ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವೊಂದು ದುಃಖ ತರಿಸಿದರೆ, ಕೆಲವೊಂದು ಫನ್ನಿಯಾಗಿರುತ್ತವೆ. ಅದರಲ್ಲಿ ಕೆಲವೊಂದು ಒಳ್ಳೆಯ ಸಂದೇಶ ನೀಡಿದರೆ ಕೆಲವೊಂದು ಕೆಟ್ಟ ಪರಿಣಾಮಗಳನ್ನು ಬೀರುತ್ತವೆ.
ಸದ್ಯ ನಗು ಮೂಡಿಸುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈಗಾಗಲೇ ಈ ವಿಡಿಯೋ 55 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿದೆ.
ಇದನ್ನು ಓದಿ : ಪಾರ್ಕ್‌ನಲ್ಲಿ ಕುಳಿತಿದ್ದ ಯುವಕನ ಮೇಲೆ ಬೆತ್ತಲೆಯಾಗಿ ಬಂದ ಯುವತಿಯಿಂದ ಲೈಂಗಿಕ ದೌರ್ಜನ್ಯ ; ವಿಡಿಯೋ Viral.!
@rohit_hand_writing ಎಂಬ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಅದೊಂದು ಪರೀಕ್ಷೆಯ ಪ್ರಶ್ನೆ ಪತ್ರಿಕೆ. ಅದರಲ್ಲಿ ಗಾಂಧೀಜಿ ಯಾಕೆ ಎಲ್ಲ ನೋಟುಗಳ ಮೇಲೆ ನಗುತ್ತಿದ್ದಾರೆ? ಎಂದು ಪ್ರಶ್ನಿಸಲಾಗಿದೆ.
ಅದಕ್ಕೆ ವಿದ್ಯಾರ್ಥಿಯು ಕೊಟ್ಟ ಉತ್ತರ ತಾನು ಅತ್ತರೆ ಕಣ್ಣೀರಿನಿಂದ ನೋಟು ಒದ್ದೆಯಾಗುತ್ತದೆ ಎಂಬ ಕಾರಣಕ್ಕೆ ಅವರು ಎಲ್ಲ ನೋಟ್‌ಗಳ ಮೇಲೆಯೂ ನಗುತ್ತಿದ್ದಾರೆ ಎಂದು ಉತ್ತರ ಬರೆಯಲಾಗಿದೆ.
ಈ ಉತ್ತರಕ್ಕೆ ಟೀಚರ್ ಪೂರ್ತಿಯಾಗಿ 10 ಮಾರ್ಕ್ಸ್ ನೀಡಿ, ವೆರಿ ಗುಡ್ ಎಂದೂ ಬರೆದು ಸಹಿ ಹಾಕಿದ್ದಾರೆ. ಒಂದು ಫನ್ನಿ ಪ್ರಶ್ನೆಗೆ ಅಷ್ಟೇ ಫನ್ನಿಯಾಗಿ, ಸಖತ್ ಲವ್ಲಿಯಾಗಿ ಕೊಡಲಾದ ಉತ್ತರ ನೆಟ್ಟಿಗರ ಗಮನ ಸೆಳೆದಿದೆ.
ಇದನ್ನು ಓದಿ : ಜಾಹೀರಾತಿನಲ್ಲಿ ಸಮವಸ್ತ್ರ ಧರಿಸಿ ಕಾಣಿಸಿಕೊಂಡ ಮಹಿಳಾ ಕಾನ್ಸ್‌ಟೇಬಲ್ ಸಸ್ಪೆಂಡ್ ; Video ನೋಡಿ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಮೆಂಟ್ಸ್ ಗಳ ಸುರಿಮಳೆಯಾಗಿದೆ. ಇದು ನಿಜವಾದ ಪರೀಕ್ಷೆಯೂ ಅಲ್ಲ, ಉತ್ತರವೂ ಅಲ್ಲ. ಪ್ರಶ್ನೆ ಮತ್ತು ಉತ್ತರದಲ್ಲಿರುವ ಅಕ್ಷರಗಳು ಒಂದೇ ತರ ಇವೆ. ಹೀಗಾಗಿ ಇದು ಸುಮ್ಮನೆ ತಮಾಷೆಗೆ ಮಾಡಿದ್ದು ಎನ್ನಿಸುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೋರ್ವ ಆ ವಿದ್ಯಾರ್ಥಿ ಯಾರೆಂದು ಗೊತ್ತಿಲ್ಲ, ಆದರೆ ಸರಿಯಾದ ಉತ್ತರನ್ನೇ ಕೊಟ್ಟಿದ್ದಾನೆ ಎಂದು ಪ್ರತಿಕ್ರಿಯಿಸಿದ್ದಾರೆ.