಿದ ಅಂಡರ್ವೇರ್ ಧರಿಸಿದ್ಮೇಲೆ ನನ್ನ ಮಗಳು ಪ್ರೆಗ್ನೆಂಟ್ ಆಗಿದ್ದಾಳೆ ಎಂದು ಕೋರ್ಟ್ ಮೆಟ್ಟಿಲೇರಿದ ತಾಯಿ.!
ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಶಿಕ್ಷಕನನ್ನು ಮನೆಯಿಂದ ಎಳೆದು ಕರೆ ತಂದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಬಳಿಕ ಆ ಯುವತಿಯೊಂದಿಗೆ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ.
ಎರಡು ದಿನಗಳ ಹಿಂದೆ ಶಿಕ್ಷಕನ ರಾಜೇಶ್ ಕುಮಾರ್ ಹೆಂಡತಿ ಹಬ್ಬಕ್ಕೆಂದು ತವರು ಮನೆಗೆ ಹೋಗಿದ್ದಾಳೆ. ಶಿಕ್ಷಕ ಗ್ರಾಮದ ಬುಡಕಟ್ಟು ಹುಡುಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಅಲ್ಲದೇ ಕುಡಿತದ ಚಟ ಹೊಂದಿದ್ದ ಶಿಕ್ಷಕ ರಾಜೇಶ್ ಹೆಂಡತಿ ತವರು ಮನೆಗೆ ಹೋದ ಬೆನ್ನಲ್ಲೇ ಯುವತಿಯನ್ನು ಮನೆಗೆ ಕರೆಸಿಕೊಂಡಿದ್ದ.
ಇದನ್ನು ಓದಿ : ವಿದ್ಯುತ್ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಆತ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಸಿಕ್ಕಿ ಬಿದ್ದ ಬೆನ್ನಲ್ಲೇ ಗ್ರಾಮಸ್ಥರು ಶಿಕ್ಷಕನಿಗೆ ಈ ಯುವತಿಯೊಂದಿಗೆ ಮದುವೆ ಮಾಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮೊದಲ ಹೆಂಡತಿ ಗಂಡನ ಮನೆಗೆ ಬಂದಿದ್ದು, ಆತನ ನೀಚ ಕೃತ್ಯಕ್ಕೆ ಆಘಾತಕೊಳಗಾಗಿದ್ದಾಳೆ. ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸದ್ಯ ಪತ್ನಿ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾಳೆ.