Monday, October 7, 2024
spot_img
spot_img
spot_img
spot_img
spot_img
spot_img
spot_img

ರಾತ್ರಿ ಹೊತ್ತು ಪೋಸ್ಟ್‌ಮಾರ್ಟಂ ಮಾಡೋದಿಲ್ಲ ಯಾಕೆ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಸಾವು ಅನ್ನೋದು ಮನುಷ್ಯನ ಉಸಿರು ನಿಲ್ಲುವ ಪ್ರಕ್ರಿಯೆ. ಸಾವು ಎಂಬುದು ಹೇಗೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೋ ಹಾಗೆಯೇ ಸಾವಿನ ನಂತರ ಕೂಡಾ ನಡೆಯುವ ಕ್ರಿಯೆಗಳು ಹಲವು ಸಂಶಯ, ಅನುಮಾನ, ಬೃಹತ್ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ.

ವ್ಯಕ್ತಿಯೊಬ್ಬರು ಅಸಹಜವಾಗಿ ಮರಣ ಹೊಂದಿದಾಗ ಮರಣೋತ್ತರ ಪರೀಕ್ಷೆ (Post-mortem) ಮಾಡುವುದು ಸಾಮಾನ್ಯ. ಸಾವಿಗೆ ಕಾರಣ ಏನೆಂಬುದನ್ನು ತಿಳಿಯಲು ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ.

ಇದನ್ನು ಓದಿ : ವರ ಮಾಡಿದ ಈ ಕೆಲಸಕ್ಕೆ ಮಂಟಪದಲ್ಲೇ ಕಪಾಳಮೋಕ್ಷ ಮಾಡಿದ ವಧು; ವಿಡಿಯೋ Viral.!

ಆದ್ರೆ ರಾತ್ರಿ (Night) ಹೊತ್ತು ಪೋಸ್ಟ್‌ಮಾರ್ಟಂ ಮಾಡೋದಿಲ್ಲ ಯಾಕೆ ?

ಇದು ದೀರ್ಘ ಮತ್ತು ಸಂಕೀರ್ಣ ಕಾರ್ಯ ವಿಧಾನವಾಗಿದೆ. ಈ ಪ್ರಕ್ರಿಯೆಯಲ್ಲಿ ವೈದ್ಯರು ದೇಹದ ವಿವಿಧ ಭಾಗಗಳನ್ನು ಕತ್ತರಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸುತ್ತಾರೆ. ಆದರೆ ಸೂರ್ಯಾಸ್ತದ ಬಳಿಕ ಅಂದರೆ ರಾತ್ರಿಯಲ್ಲಿ ಯಾವುದೇ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ.

ಇದನ್ನು ಓದಿ : ಮೈಕ್ರೋಸ್ಕೋಪ್‌ನಲ್ಲಿ ನವಿಲು ಗರಿ ಹೇಗೆ ಕಾಣಿಸುತ್ತೆ.? Video ನೋಡಿದ್ರೆ wow ಅಂತೀರಾ.!

ಮರಣೋತ್ತರ ಪರೀಕ್ಷೆಗಳನ್ನು ಯಾವಾಗಲೂ ಹಗಲು ನಡೆಸಲಾಗುತ್ತದೆ. ರಾತ್ರಿ ನಡೆಸಲಾಗುವುದಿಲ್ಲ. ವ್ಯಕ್ತಿಯ ಮರಣದ 4- 6 ಗಂಟೆಗಳ ಅನಂತರ ಮರಣ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಅವಧಿಯ ಅನಂತರವೇ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.

ವ್ಯಕ್ತಿಯ ಮರಣದ 4- 6 ಗಂಟೆಗಳ ಅನಂತರ ದೇಹದಲ್ಲಿ ಹಲವಾರು ರಾಸಾಯನಿಕ ಕ್ರಿಯೆಗಳು ಪ್ರಾರಂಭವಾಗುತ್ತವೆ. ಇದರಿಂದ ಸಾಕ್ಷ್ಯಗಳನ್ನು ಪಡೆಯುವುದು ಕಷ್ಟ. ಅಲ್ಲದೇ ದೇಹದ ಸ್ಥಿತಿಯು ಬದಲಾಗುತ್ತದೆ. ಮರಣೋತ್ತರ ಪರೀಕ್ಷೆಯಲ್ಲಿ ಕಡಿಮೆ ನಿಖರವಾದ ಫಲಿತಾಂಶಗಳಿಗೆ ಕಾರಣವಾಗುತ್ತದೆ.

ಇದನ್ನು ಓದಿ : Special news : ಮೊಂಡುತನದಲ್ಲಿ ಈ ರಾಶಿಯವರನ್ನು ಮೀರಿಸುವವರೇ ಇಲ್ಲ.!

ರಾತ್ರಿ ಹೊತ್ತು ಪೋಸ್ಟ್‌ಮಾರ್ಟಂ ಮಾಡದೇ ಇರುವುದರ ಹಿಂದೆ ಇನ್ನೊಂದು ಮುಖ್ಯ ಕಾರಣವಿದೆ. ಇದರ ಹಿಂದಿನ ಕಾರಣವೆಂದರೆ ರಾತ್ರಿಯಲ್ಲಿ ಟ್ಯೂಬ್ ಲೈಟ್‌ಗಳು ಅಥವಾ ಎಲ್‌ಇಡಿಗಳ ಕೃತಕ ಬೆಳಕಿನಲ್ಲಿ ಗಾಯದ ಬಣ್ಣವು ಕೆಂಪು ಬಣ್ಣಕ್ಕಿಂತ ನೇರಳೆ ಬಣ್ಣವನ್ನು ಹೊಂದಿರುತ್ತದೆ ಮತ್ತು ವಿಧಿ ವಿಜ್ಞಾನದಲ್ಲಿ ನೇರಳೆ ಗಾಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಈ ಮರಣೋತ್ತರ ಪರೀಕ್ಷೆಯನ್ನು ಅಸ್ವಾಭಾವಿಕ ಸಾವಿನ ಸಂದರ್ಭದಲ್ಲಿ ಮರಣದ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚಲು ನಡೆಸಲಾಗುತ್ತದೆ. ಈ ಪ್ರಕ್ರಿಯೆಯು ಸಾವಿನ ನಿಜವಾದ ಕಾರಣವನ್ನು ತಿಳಿಸುತ್ತದೆ, ಸಾವಿನ ಸ್ವರೂಪ, ಗುರುತಿಸಲಾಗದ ದೇಹದ ಬಗ್ಗೆ ವಿವರವಾದ ಮಾಹಿತಿ ನೀಡುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img