ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಗಂಡ ಕುಡಿದುಕೊಂಡು ಬಂದು ಹೆಂಡತಿಯನ್ನು ಹೊಡೆಯುವುದು, ಬಡಿಯುವುದು, ಪತ್ನಿಗೆ ಹಿಂಸೆ ನೀಡುವುದನ್ನು ನಾವು ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಉಲ್ಟಾ ಘಟನೆ ನಡೆದಿದೆ.
ಇದನ್ನು ಓದಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪತ್ನಿಯೇ ಮದ್ಯ ಸೇವಿಸಿ ಪತಿಗೂ ಕುಡಿಯುವಂತೆ ಒತ್ತಾಯ ಮಾಡಿ ಹಿಂಸಿಸಿದ ಘಟನೆ ನಡೆದಿದೆ. ಮಹಿಳಾ ಪೊಲೀಸ್ ಠಾಣೆಯ ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ನಲ್ಲಿ ಈ ಪ್ರಕರಣ ವರದಿಯಾಗಿದೆ.
ಪತ್ನಿಯೂ ಕುಡಿಯುತ್ತಾಳೆ. ಅಲ್ಲದೇ ನನಗೂ ಕುಡಿಯಲು ಮದ್ಯಪಾನ ಮಾಡಲು ಒತ್ತಾಯಿಸುತ್ತಾಳೆ ಎಂದು ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾನೆ. ಪತ್ನಿಯ ಕಿರುಕುಳದಿಂದ ಬೇಸತ್ತ ಆತ ಆಕೆಯನ್ನು ತವರು ಮನೆಗೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾನೆ. ಆದರೆ ಪತಿಯ ವಿರುದ್ಧ ಪತ್ನಿ ಕೂಡ ದೂರು ನೀಡಿದ್ದರಿಂದ ಪೊಲೀಸರು ದಂಪತಿಯನ್ನು ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ಗೆ ಕಳುಹಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : SSLC, PUC ಪಾಸಾದವರಿಗೆ ಗುಡ್ ನ್ಯೂಸ್: KPTCLನಲ್ಲಿ 2975 ಹುದ್ದೆಗಳಿಗೆ ನೇಮಕಾತಿ; ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ.!
ದಂಪತಿಗೆ ಕೌನ್ಸೆಲಿಂಗ್ ಶುರು ಮಾಡಿದಾಗ, ಸ್ಥಳದಲ್ಲೇ ಅವರ ನಡುವೆ ಜಗಳ ಶುರುವಾಗಿದೆ. ಪತ್ನಿ ಪ್ರತಿದಿನ ಮದ್ಯಪಾನ ಮಾಡುತ್ತಾಳೆ. ಅದೇ ರೀತಿ ತನಗೂ ಮಾಡಲು ಒತ್ತಡ ಹೇರುತ್ತಾಳೆ ಎಂದು ಪತಿ ಆರೋಪಿಸಿದ್ದಾನೆ.
ತನ್ನ ಪತ್ನಿ ಒಮ್ಮೆಗೆ ಮೂರರಿಂದ ನಾಲ್ಕು ಪೆಗ್‍ಗಳನ್ನು ಕುಡಿಯುತ್ತಾಳೆ ಎಂದು ಪತಿ ತಿಳಿಸಿದ್ದಾನೆ. ಮತ್ತೊಂದೆಡೆ, ಪತಿ ಮದ್ಯಪಾನವನ್ನು ಇಷ್ಟಪಡುವುದಿಲ್ಲ. ಆತ ತನ್ನ ವಿರುದ್ಧ ಮಾಡಿದ ಎಲ್ಲಾ ಆರೋಪಗಳು ಸತ್ಯ ಎಂಬುದನ್ನು ಪತ್ನಿ ಕೂಡ ಒಪ್ಪಿಕೊಂಡಿದ್ದಾಳೆ ಎಂದು ಕೌನ್ಸಿಲರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ : ಅಂತ್ಯೋದಯ & ಬಿಪಿಎಲ್ ಪಡಿತರ ಚೀಟಿ ಪಡೆದವರಿಗೆ ರಾಜ್ಯ ಸರ್ಕಾರದಿಂದ ಖಡಕ್ ಸೂಚನೆ.!
ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ನಲ್ಲಿ ಇವರಿಬ್ಬರಿಗೂ ಕೌನ್ಸೆಲಿಂಗ್ ನೀಡಲಾಗಿದ್ದು, ಸಲಹೆಗಾರರ ತಂಡವು ದಂಪತಿಯ ನಡುವಿನ ವಿವಾದವನ್ನು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬಗೆಹರಿಸಿದೆ. ಕೊನೆಗೆ ಪತಿ- ಪತ್ನಿ ಇಬ್ಬರು ಒಟ್ಟಿಗೆ ವಾಸಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.