Wednesday, November 6, 2024
spot_img

Health : ಮಳೆಗಾಲದಲ್ಲಿ ಮೊಸರು ಏಕೆ ತಿನ್ನಬಾರದು.?

ಜನಸ್ಪಂದನ ನ್ಯೂಸ್, ಡೆಸ್ಕ್ : ಹಾಲು ಮತ್ತು ಅದರ ಉತ್ಪನ್ನಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ವಿಶೇಷವಾಗಿ ಮೊಸರು ಸೇವನೆಯು ನಮಗೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.

ಮೊಸರು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಾದ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳನ್ನು ಉತ್ತಮ ಪ್ರಮಾಣದಲ್ಲಿ ಹೊಂದಿರುತ್ತದೆ. ಎಲ್ಲಾ ರೀತಿಯ ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರುವ ಮೊಸರು ನಮ್ಮ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.

ಇದನ್ನು ಓದಿ : 10/12 ನೇ ತರಗತಿ ಪಾಸಾದವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗವಕಾಶ.!

ಆದರೆ ಮಳೆಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು. ಆದರೆ ಈ ಸೀಸನ್​ನಲ್ಲಿ ಮೊಸರು ಯಾಕೆ ತಿನ್ನಬಾರದು ಗೊತ್ತಾ. ಈ ಋತುವಿನಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯದ ಅಪಾಯಗಳೇನು? ಅಂತ ತಿಳಿಯೋಣ ಬನ್ನಿ.

* ಮುಂಗಾರಿನಲ್ಲಿ ದಿನಲೂ ಮೊಸರು ತಿನ್ನುವುದು ಒಳ್ಳೆದಲ್ಲ. ಪ್ರತಿನಿತ್ಯ ಸೇವಿಸುವುದರಿಂದ ಹೊಟ್ಟೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ.

* ಮೊಸರನ್ನು ರಾತ್ರಿ ವೇಳೆ ಸೇವಿಸಬಾರದು. ಕಾರಣ ರಾತ್ರಿಯಲ್ಲಿ ಮೊಸರು ಹುಳಿಯಾಗಿರುತ್ತದೆ. ಹುಳಿ ಮೊಸರು ಸೇವಿಸುವುದರಿಂದ ಕಫ ಕಟ್ಟುವ ಸಾಧ್ಯತೆ ಹೆಚ್ಚು.

ಇದನ್ನು ಓದಿ : ಹಳೆಯ ಹಾಡಿಗೆ 90 ವರ್ಷದ ಅಜ್ಜಿಯ ಮಸ್ತ್‌ ಮಸ್ತ್ ಸ್ಟೆಪ್ಸ್ ; ವಿಡಿಯೋ ನೋಡಿದ್ರೆ ವಾವ್ ಅನ್ನೋದು ಗ್ಯಾರಂಟಿ.!

* ಅಲರ್ಜಿ ಸಮಸ್ಯೆ ಇದ್ದರೆ, ಉರಿಯುತ, ಚರ್ಮದ ಸಮಸ್ಯೆ ಇದ್ದರೇ ಅಂಥವರು ಮೊಸರು ಸೇವನೆಯಿಂದ ದೂರ ಇರಬೇಕು. ಹುಳಿಯಾಗುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ. ಹುಳಿ ಹೊಂದಿರುವ ಮೊಸರು ಸೇವನೆಯಿಂದ ಆ್ಯಸಿಡಿಟಿ ತೊಂದರೆಗೆ ಕಾರಣವಾಗಿದೆ.

* ಮಳೆಗಾಲದಲ್ಲಿ ಮೊಸರು ಸೇವನೆಯಿಂದ ದೂರ ಇರಬೇಕು. ಕಾರಣ ಮಳೆಗಾಲದಲ್ಲಿ ಮೊಸರು ಸೇವಿಸುವುದರಿಂದ ಕಫ ಹೆಚ್ಚಳ, ಗಂಟಲು ಕೆರತ, ಉಬ್ಬಸ, ಶೀತ ಹೆಚ್ಚುವ ಆಗುವ ಸಾಧ್ಯತೆ ಇರುತ್ತದೆ.

* ಅಸ್ತಮಾ ಹೆಚ್ಚಾದರೆ ಹೃದಯದ ಆರೋಗ್ಯವು ಏರುಪೇರಾಗುತ್ತದೆ.

* ರಾತ್ರಿ ವೇಳೆ ಮೊಸರು ತಿಂದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಅಲ್ಲದೇ ಮೊಸರು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಇದನ್ನು ಓದಿ : 3 ಅಡಿ ಕುಳ್ಳನಿಗೆ 7 ಅಡಿ ಎತ್ತರದ ಗರ್ಲ್‌ಫ್ರೆಂಡ್.! ಇವರ ಪ್ರಣಯದ ವಿಡಿಯೋ ಪುಲ್‌ Viral.!

* ಮೊಸರು ತಿನ್ನುವುದರಿಂದ ಗಂಟಲು ನೋಯುತ್ತದೆ. ಹಾಗಾಗಿ ಮಳೆಗಾಲದಲ್ಲಿ ಬಿಸಿ ಬಿಸಿ ಹಾಲು ಕುಡಿಯುವುದು ಬಹಳ ಒಳ್ಳೆಯದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img