Monday, October 7, 2024
spot_img
spot_img
spot_img
spot_img
spot_img
spot_img
spot_img

ರೈಲುಗಳು ಗಂಟೆಗಟ್ಟಲೇ ನಿಂತರೂ ಇಂಜಿನ್ Off ಯಾಕೆ ಮಾಡುವುದಿಲ್ಲ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನ ನಿಲ್ಲಿಸಿದಾಗ ಬಹುತೇಕರ ಇಂಜಿನ್ ಆಫ್ ಮಾಡುತ್ತಾರೆ. ಆದರೆ ರೈಲುಗಳು ಗಂಟೆಗಟ್ಟಲೇ ನಿಂತಿದ್ದರೂ ಸಹ ಇಂಜಿನ್ ಆಫ್ ಮಾಡಿರಲ್ಲ.

ಇಂಜಿನ್ ಆಫ್ ಮಾಡಿದ್ರೆ ಇಂಧನ ಉಳಿಸಬಹುದಲ್ವಾ ಇವರೇಕೆ ಹೀಗೆ ಮಾಡ್ತಾರೆ ಅಂತ ನೀವು ಊಹಿಸಿರಬಹುದು. ಆದರೆ ಇಂಜಿನ್ ಆಫ್ ಮಾಡದಿರುವ ಹಿಂದಿನ ಕಾರಣವೇ ಬೇರೆಯಾಗಿದೆ.

ಇದನ್ನು ಓದಿ : Health : ಈ ಸಸ್ಯ ಕಂಡರೆ ಬಿಡಬೇಡಿ; ಎಲ್ಲಾ ರೋಗಗಳಿಗೆ ಇದು ಬ್ರಹ್ಮಾಸ್ತ್ರ ಇದ್ದಂಗೆ.!

ತಾಂತ್ರಿಕ ತಜ್ಞರು ರೈಲುಗಳ ಇಂಜಿನ್ ಯಾಕೆ ಬಂದ್ ಮಾಡಲ್ಲ ಎಂಬುದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ. ಪದೇ ಪದೇ ಆಫ್ ಮಾಡಿ ಇಂಜಿನ್ ಆರಂಭಿಸಲು ಸಮಯದ ಜೊತೆಯಲ್ಲಿ ಅಧಿಕ ಇಂಧನ ಬೇಕಾಗುತ್ತದೆ.

ರೈಲಿನ ಡೀಸೆಲ್ ಇಂಜಿನ್ ಬಿಸಿಯಾಗಲು ಅರ್ಧ ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇಂಜಿನ್ ಬಿಸಿಯಾಗಲು ಅರ್ಧ ಗಂಟೆವರೆಗೂ ಇಂಧನ ಸುಡುತ್ತದೆ.

ಇಂಜಿನ್ ಆರಂಭವಾಗಲು ತಗಲುವ ಇಂಧನದಲ್ಲಿ ರೈಲು ಅಂದಾಜು 8 ಗಂಟೆ ಚಲಿಸುತ್ತದೆ. ಈ ಕಾರಣದಿಂದ ಗಂಟೆಗಟ್ಟಲೇ ನಿಂತಲೂ ಲೋಕೋ ಪೈಲಟ್‌ಗಳು ರೈಲಿನ ಇಂಜಿನ್ ಬಂದ್ ಮಾಡುವುದಿಲ್ಲ.

ಇದನ್ನು ಓದಿ : ವಿಡಿಯೋ : ವೈದ್ಯರಲ್ಲ, ನಿಜವಾದ ದೇವರಿವರು; ಉಸಿರು ನಿಂತ ಮಗುವಿಗೆ ಮರುಜನ್ಮ ನೀಡಿದ Doctor.!

ವಿದ್ಯುತ್ ಚಾಲಿತ ರೈಲಿನ ಇಂಜಿನ್ ಸಹ ಪದೇ ಪದೇ ಬಂದ್ ಮಾಡುವುದಿಲ್ಲ. ಒಮ್ಮೆ ರೈಲು ಚಲಿಸಲು ಆರಂಭಿಸಿದ್ರೆ, ಯಾವುದೇ ಕ್ಷಣದಲ್ಲಿ ಸಿಗ್ನಲ್ ಸಿಕ್ಕರೂ ಹೋಗಲು ಸಿದ್ಧರಾಗಿರಬೇಕು. ಈ ಕಾರಣದಿಂದಲೂ ಲೋಕೋಪೈಲಟ್ ಇಂಜಿನ್ ಆಫ್ ಮಾಡಲ್ಲ.

ಪದೇ ಪದೇ ಇಂಜಿನ್ ಆನ್/ ಆಫ್ ಮಾಡುವುದರಿಂದ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತವೆ. ಇಂಜಿನ್‌ನಲ್ಲಿರುವ ಯಂತ್ರೋಪಕರಣಗಳು ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ಇಂಜಿನ್‌ಗಳನನ್ನು ಚಾಲನೆಯಲ್ಲಿ ಇಡುವುದನ್ನು ನಿರ್ವಹಣೆಯ ಭಾಗವೆಂದು ಪರಿಗಣಿಸಲಾಗುತ್ತದೆ. ಎಂಜಿನ್ ಘಟಕಗಳಿಗೆ ಅಗತ್ಯವಿರುವ ಕನಿಷ್ಠ ತಾಪಮಾನವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಏರ್ ಸಿಸ್ಟಮ್ ಅನ್ನು ಇಂಜಿನ್‌ನಲ್ಲಿ ಇರಿಸುವುದು ಮತ್ತು ಅದರ ಹಿಂದಿನ ರೈಲು ಚಾರ್ಜ್ ಆಗುವುದು ಕೂಡ ಇಂಜಿನ್ ಆಫ್ ಮಾಡದಿರಲು ಮತ್ತೊಂದು ಕಾರಣ. ಆ ಗಾಳಿ ಇಲ್ಲದಿದ್ದರೆ ರೈಲಿನ ಬ್ರೇಕ್ ವಿಫಲವಾಗಬಹುದು. ರೈಲಿನಿಂದ ಗಾಳಿಯನ್ನು ಬಿಡುಗಡೆ ಮಾಡಿದ ನಂತರ, ರೈಲಿನ ಏರ್ ಸಿಸ್ಟಮ್ ಸಂಪೂರ್ಣವಾಗಿ ಚಾರ್ಜ್ ಆಗಲು 30 ನಿಮಿಷದಿಂದ ಒಂದು ಗಂಟೆಯವರೆಗೂ ಸಮಯ ತೆಗೆದುಕೊಳ್ಳುತ್ತದೆ. ಎಂಜಿನ್ ಸ್ವಿಚ್ ಆಫ್ ಮಾಡುವುದರಿಂದ ಈ ಸಮಯದ ಉಳಿತಾಯವಾಗುತ್ತದೆ.

ಇದನ್ನು ಓದಿ : ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸ್ಟಂಟ್‌ ಮಾಡಿದ ತಾತಪ್ಪ; Video ನೋಡಿದ್ರೆ ಬೆರಗಾಗ್ತೀರಾ.!

ಪ್ರತಿ ಸಿಗ್ನಲ್ ಅಥವಾ ನಿಲ್ದಾಣದಲ್ಲಿ ಇಂಜಿನ್ ಆಫ್/ ಆನ್ ಮಾಡಿದ್ರೆ ರೈಲು ನಿಗಧಿತ ಗುರಿ ತಲುಪಲು ಹಲವು ದಿನಗಳೇ ಬೇಕಾಗುತ್ತದೆ. ಕೆಲವು ಕಡೆ ಗೂಡ್ಸ್ ರೈಲುಗಳ ಗಂಟೆಗಟ್ಟಲೇ ನಿಂತರೂ ಲೋಕೋ ಪೈಲಟ್‌ಗಳು ಇಂಜಿನ್ ಆಫ್ ಮಾಡಲ್ಲ. ಯಾಕೆಂದರೆ ಯಾವುದೇ ಸಮಯದಲ್ಲಿ ಸಿಗ್ನಲ್ ಸಿಕ್ಕರೂ ರೈಲು ಚಲಿಸಲು ಸಿದ್ಧವಾಗಿರಬೇಕು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img